ಮಹಾದೇವತಾತವರ ಮಹಾರಥೋತ್ಸವ

ಬಳ್ಳಾರಿಯ ಹೊರವಲಯದಲ್ಲಿರುವ ಅಲ್ಲಿಪುರ ಶ್ರೀಸದ್ಗುರು ಮಹಾದೇವತಾತನವರ ಮಹಾರಥೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು
ಬಳ್ಳಾರಿಯ ಹೊರವಲಯದಲ್ಲಿರುವ ಅಲ್ಲಿಪುರ ಶ್ರೀಸದ್ಗುರು ಮಹಾದೇವತಾತನವರ ಮಹಾರಥೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು
Published on

ಪ್ರಮುಖ ಮುಖ್ಯಾಂಶಗಳು

  • ರಥೋತ್ಸವ
  • ಅಲಂಕೃತ
  • ಮಠಾಧೀಶರು
ಅಲ್ಲಿಪುರ ಮಹಾದೇವತಾತವರ ಮಹಾರಥೋತ್ಸವ
ಬಳ್ಳಾರಿ : ನಗರ ಹೊರವಲಯದ ಅಲ್ಲಿಪುರ ಮಠದಲ್ಲಿ ಶ್ರೀಸದ್ಗುರು ಮಹಾದೇವತಾತನವರ ಮಹಾರಥೋತ್ಸವ ಸಂಜೆ ಸಾವಿರಾರು ಭಕ್ತರ ಸಮಕ್ಷಮದಲ್ಲಿ ಶ್ರದ್ಧಾಭಕ್ತಿಯಿಂದ ನೆರವೇರಿತು.
ರಥೋತ್ಸವ ಹಿನ್ನಲೆಯಲ್ಲಿ ಶ್ರೀಮಠವನ್ನು ವಿವಿಧ ಪುಷ್ಪಗಳಿಂದ ಅಲಂಕೃತಗೊಳಿಸಲಾಗಿತ್ತು. ಬೆಳಗ್ಗೆಯಿಂದಲೇ ಮಠದಲ್ಲಿ ನಾನಾ ಪೂಜಾ ಕೈಂಕರ್ಯಗಳು ಜರುಗಿದವು. ಸ್ಥಳೀಯರು ಸೇರಿದಂತೆ ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ಭಕ್ತರು ದೇವರ ದರ್ಶನ ಪಡೆದರು. ರಥೋತ್ಸವ ಹಿನ್ನಲೆಯಲ್ಲಿ ಬೆಳಗಿನವ ಜಾವ ಮಠದ ಮುಂಭಾಗದಲ್ಲಿ ಮಡಿತೇರು ಎಳೆಯಲಾಯಿತು. ಮಹಾದೇವತಾತನವರ ಮೂರ್ತಿಗೆ ವಿಶೇಷ ಪೂಜೆ ನಡೆಸಿದ ಬಳಿಕ ಮೂರ್ತಿಯನ್ನು ತೇರಿನಲ್ಲಿಟ್ಟು ಭಕ್ತ ಸಮೂಹದ ಜಯಘೋಷಗಳೊಂದಿಗೆ ಮಡಿತೇರನ್ನು ಎಳೆದು ಸಂಪನ್ನಗೊಳಿಸಲಾಯಿತು. ಮಠಾಧೀಶರು ಹಾಗೂ ಗ್ರಾಮದ ಮುಖಂಡರು ರಥೋತ್ಸವಕ್ಕೆ ಪೂಜೆ ಸಲ್ಲಿಸಿದ ಬಳಿಕ ಮಂಗಳವಾದ್ಯಗಳೊಂದಿಗೆ ಜಿಲ್ಲೆ ಸೇರಿದಂತೆ ನಾನಾ ಕಡೆಯ ನೂರಾರು ಜನ ಭಕ್ತ ಸಮೂಹ ಸಂಜೆ ರಥವನ್ನು ಎಳೆದು ತಂದರು. ಮಾನ್ವಿ ತಾಲೂಕು ಬೆಟ್ಟದೂರಿನ ಶ್ರೀಮಹಾದೇವಸ್ವಾಮೀಜಿ ಡಿ.21ರಿಂದ 29ರವರೆಗೆ ಪ್ರತಿದಿನ ಸಂಜೆ ಬಸವಲಿಂಗ ಕವಿ ವಿರಚಿತ ‘ಶ್ರೀಗುರುಕೊಟ್ಟೂರು ಬಸವೇಶ್ವರ’ ಪುರಾಣ ಪ್ರವಚನ ನೀಡಿದರು. ಡಿ. 31ರಂದು ಬುಧವಾರ ಸಂಜೆ ಸಾಂಪ್ರದಾಯಿಕ ‘ಕಡುಬಿನ ಕಾಳಗ’ ನಡೆಯುವುದರೊಂದಿಗೆ ಕಾರ್ಯಕ್ರಮಗಳು ಸಂಪನ್ನಗೊಳ್ಳಲಿವೆ. ರಥೋತ್ಸವಕ್ಕೆ ಬರುವ ಸಹಸ್ರಾರು ಭಕ್ತರಿಗೆ ಮಠದ ದಾಸೋಹ ಟ್ರಸ್ಟ್ ವತಿಯಿಂದ ವಿಶೇಷ ಊಟದ ವ್ಯವಸ್ಥೆ ಮಾಡಲಾಗಿತ್ತು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತನು, ಮನ, ಧನಗಳಿಂದ ಸೇವೆ ಸಲ್ಲಿಸಿ ಶ್ರೀತಾತನವರ ಕೃಪೆಗೆ ಪಾತ್ರರಾದರು.
30 ಎರ‌್ರಿಸ್ವಾಮಿ 06
ಬಳ್ಳಾರಿಯ ಹೊರವಲಯದಲ್ಲಿರುವ ಅಲ್ಲಿಪುರ ಶ್ರೀಸದ್ಗುರು ಮಹಾದೇವತಾತನವರ ಮಹಾರಥೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು.
======
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net