ಗ್ರಾಮಗಳಲ್ಲಿ ವಿದ್ಯುತ್ ಸಮಸ್ಯೆಯಾಗದಿರಲಿ

ಕುರುಗೋಡು ತಾಲೂಕು ಆಡಳಿತ ಕಚೇರಿಯಲ್ಲಿ ಬೇಸಿಗೆ ಹಿನ್ನೆಲೆ ತಾಲೂಕು ಕಾರ್ಯಪಡೆ ಸಮಿತಿ ಸಭೆಯನ್ನು ತಹಸೀಲ್ದಾರ್ ನರಸಪ್ಪ ನಡೆಸಿದರು. ತಾಪಂ ಇಒನಿರ್ಮಲಾ, ಶಿರಸ್ತೇದಾರ್ ವಿಜಯ್ ಕುಮಾರ್, ಅಧಿಕಾರಿಗಳಾದ ಶಿವರಾಮ್ ರೆಡ್ಡಿ, ಅನಿಲ್ ಕುಮಾರ್, ಮಂಜುನಾಥ, ಬಸವನಗೌಡ, ಶೇಕ್ಷಾವಲಿ ಇತರರಿದ್ದರು.
ಕುರುಗೋಡು ತಾಲೂಕು ಆಡಳಿತ ಕಚೇರಿಯಲ್ಲಿ ಬೇಸಿಗೆ ಹಿನ್ನೆಲೆ ತಾಲೂಕು ಕಾರ್ಯಪಡೆ ಸಮಿತಿ ಸಭೆಯನ್ನು ತಹಸೀಲ್ದಾರ್ ನರಸಪ್ಪ ನಡೆಸಿದರು. ತಾಪಂ ಇಒನಿರ್ಮಲಾ, ಶಿರಸ್ತೇದಾರ್ ವಿಜಯ್ ಕುಮಾರ್, ಅಧಿಕಾರಿಗಳಾದ ಶಿವರಾಮ್ ರೆಡ್ಡಿ, ಅನಿಲ್ ಕುಮಾರ್, ಮಂಜುನಾಥ, ಬಸವನಗೌಡ, ಶೇಕ್ಷಾವಲಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅಧಿಕಾರಿಗಳಿಗೆ
  • ತಹಸೀಲ್ದಾರ್
  • ತಾಕೀತು
ಕುರುಗೋಡು: ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಕುಡಿವ ನೀರಿನ ಸಮಸ್ಯೆ ತಲೆದೋರದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತಹಸೀಲ್ದಾರ್ ನರಸಪ್ಪ ಅಧಿಕಾರಿಗಳಿಗೆ ತಾಕೀತು ಮಾಡಿದರು.
ತಾಲೂಕು ಆಡಳಿತ ಕಚೇರಿಯಲ್ಲಿ ತಾಲೂಕು ಕಾರ್ಯಪಡೆ ಸಮಿತಿ ಸಭೆಯಲ್ಲಿ ಶುಕ್ರವಾರ ಮಾತನಾಡಿ, ಪುರಸಭೆ, ಗ್ರಾಪಂ ವ್ಯಾಪ್ತಿಯಲ್ಲಿ ಕೂಡಲೇ ಕೊಳವೆ ಬಾವಿ ದುರಸ್ತಿ ಮಾಡಿಸಬೇಕು. ಅಗತ್ಯವಿದ್ದರೆ ಖಾಸಗಿ ಕೊಳವೆ ಬಾವಿಯಿಂದ ನೀರು ಪೂರೈಸಲು ಆಯಾ ಪಿಡಿಒ ಜವಾಬ್ದಾರಿ ವಹಿಸಬೇಕು. ಎಲ್‌ಎಲ್‌ಸಿ ಕಾಲುವೆ ಮೂಲಕ ತಾಲೂಕಿನ 13 ಕುಡಿವ ನೀರಿನ ಕೆರೆಗೆ ನೀರು ತುಂಬಿಸುವುದು. ಅವುಗಳ ಸುರಕ್ಷತೆ ಕಾಪಾಡಲು ಸಕಾಲಕ್ಕೆ ಸ್ವಚ್ಛತೆ, ಬಾವಿ, ಕೆರೆಯ ನೀರಿನ ಗುಣಮಟ್ಟ ಆಗಾಗ ಪರಿಶೀಲಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸಾಂಕ್ರಾಮಿಕ ರೋಗ ತಡೆಗೆ ವೈದ್ಯಕೀಯ ಶಿಬಿರ ಏರ್ಪಡಿಸುವ ಜತೆಗೆ ಅರಿವು ಮೂಡಿಸಬೇಕು. ಬಿಸಿಲ ಬೇಗುದಿಯಿಂದ ರಕ್ಷಿಸಿಕೊಳ್ಳಲು ಸಾರ್ವಜನಿಕರಿಗೆ ಆಸ್ಪತ್ರೆ, ಅಂಗನವಾಡಿ, ಕೂಸಿನ ಮನೆಗಳಲ್ಲಿ ನೀರಿನ ವ್ಯವಸ್ಥೆ ಮಾಡಬೇಕು. ವಯೋದ್ಧರಿಗೆ ಸನ್ ಸ್ಟ್ರೋಕ್ ಆಗದಂತೆ ರಕ್ಷಣೆ ಒದಗಿಸಬೇಕು.
ಪಶು ಸಂಗೋಪನ ಇಲಾಖೆಯಿಂದ ಜಾನುವಾರುಗಳಿಗೆ ಅಗತ್ಯ ಮೇವಿನ ಲಭ್ಯತೆ ಕಡೆಗೆ ಗಮನ ಹರಿಸಿ ಮೇವು ಕಲೆ ಹಾಕಬೇಕು. ದೊಡ್ಡ ರೈತರಿಂದ ಮೇವಿನ ಸಂಗ್ರಹಣೆ ಮಾಡುವುದು. ಕೆಲ ಗ್ರಾಮಗಳಲ್ಲಿನ ವಿದ್ಯುತ್ ಸಮಸ್ಯೆ ಪರಿಹರಿಸಲು ಟಿಸಿ ಪೂರೈಸಲು ಕ್ರಮ ಕೈಗೊಳ್ಳಬೇಕು ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net