ಹೊಸನೆಲ್ಲೂಡಿ ಪಿಡಿಒ ಅಪರಂಜಿಗೆ ಸಂಘಟನೆಗಳಿಮದ ಮನವಿ ಸಲ್ಲಿಸಲಾಯಿತು. ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಅಧ್ಯಕ್ಷ ಎಚ್.ಮರಿಯಪ್ಪ, ಸಮಾಜಸೇವಾ ಕಾರ್ಯಕರ್ತರ ವೇದಿಕೆ ಅಧ್ಯಕ್ಷ ಟಿ.ಎಚ್.ಎಂ.ರಾಜಕುಮಾರ್ ಇದ್ದರು.
ಕಂಪ್ಲಿ: ಹೊಸನೆಲ್ಲೂಡಿ ಗ್ರಾಮದಲ್ಲಿ ಸುಗಮ ಸಂಚಾರಕ್ಕಾಗಿ ರಸ್ತೆ ಅತಿಕ್ರಮಣ ತೆರುವುಗೊಳಿಸುವಂತೆ ಒತ್ತಾಯಿಸಿ ಪಿಡಿಒ ಅಪರಂಜಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.
ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಅಧ್ಯಕ್ಷ ಎಚ್.ಮರಿಯಪ್ಪ, ಸಮಾಜಸೇವಾ ಕಾರ್ಯಕರ್ತರ ವೇದಿಕೆ ಅಧ್ಯಕ್ಷ ಟಿ.ಎಚ್.ಎಂ.ರಾಜಕುಮಾರ್ ಮಾತನಾಡಿ, ಹೊಸನೆಲ್ಲೂಡಿ ಗ್ರಾಮದಲ್ಲಿನ ಸಿಸಿ ರಸ್ತೆ ಅತಿಕ್ರಮಿಸಿ ವಾಹನಗಳನ್ನು ನಿಲ್ಲಿಸುತ್ತಿದ್ದು ಸಾರ್ವಜನಿಕರ ಓಡಾಟ, ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ.
ಅಲ್ಲದೆ, ಅಂಗಳವನ್ನು ಅತಿಕ್ರಮಿಸಿ, ಚರಂಡಿ ಮೇಲೆ ಮೆಟ್ಟಿಲು ಕಟ್ಟಿಕೊಳ್ಳುವ ಮೂಲಕ ವಾಹನ ಸಂಚಾರಕ್ಕೆ ಸಮಸ್ಯೆ ಉಂಟು ಮಾಡಲಾಗಿದೆ. ಮನೆಗಳ ಶೌಚಗೃಹದ ನೀರನ್ನು ಚರಂಡಿಗೆ ಬಿಡುತ್ತಿದ್ದು ದುರ್ವಾಸನೆ ಬೀರುತ್ತಿವೆ. ನಿಯಾಮನುಸಾರ ಸೆಟ್‌ಬ್ಯಾಕ್ ಬಿಡದೆ ಮನೆಗಳನ್ನು ನಿರ್ಮಿಸಿದ್ದರಿಂದ ರಸ್ತೆ ಅತಿಕ್ರಮಣವಾಗಿದೆ. ಗ್ರಾಮಾಡಳಿತ ಕೂಡಲೇ ಅತಿಕ್ರಮಣ ತೆರವಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.