ಧರ್ಮದ ಆಚರಣೆಯಿಂದ ಜೀವನ ಶುದ್ಧ

ಹೂವಿನಹಡಗಲಿ ಪಾರ್ಶ್ವನಾಥ ದಿಗಂಬರ ಜೈನ ಬಸದಿ ಗೋಪುರ ಕಲಶಾರೋಹಣ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ  ಧರ್ಮಸಭೆಯಲ್ಲಿ ಶಾಖಾ ಗವಿಮಠದ ಡಾ.ಹಿರಿಶಾಂತವೀರ ಸ್ವಾಮೀಜಿ ಮಾತನಾಡಿದರು. ಹೊಂಬುಜದ ದೇವೇಂದ್ರ ಕೀರ್ತಿ ಭಟ್ಟಾರಕ ಸ್ವಾಮೀಜಿ, ಹಿರೇಮಲ್ಲನಕೆರೆ ಮಠದ ಚನ್ನಬಸವ ಸ್ವಾಮೀಜಿ, ಚೌಕಿಮಠದ ಗಾಡಿತಾತ, ಜೈನ ಸಮಾಜದ ತಾಲೂಕು ಅಧ್ಯಕ್ಷ ಪ್ರಶಾಂತ  ಜೈನ್ ಇತರರಿದ್ದರು.

Published on
ಹೂವಿನಹಡಗಲಿ: ಆಸೆ, ಆಕಾಂಕ್ಷೆಗಳನ್ನು ತ್ಯಜಿಸಿ, ಹಿಂಸೆ ಮಾಡದೆ ಎಲ್ಲ ಧರ್ಮದವರನ್ನು ಗೌರವಿಸುವ ಕೆಲಸವನ್ನು ಜೈನ ಸಮುದಾಯದವರು ಮಾಡುತ್ತಿದ್ದಾರೆ ಎಂದು ಶಾಖಾ ಗವಿಮಠದ ಡಾ.ಹಿರಿಶಾಂತವೀರ ಸ್ವಾಮೀಜಿ ಹೇಳಿದರು.
ಪಟ್ಟಣದ ಪಾರ್ಶ್ವನಾಥ ದಿಗಂಬರ ಜೈನ ಬಸದಿ ಗೋಪುರ ಕಲಶಾರೋಹಣ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ಧರ್ಮ ಸಭೆಯಲ್ಲಿ ಶನಿವಾರ ಮಾತನಾಡಿದರು. ಜೈನ ಧರ್ಮದ ಆಚರಣೆ ಗಳು ಮಾದರಿಯಾಗಿವೆ. ಧರ್ಮದ ಆಚರಣೆ ಜೀವನವನ್ನು ಶುದ್ಧಗೊಳಿಸುತ್ತದೆ. ಅಹಂಕಾರ ಬಿಟ್ಟು ಎಲ್ಲರೊಳಗೊಂದಾಗಬೇಕು ಎಂಬುದು ಜೈನಧರ್ಮದ ಸಿದ್ಧಂತವಾಗಿದೆ. ಯುವಸಮೂಹಕ್ಕೆ ನಮ್ಮ ಆಚರಣೆಗಳ ಬಗ್ಗೆ ಅರಿವು ಮೂಡಿಸುವ ಅವಶ್ಯ ಇದೆ ಎಂದರು.
ಹಿರೇಮಲ್ಲನಕೆರೆ ಮಠದ ಚನ್ನಬಸವ ಸ್ವಾಮೀಜಿ ಮಾತನಾಡಿ, ಮನುಷ್ಯ ಸುಖ, ಶಾಂತಿ, ನೆಮ್ಮದಿಯನ್ನು ತನ್ನೊಳಗೆ ಹುಡುಕದೆ ಪ್ರಪಂಚದ ಬೇರೆಡೆ ಹುಡುಕುತ್ತಾನೆ. ಸೃಷ್ಟಿಯ ಮೂಲ ಹುಡುಕಲು ಹೊರಟು ತನ್ನ ಮೂಲವನ್ನು ಮನುಷ್ಯ ಮರೆಯುತ್ತಿದ್ದಾನೆ ಎಂದರು.
ಬಸದಿಯಲ್ಲಿ ಭಾನುವಾರ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆದವು. ಹೊಂಬುಜದ ದೇವೇಂದ್ರ ಕೀರ್ತಿ ಭಟ್ಟಾರಕ ಸ್ವಾಮೀಜಿ, ಕೊಂಬಳಿಯ ಚೌಕಿಮಠದ ಗಾಡಿತಾತ, ಜೈನ ಸಮಾಜದ ತಾಲೂಕು ಅಧ್ಯಕ್ಷ ಪ್ರಶಾಂತ ಜೈನ್, ಉಪಾಧ್ಯಕ್ಷ ವಿಜಯಕುಮಾರ್ ಜೈನ್, ವಕೀಲರ ಸಂಘದ ತಾಲೂಕು ಅಧ್ಯಕ್ಷ ಮಂಜುನಾಥ ಜೈನ್, ಡಾ.ಧರ್ಮಣ್ಣ, ಪ್ರಮುಖರಾದ ಸಂತೋಷ್ ಜೈನ್, ಎಚ್.ಡಿ.ಅಜಿತ್, ಪದ್ಮರಾಜ್, ಬಾಹುಬಲಿ ಜೈನ್, ರತ್ನಾಕರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net