ರಂಗಮಂದಿರಕ್ಕೆ ಅನುದಾನ ನೀಡಲಿ

ಹಗರಿಬೊಮ್ಮನಹಳ್ಳಿ ಶಾಸಕ ಕೆ.ನೇಮಿರಾಜ ನಾಯ್ಕಗೆ ರಂಗಚೈತ್ರ ಕಲಾ ಟ್ರಸ್ಟ್‌ನಿಂದ  ಮನವಿ ಸಲ್ಲಿಸಲಾಯಿತು. ತಾಲೂಕು ಅಧ್ಯಕ್ಷ ಹನಸಿ ಕದರಮ್ಮನವರ ಕೊಟ್ರೇಶ, ನವೀನ್ ಸ್ಫೋರ್ಟ್ಸ್ ಕ್ಲಬ್‌ನ ಪ್ರಮುಖ ಈ.ಕೃಷ್ಣಮೂರ್ತಿ, ತಬಲಾ ವಿರೂಪಾಕ್ಷಪ್ಪ, ಹಂಚಿನಮನಿ ರಮೇಶ, ಸಂಚಿ ಶಿವಕುಮಾರ ಮತ್ತಿತರರು ಇದ್ದರು.
ಹಗರಿಬೊಮ್ಮನಹಳ್ಳಿ ಶಾಸಕ ಕೆ.ನೇಮಿರಾಜ ನಾಯ್ಕಗೆ ರಂಗಚೈತ್ರ ಕಲಾ ಟ್ರಸ್ಟ್‌ನಿಂದ ಮನವಿ ಸಲ್ಲಿಸಲಾಯಿತು. ತಾಲೂಕು ಅಧ್ಯಕ್ಷ ಹನಸಿ ಕದರಮ್ಮನವರ ಕೊಟ್ರೇಶ, ನವೀನ್ ಸ್ಫೋರ್ಟ್ಸ್ ಕ್ಲಬ್‌ನ ಪ್ರಮುಖ ಈ.ಕೃಷ್ಣಮೂರ್ತಿ, ತಬಲಾ ವಿರೂಪಾಕ್ಷಪ್ಪ, ಹಂಚಿನಮನಿ ರಮೇಶ, ಸಂಚಿ ಶಿವಕುಮಾರ ಮತ್ತಿತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ರಂಗಚೈತ್ರ ಕಲಾ ಟ್ರಸ್ಟ್‌ನಿಂದ ಶಾಸಕಗೆ ಮನವಿ
ಹಗರಿಬೊಮ್ಮನಹಳ್ಳಿ: ಪಟ್ಟಣದಲ್ಲಿ ಸುಸಜ್ಜಿತ ರಂಗಮಂದಿರ ಹಾಗೂ ಭವನ ನಿರ್ಮಿಸಲು ಕ್ರಮ ಕೈಗೊಳ್ಳಬೇಕೆಂದು ರಂಗಚೈತ್ರ ಕಲಾ ಟ್ರಸ್ಟ್‌ನಿಂದ ಶಾಸಕ ಕೆ.ನೇಮಿರಾಜ ನಾಯ್ಕಗೆ ಸೋಮವಾರ ಮನವಿ ಸಲ್ಲಿಸಲಾಯಿತು.
