ಕಂಪ್ಲಿಯಲ್ಲಿ ಜಾಂಭವ ಯುವ ಸೇನಾ ತಾಲೂಕು ಘಟಕವನ್ನು ರಾಜ್ಯಾಧ್ಯಕ್ಷ ಡಾ.ರಮೇಶ ಚಕ್ರವರ್ತಿ ಉದ್ಘಾಟಿಸಿದರು. ಪ್ರಮುಖರಾದ ಸೀಕ್ಲಿ ಸೋಮಶೇಖರ, ತಿಪ್ಪೆಸ್ವಾಮಿ, ರುದ್ರಪ್ಪ, ಗಂಗಾಧರ, ಪಾರ್ವತಿ, ಕರಡಿ ನೀಲಪ್ಪ ಇತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಜಾಂಭವ ಯುವ ಸೇನಾ ರಾಜ್ಯಾಧ್ಯಕ್ಷ ಡಾ.ರಮೇಶ ಚಕ್ರವರ್ತಿ ಹೇಳಿಕೆ
ಜಾಂಭವ ಯುವ ಸೇನಾ, ಹೊಸಪೇಟೆ ತಾಲೂಕು ಘಟಕ ಉದ್ಘಾಟನೆ
ಕಂಪ್ಲಿ: ಸ್ವಾತಂತ್ರ್ಯ ದೊರೆತು 8 ದಶಕಗಳಾದರೂ ದಲಿತರಿಗೆ ಸಾಮಾಜಿಕ, ರಾಜಕೀಯ ಸಮಾನತೆ ಮರಿಚಿಕೆಯಾಗಿದೆ ಎಂದು ಜಾಂಭವ ಯುವ ಸೇನಾ ರಾಜ್ಯಾಧ್ಯಕ್ಷ ಡಾ.ರಮೇಶ ಚಕ್ರವರ್ತಿ ಹೇಳಿದರು.
ಮಾರುತಿ ನಗರದ ಸಮುದಾಯ ಭವನದಲ್ಲಿ ಜಾಂಭವ ಯುವ ಸೇನಾ, ಹೊಸಪೇಟೆ ತಾಲೂಕು ಘಟಕಗಳನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು. ಸರ್ಕಾರಿ ಹುದ್ದೆಗಳು ಖಾಲಿ ಇದ್ದು, ಭರ್ತಿ ಮಾಡಲು ನಿಗಮಗಳಿಂದ ಅರ್ಹ ಫಲಾನುಭವಿಗಳಿಗೆ ಯೋಜನೆ ತಲುಪಿಸಲು ಸರ್ಕಾರ ನಿಗಾವಹಿಸಬೇಕಿದೆ.
ದಲಿತರು ಆರ್ಥಿಕ ಸದೃಢರಾದರೆ ಮಾತ್ರ ಅಗತ್ಯ ಸೌಲಭ್ಯ ಪಡೆಯಲು ಸಾಧ್ಯ ಎಂದರು. ಜಿಲ್ಲಾಧ್ಯಕ್ಷ ಸೀಕ್ಲಿ ಸೋಮಶೇಖರ ಮಾತನಾಡಿ, ದಲಿತ ದೌರ್ಜನ್ಯಗಳ ವಿರುದ್ಧ ಹೋರಾಡಲು, ಸರ್ಕರಿ ಯೋಜನೆಗಳನ್ನು ದಲಿತರಿಗೆ ತಲುಪಿಸಲು ಜಾಂಭವ ಯುವ ಸೇನೆ ಪದಾಧಿಕಾರಿಗಳು ಸದಾ ಸಿದ್ಧರಿರಬೇಕು. ಮಕ್ಕಳಿಗೆ ಉನ್ನತ ಶಿಕ್ಷಣ ಹಾಗೂ ಹುದ್ದೆ ದೊರಕಿಸಲು ಪಾಲಕರು ಜಾಗೃತರಾಗಬೇಕು ಎಂದು ತಿಳಿಸಿದರು.
ತಾಲೂಕು ಅಧ್ಯಕ್ಷ ತಿಪ್ಪೇಸ್ವಾಮಿ, ಹೊಸಪೇಟೆ ತಾಲೂಕು ಅಧ್ಯಕ್ಷ ರುದ್ರಪ್ಪ, ಪದಾಧಿಕಾರಿಗಳಾದ ಗಂಗಾಧರ, ನೆಟ್ಟಕಲ್ಲಪ್ಪ, ಶಾಂತಪ್ಪ ಪೂಜಾರಿ, ಗಂಗಣ್ಣ, ಗುರುವಪ್ಪ, ಕರಡಿ ನೀಲಪ್ಪ, ರಾಮಾಲೆಪ್ಪ, ಕುಮಾರಿ, ಮಾರೇಶ, ಅಂಬರೀಷ, ಪಾರ್ವತಿ, ರಾಜಮ್ಮ ಇತರರಿದ್ದರು.