ಕೊಟ್ಟೂರು: ಪಟ್ಟಣದಲ್ಲಿ ಟ್ರಾೃಕ್ಟರ್‌ಗಳು ಎಂಸ್ಯಾಂಡ್ (ಮರಳು) ಓವರ್ ಲೋಡ್ ಮಾಡಿಕೊಂಡು ಮೇಲೊದಿಕೆ ಇಲ್ಲದೇ ರಸ್ತೆಯಲ್ಲಿ ಸಾಗುತ್ತಿದ್ದರಿಂದ ಹಿಂಬದಿ ವಾಹನ ಸವಾರರಿಗೆ ಧೂಳಿನ ಕಣಗಳಿಂದ ಕಿರಿಕಿರು ಉಂಟಾಗಿದೆ.
ಟ್ರಾೃಕ್ಟರ್ ಹಿಂದೆ ಹೋಗುವ ಪಾದಚಾರಿಗಳು, ಬೈಸಿಕಲ್-ಬೈಕ್ ಸವಾರರ ಮೈ ಮೇಲೆ ಮರಳಿನ ಮಜ್ಜನವಾಗುವ ಜತೆಗೆ ಕಣ್ಣಿಗೆ ಎರಚಿ ತೊಂದರೆ ಅನುಭವಿಸುವಂತಾಗಿದೆ. ಎಂಸ್ಯಾಂಡ್ ಗಾಳಿಗೆ ಹಾರದಂತೆ ಹೊದಿಕೆ ಹಾಕಿ ಸಾಗುವಂತೆ ಟ್ರಾೃಕ್ಟರ್ ಚಾಲಕರಿಗೆ ತಿಳಿ ಹೇಳಿದರೆ ವಾಗ್ವಾದಕ್ಕಿಳಿಯುತ್ತಿದ್ದಾರೆ. ಹಾಗೆಯೇ ಸಾಗುವುದಾಗಿ ಉದ್ಧಟತನ ತೋರುತ್ತಿದ್ದಾರೆ. ಇದರಿಂದ ರಸ್ತೆಯಲ್ಲಿ ಸಂಚರಿಸಲು ಸಂಕಷ್ಟ ಅನುಭವಿಸುವಂತಾಗಿದೆ.
ಪೊಲೀಸ್ ಇಲಾಖೆ ಕೂಡಲೇ ಓವರ್‌ಲೋಡ್ ಮಾಡಿಕೊಂಡು ಎಂಸ್ಯಾಂಡ್ ಸಾಗಿಸುವ ವಾಹನಗಳಿಗೆ ಕಡ್ಡಾಯವಾಗಿ ಮೇಲೊದಿಕೆ ಹಾಕುವಂತೆ ಸೂಚಿಸಬೇಕು. ಜತೆಗೆ ಗಾಳಿಗೆ ಹಾರುವ ಮರಳಿನ ಕಣಗಳಿಂದ ಆಗುವ ತೊಂದೆರ ಬಗ್ಗೆ ಟ್ರಾೃಕ್ಟರ್ ಚಾಲಕರಿಗೆ ಜಾಗೃತಿ ಮೂಡಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.