ವಾಲ್ಮೀಕಿ ಪ್ರತಿಮೆ ಅನಾವರಣಗೊಳಿಸಲಿ

ಕಂಪ್ಲಿಯಲ್ಲಿ ವಾಲ್ಮೀಕಿ ಜಾತ್ರೆ ಭಿತ್ತಿಪತ್ರಗಳನ್ನು ವಾಲ್ಮೀಕಿ ನಾಯಕ ಮಹಾಸಭಾ ತಾಲೂಕು ಅಧ್ಯಕ್ಷ ನೀರಗಂಟಿ ವೀರೇಶ್ ಬಿಡುಗಡೆಗೊಳಿಸಿದರು.
ಕಂಪ್ಲಿಯಲ್ಲಿ ವಾಲ್ಮೀಕಿ ಜಾತ್ರೆ ಭಿತ್ತಿಪತ್ರಗಳನ್ನು ವಾಲ್ಮೀಕಿ ನಾಯಕ ಮಹಾಸಭಾ ತಾಲೂಕು ಅಧ್ಯಕ್ಷ ನೀರಗಂಟಿ ವೀರೇಶ್ ಬಿಡುಗಡೆಗೊಳಿಸಿದರು.
Published on
ಕಂಪ್ಲಿ: ಜನರಲ್ಲಿ ಅಕ್ಷರ, ಸಂಘಟನೆ ಮತ್ತು ಧರ್ಮ ಜಾಗೃತಿ ಮೂಡಿಸುವ ಹಿನ್ನೆಲೆಯಲ್ಲಿ ರಾಜನಹಳ್ಳಿ ಗುರುಪೀಠದಲ್ಲಿ ಫೆ.8 ಮತ್ತು 9ರಂದು ವಾಲ್ಮೀಕಿ ಜಾತ್ರೆ ಆಯೋಜಿಸಲಾಗಿದೆ ಎಂದು ವಾಲ್ಮೀಕಿ ನಾಯಕ ಮಹಾಸಭಾ ತಾಲೂಕು ಅಧ್ಯಕ್ಷ ನೀರಗಂಟಿ ವೀರೇಶ್ ಹೇಳಿದರು.
ಪಟ್ಟಣದಲ್ಲಿ ವಾಲ್ಮೀಕಿ ಜಾತ್ರೆ ಭಿತ್ತಿಪತ್ರ ಬಿಡುಗಡೆಗೊಳಿಸಿ ಗುರುವಾರ ಮಾತನಾಡಿದರು. ವಾಲ್ಮೀಕಿ ಸಮುದಾಯದ ಬೇಡಿಕೆ, ಸಮಸ್ಯೆ, ಹಕ್ಕೊತ್ತಾಯಗಳನ್ನು ಸರ್ಕಾರದ ಗಮನಕ್ಕೆ ತಂದು, ಪರಿಹರಿಸುವಂತೆ ಒತ್ತಾಯಿಸಲು ಜಾತ್ರೆಯಲ್ಲಿ ಜಾಗೃತಿ ಮೂಡಿಸಲಾಗುವುದು ಎಂದರು.
ಜಾತ್ರೆಯಲ್ಲಿ ಭಕ್ತರ ಅನ್ನ ದಾಸೋಹಕ್ಕಾಗಿ ಶಾಸಕ ಜೆ.ಎನ್.ಗಣೇಶ್ ಅವರು ಒಂದು ಲೋಡ್ ಅಕ್ಕಿ ನೀಡುವುದಾಗಿ ಭರವಸೆ ನೀಡಿದ್ದು, ಭಕ್ತರು ಶಕ್ತಾನುಸಾರ ದೇಣಿಗೆ ನೀಡುವಲ್ಲಿ ಮುಂದಾಗಬೇಕು. ಜ.3ರಂದು ಬಳ್ಳಾರಿಯಲ್ಲಿ ನಡೆಯಬೇಕಿದ್ದ ವಾಲ್ಮೀಕಿ ಪ್ರತಿಮೆ ಅನಾವರಣ ರಾಜಕೀಯ ಮೇಲಾಟದಿಂದಾಗಿ ಸ್ಥಗಿತಗೊಂಡಿದೆ. ಕೂಡಲೇ ಸರ್ಕಾರ ಬಳ್ಳಾರಿಯಲ್ಲಿ ವಾಲ್ಮೀಕಿ ಪ್ರತಿಮೆಯನ್ನು ಅನಾವರಣಗೊಳಿಸಲು ದಿನಾಂಕ ನಿಗದಿಗೊಳಿಸಬೇಕು ಎಂದು ಒತ್ತಾಯಿಸಿದರು.
ಮಹಾಸಭಾ ತಾಲೂಕು ಪ್ರತಿನಿಧಿ ಬಿ.ನಾರಾಯಣಪ್ಪ, ಪದಾಧಿಕಾರಿಗಳಾದ ವಾಲ್ಮೀಕಿ ಈರಣ್ಣ, ವೆಂಕೋಬಣ್ಣ, ನಾಗಭೂಷಣ, ದುರುಗಪ್ಪ, ವೀರೇಶ್, ಗೋವಿಂದಪ್ಪ, ನಾಗರಾಜ, ಸುಗ್ಗೇನಹಳ್ಳಿ ಜಡೆಪ್ಪ, ಸುಧಾಕರ, ರಂಗಯ್ಯ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net