ಚಂದ್ರಗ್ರಹಣ, ದೇವಸ್ಥಾನಗಳು ಬಂದ್

ಚಂದ್ರಗ್ರಹಣ, ದೇವಸ್ಥಾನಗಳು ಬಂದ್
ಚಂದ್ರಗ್ರಹಣ, ದೇವಸ್ಥಾನಗಳು ಬಂದ್
Published on

ಪ್ರಮುಖ ಮುಖ್ಯಾಂಶಗಳು

  • ಚಂದ್ರಗ್ರಹಣ
ಬಳ್ಳಾರಿ : ಖಗ್ರಾಸ ಚಂದ್ರಗ್ರಹಣ ಹಿನ್ನೆಲೆ ಜಿಲ್ಲೆಯ ಕೋಟೆ ಮಲ್ಲೇಶ್ವರ, ಕುಮಾರಸ್ವಾಮಿ, ಅಮೃತೇಶ್ವರ, ಕುರುಗೋಡು ದೊಡ್ಡಬಸವೇಶ್ವರ ಸೇರಿದಂತೆ ಬಹುತೇಕ ದೇವಸ್ಥಾನಗಳನ್ನು ಗ್ರಹಣಕ್ಕೂ ಆರು ಗಂಟೆಯ ಮುನ್ನವೇ ಮುಚ್ಚಲಾಗಿತ್ತು.
ಆದರೆ, ಜಿಲ್ಲೆಯ ಆರಾಧ್ಯ ದೈವ ಶ್ರೀಕನಕ ದುರ್ಗಮ್ಮ ದೇವಸ್ಥಾನವನ್ನು ಮಾತ್ರ ಮುಚ್ಚದೆ ಯಥಾರೀತಿಯಂತೆ ಧಾರ್ಮಿಕ ವಿಧಿವಿಧಾನಗಳು ಮುಂದುವರೆದವು. ಗ್ರಹಣದ ನಂತರ ಮುಚ್ಚಿರುವ ದೇವಸ್ಥಾನಗಳಲ್ಲಿ ಗೋಮೂತ್ರ ಸಿಂಪಡಿಸಿ, ಒಣಗಿದ ಟೆಂಗಿನ ಗೆರೆಗಳನ್ನು ಸುಡಲಾಯಿತು. ಬಳಿಕ ಐದು ಬಾರಿ ನೀರು ಹಾಕಿ ದೇವಸ್ಥಾನವನ್ನು ಶುದ್ಧಗೊಳಿಸಿ, ಬಳಿಕ ಅಭಿಷೇಕ, ವಿಶೇಷ ಪೂಜೆಗಳನ್ನು ಮಾಡುವ ಮೂಲಕ ದೇವಸ್ಥಾನವನ್ನು ಭಕ್ತರ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು. ಗ್ರಹಣ ನಿಮಿತ್ತ ಕುರುಗೋಡು ದೊಡ್ಡಬಸವೇಶ್ವರ ತೇರನ್ನು ಮಧ್ಯಾಹ್ನದ ಸುಡು ಬಿಸಿಲಿನಲ್ಲಿಯೇ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಎಳೆಯಲಾಯಿತು.
==
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net