ಅಷ್ಟೋತ್ತರ ಸಹಿತ ಕ್ಷೀರಾಭಿಷೇಕ

ಹೊಸಪೇಟೆಯ ರಾಣಿಪೇಟೆ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ರಾಯರ ಬೃಂದಾವನಕ್ಕೆ ವಿಶೇಷ ಅಲಂಕಾರ ನೆರವೇರಿಸಲಾಯಿತು.
ಹೊಸಪೇಟೆಯ ರಾಣಿಪೇಟೆ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ರಾಯರ ಬೃಂದಾವನಕ್ಕೆ ವಿಶೇಷ ಅಲಂಕಾರ ನೆರವೇರಿಸಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಭಕ್ತರಿಗೆ ತೀರ್ಥ ಪ್ರಸಾದ ವಿನಿಯೋಗ
  • ವೃಂದಾವನಕ್ಕೆ ವಿಶೇಷ ಅಲಂಕಾರ
  • 355ನೇ ಆರಾಧನೆಯ ಮಧ್ಯಾರಾಧನೆ ಶಾಸ್ತ್ರೋಕ್ತ

ಹೊಸಪೇಟೆ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ರಾಯರ ಮಠಗಳಲ್ಲಿ ಭಾನುವಾರ ಶ್ರೀರಾಘವೇಂದ್ರ ಸ್ವಾಮಿಗಳ 355ನೇ ಆರಾಧನೆಯ ಮಧ್ಯಾರಾಧನೆ ಶಾಸ್ತ್ರೋಕ್ತವಾಗಿ ನೆರವೇರಿತು.

ವಿಜಯ ಚಿತ್ರಮಂದಿರ ಸಮೀಪದ ರಾಯರ ಮಠದಲ್ಲಿ ರಾಯರ ಬೃಂದಾವನಕ್ಕೆ ಅಷ್ಟೋತ್ತರ ಸಹಿತ ಕ್ಷೀರಾಭಿಷೇಕ ನೆರವೇರಿಸಲಾಯಿತು. ನಂತರ ಫಲ ಪಂಚಾಮೃತಾಭಿಷೇಕ, ಸರ್ವಸೇವಾ, ಕನಕಾಭಿಷೇಕ, ಮಹಾನೈವೇದ್ಯ, ಹಸ್ತೋದಕ ನಡೆಸಲಾಯಿತು. ಮಹಾಮಂಗಳಾರತಿ ನೆರವೇರಿಸಿ ಭಕ್ತರಿಗೆ ಪ್ರಸಾದ ವಿವರಣೆ ಮಾಡಲಾಯಿತು. ಬೃಂದಾವನಕ್ಕೆ ರಜತ, ರೇಷ್ಮೆ ಸೇರಿದಂತೆ ವಿವಿಧ ಬಗೆಯ ಹೂವುಗಳಿಂದ ವಿಶೇಷ ಅಲಂಕಾರ ಮಾಡಲಾಯಿತು. ಮಠಾಧಿಕಾರಿ ಭೀಮಸೇನಾಚಾರ್ಯ, ಪವನಾಚಾರ್ಯ, ಅನಿಲಾಚಾರ್ಯ, ವಿಜಿಯೀಂದ್ರ ದೇಸಾಯಿ, ಪವನ್ ಕುಮಾರ್ ಇತರರಿದ್ದರು.
ರಾಣಿಪೇಟೆ, ಗಾಂಧಿ ಕಾಲನಿ ರಾಯರ ಮಠ ಹಾಗೂ ಕಾಶಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶ್ರೀ ರಾಘವೇಂದ್ರ ಗುರುಸಾರ್ವಭೌಮರ ಮಧ್ಯಾರಾಧನೆ ನಡೆಯಿತು. ಈ ನಿಮಿತ್ತ ಫಲ ಪಂಚಾಮೃತಾಭಿಷೇಕ, ಸರ್ವಸೇವಾ, ಕನಕಾಭಿಷೇಕ, ಮಹಾನೈವೈದ್ಯ, ಹಸ್ತೋದಕ, ಅಲಂಕಾರ ಪಂಕ್ತಿ, ಭಕ್ತರಿಗೆ ಅನ್ನದಾನ, ಭಜನೆ, ಕೀರ್ತನೆ, ಉಪನ್ಯಾಸ, ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.
ಮಠದ ವಿಭಾಗೀಯ ವ್ಯವಸ್ಥಾಪಕ ಗುರುರಾಜ್ ದಿಗ್ಗಾವಿ, ಮಾರುತಿ ಆಚಾರ್ಯ, ವಿಜಯಕುಮಾರ್, ವ್ಯವಸ್ಥಾಪಕ ತಿರುಮಲೇಶ, ವಿಚಾರಣಕರ್ತ ನರಸಿಂಹ ಮೂರ್ತಿ, ಪ್ರಮುಖರಾದ ಗೋಪಾಲಕೃಷ್ಣ ಗೌಡ, ರಾಘವೇಂದ್ರ ಆಚಾರ್ಯ, ಶ್ರೀನಿವಾಸಾಚಾರ್ಯ ಇತರರಿದ್ದರು.
ತಾಲೂಕಿನ ಕಮಲಾಪುರದ ರಾಯರ ಮಠದಲ್ಲೂ ಮಧ್ಯಾರಾಧನೆ ಜರುಗಿತು. ಕನಕಾಭಿಷೇಕ, ರಾಯರ ಪಾದುಕ ಪೂಜೆ, ನೈವೇದ್ಯ, ಮಹಾಮಂಗಳಾರತಿ, ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು. ವ್ಯವಸ್ಥಾಪಕ ಗುಂಜಳ್ಳಿ ಟೀಕಾಚಾರ್ಯ, ಮಂತ್ರಾಲಯ ಗುರುಸಾರ್ವಭೌಮ ದಾಸ ಸಾಹಿತ್ಯ ಪ್ರಾಜೆಕ್ಟ್ ಜಿಲ್ಲಾ ಕೋ-ಆರ್ಡಿನೇಟರ್ ಅನಂತ ಪದ್ಮನಾಭ, ವಿಚಾರಣಕರ್ತ ನಾಗರಾಜ್ ರಾವ್ ಕರಣಂ, ಶಿರೆಕೊಳ್ಳ ಗುರುರಾಜ್ ಆಚಾರ್ಯ, ಹರಿಗೌಡ, ರಘು, ಗೋಪಾಲ್, ಮುರಳಿ, ಪಾಂಡುರಂಗ, ವಾದಿರಾಜ, ಸುತರಾಜ್, ಶ್ರೀನಿಧಿ, ನರಹರಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net