ಹಗರಣದ ಹಣ ನಿಗಮಕ್ಕೆ ಮರಳಿಸಲಿ

ಕುರುಗೋಡು ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಶಾಸಕ ಸುರೇಶ್ ಬಾಬು ಮಾತನಾಡಿದರು. ಶಾಸಕ ಗಾಲಿ ಜನಾರ್ಧನ ರೆಡ್ಡಿ, ಬಿಜೆಪಿ ಜಿಲ್ಲಾ ಅಧ್ಯಕ್ಷ ಅನೀಲ್ ಕುಮಾರ್ ಮೋಕಾ, ಮಂಡಲ ಅಧ್ಯಕ್ಷ ಮದಿರೆ ಕುಮಾರಸ್ವಾಮಿ, ಬುಡಾ ಅಧ್ಯಕ್ಷ ದಮ್ಮೂರು ಶೇಖರ್ ಇದ್ದರು.
ಕುರುಗೋಡು ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಶಾಸಕ ಸುರೇಶ್ ಬಾಬು ಮಾತನಾಡಿದರು. ಶಾಸಕ ಗಾಲಿ ಜನಾರ್ಧನ ರೆಡ್ಡಿ, ಬಿಜೆಪಿ ಜಿಲ್ಲಾ ಅಧ್ಯಕ್ಷ ಅನೀಲ್ ಕುಮಾರ್ ಮೋಕಾ, ಮಂಡಲ ಅಧ್ಯಕ್ಷ ಮದಿರೆ ಕುಮಾರಸ್ವಾಮಿ, ಬುಡಾ ಅಧ್ಯಕ್ಷ ದಮ್ಮೂರು ಶೇಖರ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಬಿಜೆಪಿ
  • ಕಾರ್ಯಕರ್ತರ
  • ಸಭೆ
ಕುರುಗೋಡು: ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಜೂರಾದ ಮಿನಿ ವಿಧಾನಸೌಧ, ನೂರು ಹಾಸಿಗೆ ಆಸ್ಪತ್ರೆ, ಕಂಪ್ಲಿ ರಸ್ತೆ, ಕುಡಿವ ನೀರಿನ ಕೆರೆ ನಿರ್ಮಾಣ ಸೇರಿ ಇತರ ಕಾಮಗಾರಿಯನ್ನು ಶಾಸಕ ಗಣೇಶ್ ಈವರೆಗೂ ಪೂರ್ಣಗೊಳಿಸಿಲ್ಲ ಎಂದು ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಕಿಡಿಕಾರಿದರು.
ಬಿಜೆಪಿ ಕಚೇರಿಯಲ್ಲಿ ಕಾಂಗ್ರೆಸ್ ಸರ್ಕಾರದ ದುರಾಡಳಿತ ಖಂಡಿಸಿ ಹಮ್ಮಿಕೊಂಡ ಪಾದಯಾತ್ರೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಪ್ರಚಾರಪ್ರಿಯ ಗಣೇಶ್ ನಂಬಿ ಬಿಜೆಪಿ ಬಿಟ್ಟಿರುವ ಪ್ರತಿಯೊಬ್ಬರನ್ನೂ ಮರಳಿ ಪಕ್ಷಕ್ಕೆ ಕರೆತಂದು ಕಂಪ್ಲಿ ಕ್ಷೇತ್ರದಲ್ಲಿ ಸುರೇಶ್ ಬಾಬು ಗೆಲುವಿಗೆ ಶ್ರಮಿಸುವೆ. ಜತೆಗೆ ವಾಲ್ಮೀಕಿ ಹಗರಣದಲ್ಲಿ ಸಿಲುಕಿರುವ ಬಿ ನಾಗೇಂದ್ರ ರಾಜೀನಾಮೆಗೆ ಮಾತ್ರ ಪಾದಯಾತ್ರೆ ನಡೆಸುತ್ತಿಲ್ಲ.