ತಾಲೂಕು ಅಧ್ಯಕ್ಷ ಹನಸಿ ಕೊಟ್ರೇಶ ಮಾತನಾಡಿ, ಪಟ್ಟಣದಲ್ಲಿ ಕಲೆಯ ಆರಾಧಕರು, ಪ್ರೋತ್ಸಾಹಿಗಳು, ಕಲಾಪೋಷಕರು ಇದ್ದಾರೆ. ಆದರೆ, ಉತ್ತಮವಾದ ವೇದಿಕೆಯಾಗಲಿ, ರಂಗಮಂದಿರವಾಗಲಿ ಅಥವಾ ಕಲಾ ಭವನವಾಗಲಿ ಇಂದಿಗೂ ಇಲ್ಲದಿರುವುದು ಬೇಸರದ ಸಂಗತಿ. ಈಗಾಗಲೇ ಪಟ್ಟಣದ ನೀರಾವರಿ ಇಲಾಖೆ ಆವರಣದಲ್ಲಿ ಇರುವ ಹಳೇ ಕಟ್ಟಡದ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಪ್ರತಿವರ್ಷ ನಾಟಕೋತ್ಸವ ಕೂಡ ನಡೆಯುತ್ತಿವೆ. ಇದಕ್ಕೆ ತನ್ನದೇ ಆದ ಸುಸಜ್ಜಿತವಾದ ಕಟ್ಟಡ, ಭವನ ನಿರ್ಮಾಣವಾದರೆ ಅನುಕೂಲವಾಗಲಿದ್ದು ಅಗತ್ಯ ಅನುದಾನ ನೀಡುವಂತೆ ಮನವಿ ಮಾಡಿದರು.
ನಂತರ ನವೀನ್ ಸ್ಫೋರ್ಟ್ಸ್ ಕ್ಲಬ್‌ನ ಪ್ರಮುಖರಾದ ಈ.ಕೃಷ್ಣಮೂರ್ತಿ ಮಾತನಾಡಿ, ಈ ವೇದಿಕೆಯಲ್ಲಿ ನಡೆದಂತ ಸಾಂಸ್ಕೃತಿಕ ಕಾರ್ಯಕ್ರಮಗಳು ರಾಜ್ಯ ಮಟ್ಟಕ್ಕೆ ತಲುಪಿವೆ. ಅಲ್ಲದೆ, ಬೆಳೆಯುತ್ತಿರುವ ಯುವ ಸಮೂಹ ಕಲಾವಿದರಿಗೆ, ಹಿರಿಯರು ಮಾರ್ಗದರ್ಶಕರಾಗಿ ಪ್ರೋತ್ಸಹಿಸಲು ಈ ಸ್ಥಳ ಸೂಕ್ತವಾಗಿದೆ. ಕಲಾಭವನ ನಿರ್ಮಾಣದ ಅಗತ್ಯವಾಗಿದೆ ಎಂದರು.
ಮನವಿ ಸ್ವೀಕರಿಸಿದ ಶಾಸಕ ಕೆ.ನೇಮಿರಾಜ ನಾಯ್ಕ, ತಾಲೂಕಿನಲ್ಲಿ ಕಲಾವಿದರು ಸಾಕಷ್ಟು ಇದ್ದು, ಸೂಕ್ತ ವೇದಿಕೆಯ ಅವಶ್ಯವಿದ್ದು, ಅಗತ್ಯ ಅನುದಾನ ನೀಡುವ ಜತೆಗೆ ಮಾದರಿ ಭವನ ನಿರ್ಮಾಣ ಮಾಡಲಾಗುವುದು ಎಂದು ಭರವಸೆ ನೀಡಿದರು.
ಕಲಾವಿದರಾದ ತಬಲಾ ವಿರುಪಾಕ್ಷಪ್ಪ, ಹಂಚಿನಮನಿ ರಮೇಶ, ಸಂಚಿ ಶಿವಕುಮಾರ, ಅಲೆಮಾರಿ ಸಮುದಾಯದ ಡಿ.ಮಲ್ಲೇಶಪ್ಪ, ಉಮೇಶ, ಪರಶುರಾಮ, ಎಂ.ಜಿ.ಗೀತಪ್ಪ, ಕೆ.ಕೊಟ್ರೇಶಪ್ಪ, ಎಚ್.ಎಂ.ಮಂಜುನಾಥ, ಎಚ್.ಚಿಕ್ಕನಗೌಡ, ಪೆಟಗಿ ವೆಂಕಟೇಶ ಮತ್ತಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net