ನೆರೆ ರಾಷ್ಟ್ರಗಳಿಂದ ನುಸುಳದಿರಲಿ

ಕುರುಗೋಡು ಆರೋಗ್ಯ ಕೇಂದ್ರದ ಬಳಿ ಮಗುವಿಗೆ ತಹಸೀಲ್ದಾರ್ ನರಸಪ್ಪ ಪೋಲಿಯೋ ಲಸಿಕೆ ಹಾಕಿದರು.
ಕುರುಗೋಡು ಆರೋಗ್ಯ ಕೇಂದ್ರದ ಬಳಿ ಮಗುವಿಗೆ ತಹಸೀಲ್ದಾರ್ ನರಸಪ್ಪ ಪೋಲಿಯೋ ಲಸಿಕೆ ಹಾಕಿದರು.
Published on
ಕುರುಗೋಡು: ತಾಲೂಕಿನಲ್ಲಿ ಐದು ವರ್ಷದಳಗಿನ 17 ಸಾವಿರಕ್ಕೂ ಹೆಚ್ಚು ಮಕ್ಕಳಿದ್ದು, ಎಲ್ಲರಿಗೂ ಲಸಿಕೆ ಹಾಕಿಸುವ ಮೂಲಕ ಪೋಲಿಯೋ ಮುಕ್ತ ಭಾರತ ಅಭಿಯಾನಕ್ಕೆ ಕೈಜೋಡಿಸಬೇಕು ಎಂದು ತಾಲೂಕು ವೈದ್ಯಾಧಿಕಾರಿ ಮಂಜುನಾಥ್ ಜವಳಿ ತಿಳಿಸಿದರು.
ಪಟ್ಟಣದ ನಾಡಗೌಡ ಸರ್ಕಲ್ ಬಳಿಯ ಆರೋಗ್ಯ ಕೇಂದ್ರದಲ್ಲಿ ಪೋಲಿಯೋ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಮಕ್ಕಳಿಗೆ ಈಗಾಗಲೇ ಲಸಿಕೆ ಹಾಕಿಸಿದ್ದರೂ ಮತ್ತೆ ಹಾಕಿಸಬೇಕು. ಲಸಿಕೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದರು.
ಪುರಸಭೆ ಅಧ್ಯಕ್ಷ ಮಂಜುನಾಥ್ ಮಾತನಾಡಿ, ಹತ್ತಿರದ ಸರ್ಕಾರಿ ಆಸ್ಪತ್ರೆ, ಅಂಗನವಾಡಿ ಹಾಗೂ ಶಾಲೆಗಳಲ್ಲಿ ಲಸಿಕೆ ಲಭ್ಯವಿದೆ. ಯಾವುದೇ ಮಗು ಲಸಿಕೆಯಿಂದ ವಂಚಿತವಾಗಬಾರದು. ಪ್ರತಿ ಮಗುವಿಗೆ ಲಸಿಕೆ ಹಾಕಬೇಕು ಎಂದು ತಿಳಿಸಿದರು.
ತಹಸೀಲ್ದಾರ್ ನರಸಪ್ಪ ಮಾತನಾಡಿ, ನೆರೆ ರಾಷ್ಟ್ರಗಳಿಂದ ಮತ್ತೆ ಪೋಲಿಯೋ ಬಾರದಂತೆ ತಡೆಯಲು ಸರ್ಕಾರ ಈ ಅಭಿಯಾನ ಕೈಗೊಂಡಿದೆ. ಮಕ್ಕಳು ಅಂಗವೈಕಲ್ಯಕ್ಕೆ ಒಳಗಾಗಬಾರದು ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net