ಯುವ ಜನಾಂಗ ಸಾಮಾಜಿಕ ಜಾಲತಾಣಗಳಿಂದ ಹೊರಬರಲಿ Young Generation

ಸಿರಿಗೇರಿಯಲ್ಲಿ ಸಂಸಾರದಲ್ಲಿ ಸನಿದಪ ನಾಟಕ ಪ್ರದರ್ಶನಕ್ಕೆ ಗ್ರಾಪಂ ಸದಸ್ಯ ಎಸ್.ಎಂ.ಅಡಿವೆಯ್ಯ ಸ್ವಾಮಿ ಚಾಲನೆ ನೀಡಿದರು.
ಸಿರಿಗೇರಿಯಲ್ಲಿ ಸಂಸಾರದಲ್ಲಿ ಸನಿದಪ ನಾಟಕ ಪ್ರದರ್ಶನಕ್ಕೆ ಗ್ರಾಪಂ ಸದಸ್ಯ ಎಸ್.ಎಂ.ಅಡಿವೆಯ್ಯ ಸ್ವಾಮಿ ಚಾಲನೆ ನೀಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ಗ್ರಾಮ ಪಂಚಾಯಿತಿ ಸದಸ್ಯ ಎಸ್.ಎಂ ಅಡಿವೆಯ್ಯ ಸ್ವಾಮಿ
  • ಸಂಸಾರದಲ್ಲಿ ಸನಿದಪ ನಾಟಕ ಪ್ರದರ್ಶನ
ಸಿರಿಗೇರಿ: ಈ ಹಿಂದಿನ ಜನರು ಬಯಲಾಟ, ನಾಟಕಗಳನ್ನು ನೋಡುವುದರೊಂದಿಗೆ ಪುರಾಣ ಕತೆಗಳನ್ನು ಕೇಳುತ್ತಿದ್ದರು. ಆದರೆ ಈಗಿನ ಯುವ ಸಮೂಹ ಸಾಮಾಜಿಕ ಜಾಲತಾಣಗಳ ಪ್ರಪಂಚದಲ್ಲಿ ಮುಳುಗಿರುವುದು ವಿಷಾದನೀಯ ಸಂಗತಿ ಎಂದು ಗ್ರಾಮ ಪಂಚಾಯಿತಿ ಸದಸ್ಯ ಎಸ್.ಎಂ ಅಡಿವೆಯ್ಯ ಸ್ವಾಮಿ ತಿಳಿಸಿದರು.
ಪಟ್ಟಣದ ಶ್ರೀ ಶಂಭುಲಿಂಗೇಶ್ವರ ದೇವಸ್ಥಾನದ ರಂಗಮಂದಿರದಲ್ಲಿ ಮುದ್ದಟನೂರು ಲಕ್ಷ್ಮೀನಗರ ಕ್ಯಾಂಪಿನ ಹೆಜ್ಜೆ ಗೆಜ್ಜೆ ಬಯಲಾಟ ಕಲಾ ಟ್ರಸ್ಟ್‌ನಿಂದ ಆಯೋಜಿಸಿದ್ದ ಸಂಸಾರದಲ್ಲಿ ಸನಿದಪ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.
ಬಯಲಾಟ ಅಕಾಡೆಮಿ ಸದಸ್ಯ, ಹಾರ್ಮೋನಿಯಂ ಮಾಸ್ಟರ್ ಎಚ್.ತಿಪ್ಪೇಸ್ವಾಮಿ ಮಾತನಾಡಿ, ಕಲಾವಿದರು ಉತ್ತುಂಗಕೇರಲು ಪ್ರೇಕ್ಷಕರೇ ಕಾರಣ ಎಂದರು. ಶಿಕ್ಷಕಿ ಸುಮಂಗಳಾ ಮೇಟಿ ಮಾತನಾಡಿ, ಗ್ರಾಮದ ಕಲಾವಿದರು ರಾಜ್ಯ, ರಾಷ್ಟ್ರಮಟ್ಟದಲ್ಲಿ ಪ್ರದರ್ಶನ ನೀಡಿ ಗ್ರಾಮಕ್ಕೆ ಕೀರ್ತಿ ತರಬೇಕೆಂದು ಆಶಿಸಿದರು. ಕವಿ ಎ.ಪಿ ಜಯಧರ ಆಚಾರಿ ಹನಿಗವನ ಹೇಳಿದರು.
ಶ್ರೀ ವಿಶ್ವಗುರು ಬಯಲಾಟ ಟ್ರಸ್ಟಿನ ಅಧ್ಯಕ್ಷ ವೈ.ಮಲ್ಲಿಕಾರ್ಜುನ, ಪ್ರಾ.ಕೃ.ಪ.ಸ.ಸಂಘದ ಮಾಜಿ ಅಧ್ಯಕ್ಷೆ ಗೋಡೆ ಹೇಮಾವತಿ,ನಿನಗಾಗಿ ನಾವು ಸಂಸ್ಥೆಯ ಪದಾಧಿಕಾರಿಗಳಾದ ಶಿವಾಜಿರಾವ್, ಪುನೀತ್ ಕುಮಾರ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net