ಗ್ರಾಮದಲ್ಲಿ ಸ್ವಚ್ಛತೆ ಕಾಪಾಡಿ

ನಂ.10 ಮುದ್ದಾಪುರ ಗ್ರಾಮದಲ್ಲಿ ಆಯೋಜಿಸಿದ್ದ ಕಾಯಕ ಗ್ರಾಮ ಕಾರ್ಯಕ್ರಮದಲ್ಲಿ ತಾಪಂ ಎಡಿ ಕೆ.ಎಸ್.ಮಲ್ಲನಗೌಡ ಮಾತನಾಡಿದರು.
ನಂ.10 ಮುದ್ದಾಪುರ ಗ್ರಾಮದಲ್ಲಿ ಆಯೋಜಿಸಿದ್ದ ಕಾಯಕ ಗ್ರಾಮ ಕಾರ್ಯಕ್ರಮದಲ್ಲಿ ತಾಪಂ ಎಡಿ ಕೆ.ಎಸ್.ಮಲ್ಲನಗೌಡ ಮಾತನಾಡಿದರು.
Published on
ಕಂಪ್ಲಿ: ಗ್ರಾಮದ ಸರ್ವತೋಮುಖ ಅಭಿವೃದ್ಧಿ ಹಾಗೂ ಪ್ರಗತಿ ಸಾಧಿಸಲು ಅಧಿಕಾರಿಗಳು ಸದಾ ಜಾಗ್ರತೆ ತೋರಬೇಕೆಂದು ತಾಪಂ ಎಡಿ ಕೆ.ಎಸ್.ಮಲ್ಲನಗೌಡ ಹೇಳಿದರು.
ನಂ.10ಮುದ್ದಾಪುರ ಗ್ರಾಪಂ.ಕಚೇರಿ ಆವರಣದಲ್ಲಿ ಕಾಯಕ ಗ್ರಾಮ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಬುಧವಾರ ಮಾತನಾಡಿದರು. ಗ್ರಾಮದಲ್ಲಿ ಸ್ವಚ್ಛತೆ ಕಾಪಾಡಬೇಕು. ಶಿಕ್ಷಣದಲ್ಲಿ ಅಮೂಲಾಗ್ರ ಬದಲಾವಣೆ ಸಾಧಿಸಬೇಕು. ಸರ್ಕಾರ ಸೂಚಿಸಿದ ಎಲ್ಲ ದತ್ತಾಂಶಗಳಲ್ಲೂ ಪ್ರಗತಿ ಸಾಧಿಸಬೇಕು. ಈ ದಿಸೆಯಲ್ಲಿ ಹಿರಿಯ ಅಧಿಕಾರಿಗಳು ಗ್ರಾಪಂಗಳನ್ನು ದತ್ತು ಪಡೆದು ಸಮಗ್ರವಾಗಿ ಅಭಿವೃದ್ಧಿಗೊಳಿಸುವ ಉದ್ದೇಶ ಹೊಂದಲಾಗಿದೆ ಎಂದರು.
ಪಿಡಿಒ ಶಿಲ್ಪಾರಾಣಿ ಮಾತನಾಡಿ, ಹೆಚ್ಚುವರಿ ಗ್ರಂಥಾಲಯವನ್ನು ಕಣವಿ ತಿಮ್ಮಲಾಪುರ ಗ್ರಾಮದಲ್ಲಿ ಆರಂಭಿಸಲು ಉದ್ದೇಶಿಸಿದ್ದು, ಕಾರ್ಯ ಪ್ರಗತಿಯಲ್ಲಿದೆ. ಗ್ರಾಪಂ ವ್ಯಾಪ್ತಿಯಲ್ಲಿ ನಾಲ್ಕು ಶುದ್ಧ ಕುಡಿವ ನೀರಿನ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಕೂಸಿನ ಮನೆ ಸಮರ್ಪಕವಾಗಿ ನಡೆಯುತ್ತಿದೆ. ಅರಿವು ಕೇಂದ್ರಗಳನ್ನು ಡಿಜಿಟಲೀಕರಣಗೊಳಿಸಿ ಮಕ್ಕಳನ್ನು ನೋಂದಾಯಿಸಿದೆ ಎಂದರು.
ಗ್ರಾಪಂ ಅಧ್ಯಕ್ಷೆ ಸೋಮೇಶ್ವರಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಜಡೆ ಸಾವಿತ್ರಿ, ಸದಸ್ಯರಾದ ಡಿ.ರಾಮಯ್ಯ, ಗೌರಮ್ಮ, ಒರವಾಯಿ ಮಹಾದೇವಪ್ಪ, ವನಜಾಕ್ಷಿ, ನಾಯಕರ ರೇಣುಕಾ, ಎಡಿಪಿಆರ್ ಶ್ರೀಶೈಲಗೌಡ, ಕೃಷಿ, ತೋಟಗಾರಿಕೆ ಸಖಿ, ಆಶಾ ಅಂಗನವಾಡಿ ಕಾರ್ಯಕರ್ತೆಯರು ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net