ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಲಿ

ಕೊಟ್ಟೂರು ಮಹಾದೇವ ಆಂಗ್ಲ ಮಾಧ್ಯಮ  ಶಾಲೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ ನಡೆಯಿತು.
ಕೊಟ್ಟೂರು ಮಹಾದೇವ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ ನಡೆಯಿತು.
Published on

ಪ್ರಮುಖ ಮುಖ್ಯಾಂಶಗಳು

  • ವಿದ್ಯಾಪ್ರಸಾರ
  • ಪರಿಷತ್
  • ಸಂಸ್ಥೆ
ಕೊಟ್ಟೂರು: ತಂತ್ರಜ್ಞಾನ, ಪರಿಸರ ರಕ್ಷಣೆ ಮತ್ತು ನೈಸರ್ಗಿಕ ಸಂಪನ್ಮೂಲಗಳ ಬಳಕೆಯ ಮಾದರಿಗಳು ಮತ್ತು ಪ್ರಾತ್ಯಕ್ಷಿಕೆಗಳ ವಿಜ್ಞಾನ ವಸ್ತು ಪ್ರದರ್ಶನ ಶ್ಲಾಘನೀಯ ಎಂದು ಶ್ರೀಗುರು ಕೊಟ್ಟೂರೇಶ್ವರ ವಿದ್ಯಾಪ್ರಸಾರ ಪರಿಷತ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಬಿ.ಪಂಪಾಪತಿ ಹೇಳಿದರು.
ಪಟ್ಟಣದ ಮಹಾದೇವ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವದ ಜತೆಗೆ ಸಮಸ್ಯೆ ಪರಿಹಾರ, ವಿವರಣಾ ಕೌಶಲ ಹಾಗೂ ಸೃಜನಶೀಲ ಬೆಳವಣಿಗೆ ಸಹಕಾರಿಯಾಗಲಿದೆ. ಪರೀಕ್ಷೆಗೆ ಮಾತ್ರ ಸೀಮಿತಗೊಳಿಸದೆ ಮಕ್ಕಳಲ್ಲಿನ ಪ್ರತಿಭೆ ಅನಾವರಣಗೊಳಿಸಿ ಆಧುನಿಕ ಜಗತ್ತಿಗೆ ವಿಜ್ಞಾನದ ಪರಿಕಲ್ಪನೆ ಮೂಡಿಸುತ್ತಿರುವ ಶಿಕ್ಷಕರ ಕಾರ್ಯ ಮೆಚ್ಚುವಂತಹದು ಎಂದರು.
ಕೆಪಿಟಿಸಿಎಲ್ ಜೆಇ ಡಿಎಂಆರ್ ವಿಜಯಕುಮಾರ ವಿಜ್ಞಾನ ವಸ್ತು ಪ್ರದರ್ಶನ ಅವಲೋಕಿಸಿ, ಮಕ್ಕಳಿಗೆ ಸರಿಯಾದ ತರಬೇತಿ ಸಿಕ್ಕರೆ ಇಲ್ಲಿನ ಪ್ರತಿಯೊಬ್ಬ ವಿದ್ಯಾರ್ಥಿಯೂ ವಿಜ್ಞಾನಿಯಾಗುವ ಸಾಧ್ಯತೆ ಇದೆ ಎಂದರು.
ವಿದ್ಯಾರ್ಥಿಗಳಾದ ವರ್ಷಿತಾ ಮತ್ತು ಚಂದ್ರಿಕಾ ಲೇಸರ್ ರಕ್ಷಣೆ ಮಾದರಿಯನ್ನು, ವಿ.ಭೂಮಿಕಾ ಮತ್ತು ಹೀನಾ ವಿದ್ಯುತ್ ಸಂಗ್ರಹದಿಂದ ಬೆಳಕು ಹರಿಯುವಿಕೆ ಸೇರಿದಂತೆ ಕೆಲ ವಿದ್ಯಾರ್ಥಿಗಳು ಹೈಡ್ರಾಲಿಕ್ ಬ್ರಿಡ್ಜ್, ಸೋಲಾರ್ ವಿದ್ಯುತ್ ಸಂಗ್ರಹ ಮತ್ತು ಸರಬರಾಜು ಹಾಗೂ ಆಧುನಿಕ ಕೃಷಿ ವಿಧಾನ ಸೇರಿದಂತೆ ನೂರಾರು ಮಾದರಿಗಳನ್ನು ಪ್ರದರ್ಶಿಸಿದರು.
ತೀರ್ಪುಗಾರರಾಗಿ ಕೆಸಿಕೆ ಕಾಲೇಜು ಉಪನ್ಯಾಸಕಿ ಶ್ವೇತಾ, ಮಹಾದೇವ ಕಾಲೇಜು ಉಪನ್ಯಾಸಕಿ ಗಗನಾ ಕಾರ್ಯನಿರ್ವಹಿಸಿದರು. ಶಾಲಾ ಆಡಳಿತ ಕಾರ್ಯದರ್ಶಿ ಜಿ.ಸರೋಜಾ, ಮುಖ್ಯಶಿಕ್ಷಕ ಪ್ರದೀಪ್ ಕುಮಾರ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net