ಲಂಚಮುಕ್ತ ಹರಪನಹಳ್ಳಿಗೆ ಕ್ರಮವಹಿಸಲಿ

 ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಹರಪನಹಳ್ಳಿಯಲ್ಲಿ ಸಹಾಯಕ ಆಯುಕ್ತ ಟಿ.ಸುರೇಶ್ ಕುಮಾರಗೆ ಸಿಪಿಐಎಂಎಲ್ ಲಿಬರೇಷನ್ ಹಾಗೂ ಅಂಗ ಸಂಘಟನೆಗಳಿಂದ ಮನವಿ ಸಲ್ಲಿಸಲಾಯಿತು. ಸಿಪಿಐಎಂಎಲ್ ಲಿಬರೇಷನ್ ಜಿಲ್ಲಾ ಕಾರ್ಯದರ್ಶಿ ಸಂದೇರ ಪರಶುರಾಮ, ತಾಲೂಕು ಕಾರ್ಯದರ್ಶಿ ಗುಳೇದಹಟ್ಟಿ ಸಂತೋಷ, ಮೈಲಪ್ಪ ಹುಲಿಕಟ್ಟಿ, ಪ್ರಕಾಶ, ರಾಘು, ರಫಿ, ದ್ವಾರಕೀಶ, ಚಂದ್ರಪ್ಪ ಬೂದಿಹಾಳು, ದಾದು ಇತರರಿದ್ದರು.

Published on
ಹರಪನಹಳ್ಳಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರದ ಮಿನಿ ವಿಧಾನಸೌಧ ಎದುರು ಸಿಪಿಐಎಂಎಲ್ ಲಿಬರೇಷನ್ ಹಾಗೂ ಅಂಗ ಸಂಘಟನೆಗಳಿಂದ ಸೋಮವಾರ ಅನಿರ್ದಿಷ್ಟಾವಧಿ ಧರಣಿ ಆರಂಭಿಸಲಾಯಿತು.
ತಾಲೂಕಿನಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ತಾಪಂ ಇಒ ವೈ.ಎಚ್.ಚಂದ್ರಶೇಖರ್ ಅವರು ಪಿಡಿಗಳೊಂದಿಗೆ ಶಾಮೀಲಾಗಿ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಬಾಗಳಿ ಪಿಡಿಒ ಕೆ.ಷಣ್ಮುಖಪ್ಪ ಸೇರಿದಂತೆ ಇತರರನ್ನು ಅಮಾನತು ಗೊಳಿಸಬೇಕೆಂದು ಒತ್ತಾಯಿಸಲಾಯಿತು.
ಲಂಚಮುಕ್ತ ತಾಲೂಕಿಗಾಗಿ ಶಾಸಕರು ಹಾಗೂ ಹಿರಿಯ ಅಧಿಕಾರಿಗಳು ಕ್ರಮ ವಹಿಸಬೇಕು. ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಬಗರ್‌ಹುಕುಂ ಸಾಗುವಳಿದಾರರಿಗೆ ಕೂಡಲೆ ಪಟ್ಟಾ ವಿತರಿಸಬೇಕು. ಕೊಟ್ಟೂರಿನ ವಿಮುಕ್ತ ದೇವದಾಸಿಯರಿಗೆ ಮನೆಗಳ ಹಕ್ಕುಪತ್ರ ವಿತರಿಸಬೇಕು. ಹರಪನಹಳ್ಳಿ, ಕೊಟ್ಟೂರು, ಹೂವಿನಹಡಗಲಿ, ತಾಲೂಕಿನಲ್ಲಿ ಮದ್ಯ ಅಕ್ರಮ ಮಾರಾಟ ತಡೆಗಟ್ಟಬೇಕು ಎಂದು ಆಗ್ರಹಿಸಲಾಯಿತು.
ನಾರಾಯಣಪುರ ಗ್ರಾಮದ ಬಸ್ ನಿಲ್ದಾಣ ಒತ್ತುವರಿ ತೆರವುಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಬೇಕು. ತಾಲೂಕಿನ 37 ಪಂಚಾಯಿತಿಗಳಲ್ಲಿ ಎಸ್‌ಎಲ್‌ಡಬ್ಲುೃಎಂ ವಾಹನ ಚಾಲಕಿ ಮತ್ತು ಕಸ ವಿಂಗಡಕರ ಹಲವು ವರ್ಷಗಳ ಸಂಬಳ ಪಾವತಿ ಮಾಡಬೇಕು. ಕಾರ್ಮಿಕ ಇಲಾಖೆಯಿಂದ ಕಳಪೆ ಕಿಟ್ ವಿತರಣೆ ಮಾಡಿರುವ ಹಗರಣವನ್ನು ಲೋಕಾಯುಕ್ತ ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net