ಎಲ್ಪಿಜಿ ಗ್ರಾಹಕರಲ್ಲಿ ಆತಂಕ ಬೇಡ

ಕುರುಗೋಡಿನಲ್ಲಿ ಭಾರತ್ ಗ್ಯಾಸ್ ಗೋದಾಮಿಗೆ ತಹಸೀಲ್ದಾರ್ ನರಸಪ್ಪ, ಗ್ರೇಡ್ 2 ತಹಸೀಲ್ದಾರ್ ಮಲ್ಲೇಶಪ್ಪ ಭೇಟಿ ನೀಡಿ ದಾಸ್ತನು ಪರಿಶೀಲಿಸಿದರು.
ಕುರುಗೋಡಿನಲ್ಲಿ ಭಾರತ್ ಗ್ಯಾಸ್ ಗೋದಾಮಿಗೆ ತಹಸೀಲ್ದಾರ್ ನರಸಪ್ಪ, ಗ್ರೇಡ್ 2 ತಹಸೀಲ್ದಾರ್ ಮಲ್ಲೇಶಪ್ಪ ಭೇಟಿ ನೀಡಿ ದಾಸ್ತನು ಪರಿಶೀಲಿಸಿದರು.
Published on
ಕುರುಗೋಡು: ತಾಲೂಕಿನಲ್ಲಿ ಅಗತ್ಯ ಅಡುಗೆ ಅನಿಲ ದಾಸ್ತಾನಿದ್ದು, ಬೇಡಿಕೆ ಅನುಸಾರ ಪೂರೈಸಲಾಗುತ್ತದೆ. ಸಾರ್ವಜನಿಕರು ವದಂತಿಗಳಿಗೆ ಕಿವಿಗೊಡಬಾರದು ಎಂದು ತಹಶೀಲ್ದಾರ್ ನರಸಪ್ಪ ತಿಳಿಸಿದರು.
ಪಟ್ಟಣದಲ್ಲಿರುವ ಭಾರತ್ ಗ್ಯಾಸ್ ಗೋದಾಮಿಗೆ ಮಂಗಳವಾರ ಭೇಟಿ ನೀಡಿ ದಾಸ್ತನು ಪರಿಶೀಲಿಸಿ ಮಾತನಾಡಿದರು. ಕಳೆದ ನಾಲ್ಕೈದು ದಿನದಿಂದ ಸಕಾಲಕ್ಕೆ ಸಿಲಿಂಡರ್ ಬಾರದೆ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಸದ್ಯ ಅಗತ್ಯ ಅಡುಗೆ ಅನಿಲ ಸಂಗ್ರಹವಿದ್ದು, ಗ್ರಾಹಕರು ಆತಂಕ ಪಡುವ ಅಗತ್ಯ ಇಲ್ಲ. ಶಿಕ್ಷಣ ಕೇಂದ್ರಗಳಿಗೂ ಪೂರೈಸಲಾಗುವುದು. ಈ ಹಿಂದಿನಂತೆ ವಾಹನದ ಮೂಲಕ ಮನೆಗೆ ಸಿಲಿಂಡರ್ ತಲುಪಿಸುವ ವ್ಯವಸ್ಥೆ ಮುಂದುವರಿಯಲಿದೆ. ಹೀಗಾಗಿ ಅಂಗಡಿ ಮುಂದೆ ಜನರು ನಿಲ್ಲುವ ಅವಶ್ಯ ಇಲ್ಲ ಎಂದು ತಿಳಿಸಿದರು.
ಗ್ರೇಡ್ 2 ತಹಸೀಲ್ದಾರ್ ಮಲ್ಲೇಶಪ್ಪ ಮಾತನಾಡಿ, ಅಮೆರಿಕ, ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧದಿಂದಾಗಿ ಅಡುಗೆ ಅನಿಲ ಆಮದು ನಿಲ್ಲುವ ವದಂತಿ ಜನ ಸಾಮಾನ್ಯರ ಆತಂಕಕ್ಕೆ ಕಾರಣವಾಗಿದೆ. ತಾಲೂಕಿನಲ್ಲಿ ಅಭಾವ ಇಲ್ಲ. ಎಂದಿನಂತೆ ಸುಲಭವಾಗಿ ಸಿಲಿಂಡರ್ ದೊರೆಯಲಿದೆ ಎಂದು ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net