ಸನಾತನ ಧರ್ಮದ ಆಶಯದಂತೆ ಜೀವಿಸಿ

ಸಂಡೂರಿನಲ್ಲಿ ಆಯೋಜಿಸಿದ ಹಿಂದೂ ಸಮ್ಮೇಳನದಲ್ಲಿ ಮಕ್ಕಳು ಭರತ ನಾಟ್ಯ ಪ್ರದರ್ಶಿಸಿದರು. ಶೃಂಗೇರಿ ಮಠದ ಅಭಿನವ ಶಂಕರ ಭಾರತಿ ಸ್ವಾಮೀಜಿ, ಬಂಜಾರ ಪೀಠದ ಮಹಾರಾಜ ತಿಪ್ಪೇಸ್ವಾಮೀಜಿ ಇತರರಿದ್ದರು.
ಸಂಡೂರಿನಲ್ಲಿ ಆಯೋಜಿಸಿದ ಹಿಂದೂ ಸಮ್ಮೇಳನದಲ್ಲಿ ಮಕ್ಕಳು ಭರತ ನಾಟ್ಯ ಪ್ರದರ್ಶಿಸಿದರು. ಶೃಂಗೇರಿ ಮಠದ ಅಭಿನವ ಶಂಕರ ಭಾರತಿ ಸ್ವಾಮೀಜಿ, ಬಂಜಾರ ಪೀಠದ ಮಹಾರಾಜ ತಿಪ್ಪೇಸ್ವಾಮೀಜಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪೂಜಿಸಿ
  • ಹಿಂದೂ
  • ಸಮಾಜ
ಸಂಡೂರು: ಜಾತಿ ಭೇದ ಮರೆತು ಹಿಂದೂಗಳು ಸಂಘಟಿತರಾಗಬೇಕು ಎಂದು ಕರ್ನಾಟಕ ಉತ್ತರ ಪ್ರಾಂತ ಮುಖ್ಯ ವಕ್ತಾರ ಗೋವರ್ಧನರಾವ್ ಹೇಳಿದರು.
ಸ್ಥಳೀಯ ಯಶವಂತ ವಿಹಾರ ಮೈದಾನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಹಿಂದೂ ಸಮ್ಮೇಳನದಲ್ಲಿ ಮಾತನಾಡಿದರು. ಹಿಂದೂ ಸಮಾಜದ ರಕ್ಷಣೆಗೆ ಎಲ್ಲರೂ ಕೈಜೋಡಿಸಬೇಕು. ಭಾರತ ಮಾತೆಯನ್ನು ಪೂಜಿಸಿ ಹಿಂದೂ ಸಮಾಜದ ವೀರತ್ವ ಸಾರಬೇಕು. ಭಾರತ ನಡೆಯನ್ನು ಇತರ ರಾಷ್ಟ್ರಗಳು ಅನುಸರಿಸುತ್ತವೆ. ಸನಾತನ ಧರ್ಮ ಸದಾಚಾರದಿಂದ ಬದುಕಿ, ಸತ್ಯದ ಹಾದಿಯಲ್ಲಿ ನಡೆದು ಅಂತಿಮವಾಗಿ ಭಗವಂತನನ್ನು ಸೇರುವ ಮಾರ್ಗವಾಗಿದೆ ಎಂದರು.
ಶೃಂಗೇರಿ ಮಠದ ಅಭಿನವ ಶಂಕರ ಭಾರತಿ ಸ್ವಾಮೀಜಿ ಮಾತನಾಡಿ, ಆದಿಗುರು ಶಂಕರಾಚಾರ್ಯರು ದೇಶದ್ಯಂತ ಪಾದಯಾತ್ರೆ ಮಾಡಿ ಮಠ-ಮಾನ್ಯಗಳನ್ನು ಸ್ಥಾಪಿಸಿದರು. ಇದು ಅವತಾರ ಪುರುಷರಿಂದ ಮಾತ್ರ ಸಾಧ್ಯ. ಸ್ವಾಮಿ ವಿವೇಕಾನಂದರು ಅಮೆರಿಕಾದ ಚಿಕಾಗೋದಲ್ಲಿ ಮಹತ್ವಪೂರ್ಣ ಭಾಷಣ ಮಾಡಿ ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡುವಂತೆ ಮಾಡಿದರು. ಬಸವಣ್ಣ, ಮಹಾತ್ಮಗಾಂಧೀ ಶಾಂತಿ, ಅಹಿಂಸೆ, ಸಹೋದರತ್ವ, ಸಹಬಾಳ್ವೆಯನ್ನು ಸಾರಿದರು ಎಂದರು. ಮಹಾರಾಜ ತಿಪ್ಪೇಸ್ವಾಮೀಜಿ, ಪ್ರಮುಖರಾದ ಔದುಂಬರ ಭಟ್, ವೀರೇಶ, ವೆಂಕಟಸುಬ್ಬಯ್ಯ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net