ದೇಶ-ದೇಗುಲಗಳ ಮೇಲೆ ಭಕ್ತಿ ಇರಲಿ

ಹಗರಿಬೊಮ್ಮನಹಳ್ಳಿಯಲ್ಲಿ ಆಯೋಜಿಸಿದ್ದ ಗುರುಪೂರ್ಣಿಮೆ ಕಾರ್ಯಕ್ರಮದಲ್ಲಿ ಶ್ರೀ ಹಾಲಸಿದ್ದೇಶ್ವರ ಸ್ವಾಮೀಜಿ, ಹಿಂದೂ ಜನಜಾಗೃತಿಯ ತುಮಕೂರು ಜಿಲ್ಲಾ ವಕ್ತರ ಸಂಗೀತಾ ಆಚಾರ, ತಾಲೂಕು ಸಂಚಾಲಕರಾದ ಪೂಜಾ ಶ್ರೀಕಾಂತ್ ಇತರರಿದ್ದರು.
ಹಗರಿಬೊಮ್ಮನಹಳ್ಳಿಯಲ್ಲಿ ಆಯೋಜಿಸಿದ್ದ ಗುರುಪೂರ್ಣಿಮೆ ಕಾರ್ಯಕ್ರಮದಲ್ಲಿ ಶ್ರೀ ಹಾಲಸಿದ್ದೇಶ್ವರ ಸ್ವಾಮೀಜಿ, ಹಿಂದೂ ಜನಜಾಗೃತಿಯ ತುಮಕೂರು ಜಿಲ್ಲಾ ವಕ್ತರ ಸಂಗೀತಾ ಆಚಾರ, ತಾಲೂಕು ಸಂಚಾಲಕರಾದ ಪೂಜಾ ಶ್ರೀಕಾಂತ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶ್ರೀ ಹಾಲಸಿದ್ದೇಶ್ವರ ಸ್ವಾಮೀಜಿ ಸಲಹೆ
  • ಗುರುಪೂರ್ಣಿಮೆ ಕಾರ್ಯಕ್ರಮ

ಹಗರಿಬೊಮ್ಮನಹಳ್ಳಿ: ದೇಗುಲಗಳು ಮತ್ತು ದೇಶದ ಮೇಲೆ ಗೌರವ-ಭಕ್ತಿ ಹೊಂದಿದ್ದೇ ಆದಲ್ಲಿ ಸಂಸ್ಕಾರ ತಾನಾಗಿಯೇ ಬರುತ್ತೆ ಎಂದು ಹಾಲಸ್ವಾಮಿ ಮಠದ ಶ್ರೀ ಹಾಲಸಿದ್ದೇಶ್ವರ ಸ್ವಾಮೀಜಿ ಹೇಳಿದರು.

ಶ್ರೀ ವಾಲ್ಮೀಕಿ ಭವನದಲ್ಲಿ ಹಿಂದೂ ಜನಜಾಗೃತಿ ತಾಲೂಕು ಸಮಿತಿ ಶುಕ್ರವಾರ ಗುರುಪೂರ್ಣಿಮೆ ನಿಮಿತ್ತ ಆಯೋಜಿಸಿದ್ದ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಸಂಘರ್ಷ ಮತ್ತು ಸಾಧನೆಯ ದಿಶೆ ಕುರಿರ ಜನಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಪಾಲಕರು ಮೊದಲು ಸಂಸ್ಕಾರ-ಸಂಸ್ಕೃತಿ ಅಳವಡಿಸಿಕೊಳ್ಳಿ. ನಿಮ್ಮನ್ನು ನೋಡುತಿದ್ದಂತೆ ಮಕ್ಕಳು ಸಹ ಪಾಲಿಸುತ್ತಾರೆ ಎಂದರು.
ಹಿಂದೂ ಜನಜಾಗೃತಿಯ ತುಮಕೂರು ಜಿಲ್ಲಾ ವಕ್ತರ ಸಂಗೀತಾ ಆಚಾರ ಮಾತನಾಡಿ, ದೇಶ ಮತ್ತು ಧರ್ಮ ರಕ್ಷಣೆಗಾಗಿ ಸಕ್ರಿಯವಾಗಿ ಮುಂದಾಗಬೇಕು. ದೇಶ-ಧರ್ಮದ ಮೇಲಾಗುತ್ತಿರುವ ಆಘಾತಗಳು ಕೇವಲ ಗಡಿಗೆ ಸೀಮಿತವಾಗಿಲ್ಲ. ನೇರ ನಮ್ಮ ಮನೆಬಾಗಿಲಿಗೆ ಬಂದು ತಲುಪಲಿವೆ ಎಂದು ಎಚ್ಚರಿಸಿದರು.
ಜನಜಾಗೃತಿ ತಾಲೂಕು ಸಂಚಾಲಕರಾದ ಪೂಜಾ ಶ್ರೀಕಾಂತ್, ಪ್ರಮುಖರಾದ ಮಾದವಿ ಚಿದ್ರಿ, ಸಂಗೀತಾ ಜನ್ನು, ಸೋಗಿ ವೀರಪ್ಪ, ನಿವೃತ್ತ ಪೇದೆ ಮಲ್ಲಣ್ಣ, ನಿವೃತ್ತ ಪ್ರಾಚಾರ್ಯ ಚಂದ್ರಮೌಳಿ, ಎಪಿಎಂಸಿ ಮಲ್ಲಣ್ಣ, ರೆಡ್ಡಿ ಸಮಾಜದ ತಾಲೂಕು ಅಧ್ಯಕ್ಷ ಬಸವರಾಜ ರೆಡ್ಡಿ, ಗದ್ದಿಕೆರೆ ನಾಗಭೂಷಣ, ವಕೀಲರಾದ ಅಕ್ಕಿ ಮಲ್ಲಿಕಾರ್ಜುನ, ಜಾಣ ಶಿವಾನಂದ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net