ಸೌಕರ್ಯ ಒದಗಿಸಲು ಎಲ್ಲರೂ ಕೈಜೋಡಿಸಲಿ

ಕೂಡ್ಲಿಗಿ ತಾಲೂಕಿನ ಕಾನಮಡಗು ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ನೌಕರರಿಗೆ ಸನ್ಮಾನ ಕಾರ್ಯಕ್ರಮವನ್ನು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಉದ್ಘಾಟಿಸಿದರು. ಹಿರೇಮಠದ ಪೀಠಾಧಿಪತಿ ಪ್ರಶಾಂತ ಸಾಗರ ಸ್ವಾಮೀಜಿ, ಕಾನಮಡಗು ದಾಸೋಹ ಮಠದ ಧರ್ಮಾಧಿಕಾರಿ ಐಮಡಿ ಶಾರಣಾರ್ಯರು, ಲಿಂಗಾಯತ ಮಹಾಸಭಾದ ತಾಲೂಕು ಗೌರವಾಧ್ಯಕ್ಷ ಹಾಗೂ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಗುಂಡುಮುಣುಗು ಕೆ.ತಿಪ್ಪೇಸ್ವಾಮಿ, ಜಿಲ್ಲಾ ಉಪಾಧ್ಯಕ್ಷ ಎಂ.ಗುರುಸಿದ್ದನಗೌಡ, ರಾಜ್ಯ ಯುವ ಘಟಕದ ಸದಸ್ಯ ಗುಳಿಗಿ ವೀರೇಂದ್ರ, ಪ್ರಧಾನ ಕಾರ್ಯದರ್ಶಿ ಜಿ.ಎಸ್.ಗಿರೀಶ, ಖಜಾಂಚಿ ಮರುಳಸಿದ್ದಪ್ಪ ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಡಾ.ಎನ್.ಟಿ. ಶ್ರೀನಿವಾಸ್ ಹೇಳಿಕೆ
ಕೂಡ್ಲಿಗಿ: ಸ್ಪರ್ಧಾತ್ಮಕ ಜಗತ್ತಿನಲ್ಲಿ ಪ್ರತಿಭೆ ಗುರುತಿಸಿ ಹೊರತರುವುದು ಸಾಹಸದ ಕೆಲಸವಾಗಿದೆ ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಹೇಳಿದರು.
ಕಾನಮಡಗು ಗ್ರಾಮದ ದಾಸೋಹ ಮಠದ ಭವನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಘಟಕದಿಂದ ಭಾನುವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ನೌಕರರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಿಂದುಳಿದ ತಾಲೂಕಿನಲ್ಲಿ ವಿದ್ಯಾರ್ಥಿಗಳ ಶಿಕ್ಷಣ ಹಾಗೂ ಸಾಧನೆಗೆ ಬೆನ್ನೆಲುಬಾಗಿ ನಿಲ್ಲಬೇಕಿದೆ. ಜಾತಿ, ಮತ ಎಣಿಸದೆ ಕ್ಷೇತ್ರದಲ್ಲಿ ಸಮ ಸಮಾಜ ನಿರ್ಮಾಣ ಹಾಗೂ ಶಿಕ್ಷಣ, ಆರೋಗ್ಯ ಸೇರಿದಂತೆ ಮೂಲ ಸೌಕರ್ಯ ಒದಗಿಸಲು ಪ್ರತಿಯೊಬ್ಬರೂ ಕೈಜೋಡಿಸಬೇಕು. ನಿವೃತ್ತ ನೌಕರರ ಅನುಭವ ಬಳಸಿಕೊಂಡು ಅಭಿವೃದ್ಧಿ ಯೋಜನೆ ಕೈಗೊಳ್ಳಲಾಗುವುದು. ಮಹಾಸಭಾ ಭವನ ನಿರ್ಮಾಣಕ್ಕೆ ಅಗತ್ಯ ಅನುದಾನದ ಜತೆಗೆ ಸೌಲಭ್ಯಗಳನ್ನು ಕಲ್ಪಿಸಿ ಮಾದರಿ ಭವನ ನಿರ್ಮಿಸಲಾಗುವುದು ಎಂದರು.
ಲಿಂಗಾಯತ ಮಹಾಸಭಾ ತಾಲೂಕು ಗೌರವಾಧ್ಯಕ್ಷ ಹಾಗೂ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಗುಂಡುಮುಣುಗು ಕೆ.ತಿಪ್ಪೇಸ್ವಾಮಿ ಮಾತನಾಡಿ, ವೀರಶೈವ ಸಮಾಜದ ಎಲ್ಲ ಪಂಗಡಗಳನ್ನು ಒಂದುಗೂಡಿಸುವುದು ಮಹಾಸಭಾ ಉದ್ದೇಶವಾಗಿದೆ. ಶಾಸಕರ ಸಹಕಾರದಿಂದ ಮಹಾಸಭಾ ಭವನ ನಿರ್ಮಾಣಕ್ಕೆ ಜಾಗ ಗುರುತಿಸಲಾಗಿದೆ. ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಈಶ್ವರ ಖಂಡ್ರೆ ಭೂಮಿ ಪೂಜೆ ನೆರವೇರಿಸಲಿದ್ದಾರೆ. ವೀರಶೈವ ಭವನ ಎಲ್ಲ ಧರ್ಮೀಯರಿಗೂ ಉಪಯೋಗವಾಗುವಂತೆ ನಿರ್ಮಿಸಲಾಗುವುದು. ಆದ್ದರಿಂದ ಲಿಂಗಾಯತ ಮಹಾಸಭಾ ಸದಸ್ಯರಾಗಲು ನೋಂದಣಿ ಮಾಡಿಸಿ ಸಮಾಜ ಒಗ್ಗೂಡಲು ಸಹಕರಿಸಬೇಕು ಎಂದು ತಿಳಿಸಿದರು.
ವಿದ್ಯಾರ್ಥಿಗಳು ಹಾಗೂ ನಿವೃತ್ತ ನೌಕರರನ್ನು ಸನ್ಮಾನಿಸಲಾಯಿತು. ಮಹಾಸಭಾ ತಾಲೂಕು ಅಧ್ಯಕ್ಷ ಗೌಡ್ರು ಸುನಿಲ್, ಜಿಲ್ಲಾ ಉಪಾಧ್ಯಕ್ಷ ಎಂ.ಗುರುಸಿದ್ದನಗೌಡ, ರಾಜ್ಯ ಯುವ ಘಟಕದ ಸದಸ್ಯ ಗುಳಿಗಿ ವೀರೇಂದ್ರ, ಪ್ರಧಾನ ಕಾರ್ಯದರ್ಶಿ ಜಿ.ಎಸ್.ಗಿರೀಶ, ಖಜಾಂಚಿ ಮರುಳಸಿದ್ದಪ್ಪ, ಮಹಿಳಾ ವಿಭಾಗದ ಜಿಲ್ಲಾಧ್ಯಕ್ಷೆ ರೇಖಾ ಮಲ್ಲಿಕಾರ್ಜುನ, ಕೂಡ್ಲಿಗಿ ಹಿರೇಮಠದ ಪೀಠಾಧಿಪತಿ ಪ್ರಶಾಂತ ಸಾಗರ ಸ್ವಾಮೀಜಿ, ಕಾನಮಡಗು ದಾಸೋಹ ಮಠದ ಧರ್ಮಾಧಿಕಾರಿ ಐಮಡಿ ಶಾರಣಾರ್ಯರು, ಸಾವಯವ ಕೃಷಿಕ ಎಸ್.ವಿ.ಸಜ್ಜನ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net