ಆರೋಗ್ಯ ಸೇತು ಸದ್ಬಳಕೆ ಮಾಡಿಕೊಳ್ಳಲಿ

ಹಗರಿಬೊಮ್ಮನಹಳ್ಳಿ ತಾಲೂಕಿನ ಗುಡಿ ಚಿಮ್ಮನಹಳ್ಳಿಯಲ್ಲಿ ಆರೋಗ್ಯ ಸೇತು ಸಿಬ್ಬಂದಿ ರೋಗಿಗಳ ಆರೋಗ್ಯ ತಪಾಸಣೆ ಮಾಡಿದರು. ಶುಶ್ರೂಷಕಿ ಶ್ರುತಿ, ತಾಂತ್ರಿಕ ವಿಭಾಗದ ವೀಣಾ, ಸಿಬಂದಿ ಬಸವರಾಜ ಇತರರಿದ್ದರು.
ಹಗರಿಬೊಮ್ಮನಹಳ್ಳಿ ತಾಲೂಕಿನ ಗುಡಿ ಚಿಮ್ಮನಹಳ್ಳಿಯಲ್ಲಿ ಆರೋಗ್ಯ ಸೇತು ಸಿಬ್ಬಂದಿ ರೋಗಿಗಳ ಆರೋಗ್ಯ ತಪಾಸಣೆ ಮಾಡಿದರು. ಶುಶ್ರೂಷಕಿ ಶ್ರುತಿ, ತಾಂತ್ರಿಕ ವಿಭಾಗದ ವೀಣಾ, ಸಿಬಂದಿ ಬಸವರಾಜ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಾರ್ವಜನಿಕರ ಆರೋಗ್ಯ ತಪಾಸಣೆ
ಹಗರಿಬೊಮ್ಮನಹಳ್ಳಿ: ತಾಲೂಕಿನ ಗುಡಿ ಚಿಮ್ಮನಹಳ್ಳಿ ಗ್ರಾಮದಲ್ಲಿ ಆರೋಗ್ಯ ಸೇತು ಸಿಬ್ಬಂದಿ ಶುಕ್ರವಾರ ಭೇಟಿ ನೀಡಿ ಸಾರ್ವಜನಿಕರ ಆರೋಗ್ಯ ತಪಾಸಣೆ ನಡೆಸಿದರು. ಶುಶ್ರೂಷಕಿ ಶ್ರುತಿ ಮಾತನಾಡಿ, ಸಾರಿಗೆ ಸೌಲಭ್ಯಗಳಿಲ್ಲದ ಗ್ರಾಮಗಳಿಗೆ ತೆರಳಿ ಬಾಣಂತಿಯರು ಹಾಗೂ ವಿವಿಧ ರೋಗಿಗಳನ್ನು ಪರೀಕ್ಷೆ ಮಾಡಲಾಗುವುದು.
ಆದರೆ, ಹೆಚ್ಚಿನ ಚಿಕಿತ್ಸೆಗಾಗಿ ತಾಲೂಕು ಆಸ್ಪತ್ರೆಗೆ ಭೇಟೆ ನೀಡಬೇಕು. ವಿಶೇಷವಾಗಿ ಮಹಿಳೆಯರು ಮನೆಬಾಗಿಲಿಗೆ ಬರುವ ಆರೋಗ್ಯ ಸೇತುವಿನ ಸಲಹೆ ಪಡೆದು ಸಹಕಾರ ನೀಡಿದರೆ ಆರೋಗ್ಯವಂತರಾಗಿ ಇರುತ್ತೀರಿ. ಜತೆಗೆ ಆರೋಗ್ಯ ಸೌಲಭ್ಯಗಳನ್ನು ಪಡೆಯಬಹುದು ಎಂದರು.
ತಾಲೂಕಿನಲ್ಲಿ 16 ಹಳ್ಳಿಗಳನ್ನು ಆಯ್ಕೆಮಾಡಿದ್ದು, ನಿತ್ಯ 2 ಗ್ರಾಮಗಳಿಗೆ ಭೇಟಿ ನೀಡಲಾಗುತ್ತದೆ. ವ್ಯಾಸಪುರ ತಾಂಡಾ, ಸಂಗಮೇಶ್ವರ, ಕೂಡಿತಿನಿಮಗ್ಗಿ, ವಟ್ಟಮನಹಳ್ಳಿ, ಗುಡಿ ಚಿಮ್ಮನಹಳ್ಳಿ ಸೇರಿ ಅನೇಕ ಗ್ರಾಮಗಳಲ್ಲಿ ಆರೋಗ್ಯ ಸೇತು ಸಂಚರಿಸಲಿದೆ ಎಂದರು. ತಾಂತ್ರಿಕ ವಿಭಾಗದ ವೀಣಾ, ಸಿಬ್ಬಂದಿ ಬಸವರಾಜ, ಗ್ರಾಮಸ್ಥರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net