ಹರಪನಹಳ್ಳಿ ತಾಲೂಕಿನ ಕಣಿವಿಹಳ್ಳಿ ಗ್ರಾಮದಲ್ಲಿ ಬಸವ ಜಯಂತಿ ನಿಮಿತ್ತ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ನೀಲಗುಂದ ಗುಡ್ಡದ ವಿರಕ್ತ ಮಠದ ಚನ್ನಬಸವ ಶಿವಯೋಗಿ ಮಾತನಾಡಿದರು. ಪ್ರಮುಖರಾದ ಕೊಟ್ರಯ್ಯ ಸ್ವಾಮಿ, ಸ್ನೇಹಜೀವಿ ಸಮಾಜಮುಖಿ ಟ್ರಸ್ಟ್ ಅಧ್ಯಕ್ಷ ಗೋಣಿಸ್ವಾಮಿ, ಉಪಾಧ್ಯಕ್ಷ ಎಂ.ಪ್ರಸಾದ್, ವೈ.ಡಿ.ಗೌರಮ್ಮ ಅಣ್ಣಪ್ಪ ಇತರರಿದ್ದರು.
ಹರಪನಹಳ್ಳಿ: ಸತಿ-ಪತಿ ಅರಿತು ಬಾಳಿದರೆ ಸಂಸಾರ ಸುಂದರವಾಗಿರುತ್ತದೆ ಎಂದು ನೀಲಗುಂದ ಗುಡ್ಡದ ವಿರಕ್ತ ಮಠದ ಚನ್ನಬಸವ ಶಿವಯೋಗಿಗಳು ಹೇಳಿದರು.
ಕಣಿವಿಹಳ್ಳಿ ಗ್ರಾಮದಲ್ಲಿ ಸ್ನೇಹಜೀವಿ ಸಮಾಜಮುಖಿ ಟ್ರಸ್ಟ್ ಹಾಗೂ ಗ್ರಾಮಸ್ಥರ ಸಹಯೋಗದಲ್ಲಿ ಬಸವ ಜಯಂತಿ ನಿಮಿತ್ತ ಸೋಮವಾರ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅತ್ತೆ-ಸೊಸೆ ಮಧ್ಯೆ ಬಿರುಕು ಮೂಡದಂತೆ ಜೀವಿಸಿದರೆ ಸಂಸಾರ ಸುಗಮವಾಗುತ್ತದೆ. ಗ್ರಾಮದ ಸರ್ವಧರ್ಮೀಯರು ಒಗ್ಗೂಡಿ ಸಾಮೂಹಿಕ ಕಾರ್ಯಕ್ರಮ ಯಶಸ್ವಿಗೊಳಿಸಿರುವುದು ಶ್ಲಾಘನೀಯ.
ನವ ದಂಪತಿ ಸರಿ, ತಪ್ಪುಗಳನ್ನು ಅರಿತು ಸುಂದರ ಸಂಸಾರ ನಡೆಸಬೇಕು. ತವರಿನಿಂದ ಬಂದ ನಂತರ ಅತ್ತೆ, ಮಾವ ಅವರನ್ನು ತಂದೆ-ತಾಯಿ ಎಂದು ಭಾವಿಸಿದರೆ ಸಂಸಾರ ಸುಖಿಯಾಗಿರುತ್ತದೆ ಎಂದರು.
13 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟವು. ಪ್ರಮುಖರಾದ ಕರಡಿ ಹುಚ್ಚಪ್ಪ, ಹರಪನಹಳ್ಳಿ ಮಂಜು, ಒ.ರಮೇಶ, ಕಂಚೀಕೆರೆ, ಓಬಳಾಪುರ ಪರುಸಪ್ಪ, ಪೂಜಾರ ಗೋಣೆಪ್ಪ ಇತರರಿದ್ದರು.