ಹಗರಣದ ಹಣ ನಿಗಮಕ್ಕೆ ಮರಳಿಸಬೇಕು. ಗೃಹಲಕ್ಷ್ಮಿ ಯೋಜನೆಯ 5 ಸಾವಿರ ಕೋಟಿ ರೂ.ಲೆಕ್ಕ ನೀಡಬೇಕು. ನವಲಿ ಬಳಿ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಪುನರ್ ಚಾಲನೆಗೆ ಒತ್ತಾಯಿಸಿ ಪಾದಯಾತ್ರೆ ಮಾಡಲಾಗುತ್ತಿದೆ. ಈ ಹಿಂದೆ ನಾನು ಸೇರಿದಂತೆ ಕರುಣಾಕರ ರೆಡ್ಡಿ, ಶ್ರೀರಾಮುಲು ಸಚಿವರಾಗಿದ್ದಾಗ ಯಾವುದೇ ಹಗರಣದಲ್ಲಿ ಸಿಲುಕಿರಲಿಲ್ಲ. ಆದರೆ ನಾಗೇಂದ್ರ ಮಾದಲ ಬಾರಿ ಸಚಿವರಾಗಿ ದಲಿತರ ಹಣ ಕೊಳ್ಳೆ ಹೊಡೆದಿದ್ದಾನೆ ಎಂದು ಆರೋಪಿಸಿದರು.
ಮಾಜಿ ಶಾಸಕ ಟಿ ಎಚ್ ಸುರೇಶ್ ಬಾಬು ಮಾತನಾಡಿ, ತುಂಗಭದ್ರಾ ಜಲಾಶಯದಲ್ಲಿ 90 ಟಿಎಂಸಿ ನೀರಿದ್ದರೂ ಕ್ಷೇತ್ರದ ರೈತರಿಗೆ ನೀರು ಬಿಡಿಸದ ಶಾಸಕ ಜೆ ಎನ್ ಗಣೇಶ್ ಕಾಲುವೆಯ ಮೇಲೆ ತೋರಿಕೆಗೆ ಓಡಾಡುತ್ತಿದ್ದಾನೆ. ನಿಗಮದ ನಿಯಮದಂತೆ ಕಾಲುವೆಗಳಿಗೆ ನೀರು ಹರಿಸಿದರೂ ನಾನೇ ಹೆಚ್ಚು ನೀರು ಬಿಡಿಸಿದ್ದೇನೆ ಎಂದು ಸುಳ್ಳು ಹೇಳಿಕೊಂಡು ರೈತರಿಗೆ ಮೋಸಮಾಡುತ್ತಿದ್ದಾನೆ ಎಂದು ಆರೋಪಿಸಿದರು.
ನಾನು ಶಾಸಕನಾಗಿದ್ದ ಎರಡು ಅವಧಿಯಲ್ಲಿ ಯಾವುದೇ ಕಮಿಷನ್ ಕೇಳಿರಲಿಲ್ಲ. ಅಧಿಕಾರಿಗಳ ವರ್ಗಾವಣೆಯಲ್ಲಿ ಹಣ ಕೇಳಿಲ್ಲ. ಪಾರದರ್ಶಕವಾಗಿ ಜನರ ಸೇವೆ ಮಾಡಿದ್ದೇನೆ. ಆದರೆ ಈಗಿನ ಶಾಸಕ ಕಮಿಷನ್ ಮೊದಲು ಕೊಟ್ಟರೆ ಮಾತ್ರ ಭೂಮಿ ಪೂಜೆಗೆ ಬರುವುದು. ಹಣಕೊಟ್ಟ ಅಧಿಕಾರಿಗಳನ್ನು ಮಾತ್ರ ಕ್ಷೇತ್ರದಲ್ಲಿ ಕೆಲಸ ಮಾಡಲು ಅವಕಾಶ ಕಲ್ಪಿಸುವ ದಂಧೆಯಲ್ಲಿ ತೊಡಗಿದ್ದಾರೆ. ಬಡವ ಎಂದು ಜನರಿಗೆ ಮಂಕು ಬೂದಿ ಎರಚಿ ಮತ ಹಾಕಿಸಿಕೊಂಡು ಎರಡು ಅವಧಿಯಲ್ಲಿ ನೂರಾರು ಎಕರೆ ಭೂಮಿ ಖರೀದಿಸಿದ್ದಾರೆ.
ರೈತರಿಂದ ಕಡಿಮೆ ಹಣದಲ್ಲಿ ಭೂಮಿ ಖರೀದಿಸಿ, ನಿವೇಶನಗಳಾಗಿ ಪರಿವರ್ತಿಸಿ ಅವರಿಗೆ ಅಧಿಕ ಹಣಕ್ಕೆ ಮಾರಾಟ ಮಾಡುವ ರಿಯಲ್ ಎಸ್ಟೇಟ್‌ನಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದರು.
ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಚ್ ಹನುಮಂತಪ್ಪ, ಮುಖಂಡರಾದ ಎ.ತಿಮ್ಮಾರೆಡ್ಡಿ, ಗುತ್ತಿಗನುರು ವಿರೂಪಕ್ಷಿಗೌಡ, ಜೆ ಸೋಮಶೇಖರ ಗೌಡ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net