ಏಕರೂಪ ವೇತನ ಕಾಯ್ದೆ ಜಾರಿಗೊಳಿಸಲಿ

ಕಂಪ್ಲಿಯಲ್ಲಿ ಶಿಕ್ಷಕರು ತೋಳಿಗೆ ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ನಡೆಸಿದರು.
ಕಂಪ್ಲಿಯಲ್ಲಿ ಶಿಕ್ಷಕರು ತೋಳಿಗೆ ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ನಡೆಸಿದರು.
Published on
ಕಂಪ್ಲಿ: ಸೇವಾನಿರತ ಶಿಕ್ಷಕರಿಗೆ ಸುಪ್ರೀಂಕೋರ್ಟ್ ಟಿಇಟಿ ಕಡ್ಡಾಯಗೊಳಿಸಿರುವುದನ್ನು ಕಾನೂನಿನ ಮೂಲಕ ತೆಗೆದು ಹಾಕಬೇಕೆಂಬುದು ಸೇರಿದಂತೆ ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪಟ್ಟಣದಲ್ಲಿ ಶಿಕ್ಷಕರು ತೋಳಿಗೆ ಕಪ್ಪುಪಟ್ಟಿ ಧರಿಸಿ ಗುರುವಾರ ಕರ್ತವ್ಯ ನಿರ್ವಹಿಸಿದರು.
ಸತ್ಯನಾರಾಯಣಪೇಟೆ ಸಹಿಪ್ರಾ ಶಾಲೆಯ ಆವರಣದಲ್ಲಿರುವ ಟಿಎಲ್‌ಸಿ ಕೇಂದ್ರದಲ್ಲಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಹನುಮಂತಪ್ಪ ಮಾತನಾಡಿ, ಗುತ್ತಿಗೆ ಆಧಾರದ ಬದಲಿಗೆ ಕಾಯಂ ಶಿಕ್ಷಕರನ್ನು ನೇಮಕಗೊಳಿಸಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವುದರೊಂದಿಗೆ ರಾಷ್ಟ್ರದ ಎಲ್ಲ ಶಿಕ್ಷಕರಿಗೆ ಏಕರೂಪ ವೇತನ ಜಾರಿಗೊಳಿಸಬೇಕು. ಕೇಂದ್ರ ಸರ್ಕಾರದ ಮಾದರಿಯಲ್ಲೇ ರಾಷ್ಟ್ರದ ಎಲ್ಲ ರಾಜ್ಯಗಳ ಶಿಕ್ಷಕರಿಗೆ ವೇತನ ಜಾರಿಗೊಳಿಸಬೇಕು, ಎನ್‌ಪಿಎಸ್ ತೆಗೆದು ಒಪಿಎಸ್ ಅಳವಡಿಸಬೇಕು ಎಂದು ಒತ್ತಾಯಿಸಿದರು.
ಕಾರ್ಯದರ್ಶಿ ಸುನೀತಾ ಪೂಜಾರ, ಉಪಾಧ್ಯಕ್ಷೆ ಗಂಗಮ್ಮ, ಜಿಲ್ಲಾ ನಾಮನಿರ್ದೇಶಿತ ಸದಸ್ಯ ಚಂದ್ರಶೇಖರ, ಶಿಕ್ಷಣ ಸಂಯೋಜಕ ಎಂ.ರೇವಣ್ಣ, ಸಿಆರ್‌ಪಿಗಳಾದ ಎ.ಎಸ್.ಭೂಮೇಶ್ವರ, ಕರುಣಾಕಾರಚಾರ್, ಎನ್.ಬಿ.ರೇಣುಕಾರಾಧ್ಯ, ಶಿಕ್ಷಕರಾದ ಭವ್ಯಾ, ಪಂಪಯ್ಯ, ವೀರಕುಮಾರ್, ಖಲೀಲ್, ಸಂಗನಗೌಡ, ಹನುಮನಗೌಡ, ವಿರೂಪಾಕ್ಷಪ್ಪ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net