ಫೆ.4 ರಂದು ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವ

ಹೂವಿನಹಡಗಲಿ ತಾಲೂಕಿನ ಸುಕ್ಷೇತ್ರ ಮೈಲಾರದ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ.
ಹೂವಿನಹಡಗಲಿ ತಾಲೂಕಿನ ಸುಕ್ಷೇತ್ರ ಮೈಲಾರದ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ.
Published on

ಪ್ರಮುಖ ಮುಖ್ಯಾಂಶಗಳು

  • ಜಾತ್ರೋತ್ಸವಕ್ಕೆ
  • ಚಾಲನೆ
  • ಆಕಳಿನ
ಹೂವಿನಹಡಗಲಿ: ತಾಲೂಕಿನ ಸುಕ್ಷೇತ್ರ ಮೈಲಾರದ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ ಕಾರ್ಣಿಕೋತ್ಸವ ಫೆ.4ರಂದು ಜರುಗಲಿದೆ.
ಇಂದಿನಿಂದ ಜಾತ್ರೋತ್ಸವದ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ದೊರಕಲಿದ್ದು, ಜ.25ರಂದು ರಥಸಪ್ತಮಿಯಂದು ದೇವಸ್ಥಾನದ ರಂಗಮಂಟಪದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಆಕಳಿನ ಹಾಲನ್ನು ಉಕ್ಕಿಸಲಾಗುತ್ತದೆ. ಇದರೊಂದಿಗೆ ಜಾತ್ರೋತ್ಸವಕ್ಕೆ ಚಾಲನೆ ದೊರೆಯುತ್ತದೆ. ಅಂದಿನಿಂದ 11ದಿನಗಳ ವರೆಗೂ ಧಾರ್ಮಿಕ ಕಾರ್ಯಗಳು ಜರುಗುತ್ತವೆ.
ಕಾರ್ಣಿಕ ನುಡಿಯುವ ಗೊರವಯ್ಯ ಡೆಂಕಣ ಮರಡಿಯಲ್ಲಿ 11 ದಿನ ವ್ರತಾಚರಣೆಯಲ್ಲಿರುತ್ತಾರೆ. ಫೆ.1ರಂದು ಭರತ ಹುಣ್ಣಿಮೆಯಂದು ದೇವರಿಗೆ ವಿಶೇಷ ಪೂಜೆ, ಫೆ.2 ರಂದು ಧ್ವಜಾರೋಹಣ, ಫೆ.3 ರಂದು ತ್ರಿಶೂಲ ಪೂಜೆ ನಡೆಯಲಿದೆ. ಫೆ.4ರಂದು ಪ್ರಾತಃಕಾಲ 5 ಗಂಟೆಗೆ ಶ್ರೀ ಸ್ವಾಮಿಯು ಮಲ್ಲಾಸುರನ ಸಂಹಾರಕ್ಕಾಗಿ ಡೆಂಕಣ ಮರಡಿಗೆ ಗುಪ್ತಮೌನ ಸವಾರಿ ನಡೆಯಲಿದೆ. ಜತೆಗೆ ಸಂಜೆ 5.30ಕ್ಕೆ ಮೈಲಾರಲಿಂಗೇಶ್ವರ ಸ್ವಾಮಿಯ ಕಾರ್ಣಿಕ ನುಡಿಯುವ ಗೊರವಯ್ಯನವರಿಂದ ಕಾರ್ಣಿಕ ನುಡಿ ಜರುಗುವುದು.
ಫೆ.5ರಂದು ಮೈಲಾರಲಿಂಗೇಶ್ವರ ಸ್ವಾಮಿಯು ಹೆಗ್ಗಪ್ಪನ ಮರಡಿಗೆ ಉತ್ಸವ ಹೊರಡುವ ಮೂಲಕ ಸಂಜೆ ಕಂಚಿವೀರರಿಂದ ಶಸ್ತ್ರ ಪವಾಡ ಗೊರವಯ್ಯನವರಿಂದ ಸಪರಳಿ ಪವಾಡಗಳು ಜರುಗುತ್ತವೆ. ಭಾನುವಾರ ಉಕ್ಕಿಸಿದ ಹಾಲು ಯಾವ ದಿಕ್ಕಿಗೆ ಹರಿಯುತ್ತದೆಯೋ ಆ ದಿಕ್ಕಿನಲ್ಲಿ ಮಳೆ, ಬೆಳೆ ಸಮೃದ್ಧಿಯಿಂದಾಗುತ್ತದೆ ಎಂಬ ಪ್ರತೀತಿ ಇದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net