ಬಳ್ಳಾರಿ : ಅಮೆರಿಕ ಬೆಂಬಲಿತ ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧದ ಹಿನ್ನೆಲೆ ನಗರಾದ್ಯಂತ ಆಟೋ ಎಲ್‌ಪಿಜಿ ದರ ಏರಿಕೆಯಾಗಿದೆ. ನಗರದಲ್ಲಿ ಹದಿನೈದು ದಿನಗಳ ಹಿಂದೆ ಪ್ರತಿ ಲೀಟರ್‌ಗೆ 64 ರೂ. ಇದ್ದ ಎಲ್‌ಪಿಜಿ ದರ, ಇದೀಗ ಬರೊಬ್ಬರಿ 84 ರೂ. ಬೆಲೆ ಮಾರಾಟ ಮಾಡುತ್ತಿದ್ದಾರೆ. ಅಂದರೆ ಲೀಟರ್‌ಗೆ 20ರಿಂದ 24 ರೂ. ಹೆಚ್ಚಳವಾಗಿದ್ದು, ದೈನಂದಿನ ದುಡಿಮೆ ನಂಬಿಕೊಂಡಿರುವ ಆಟೋ ಚಾಲಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.