ಖರೀದಿ ಷರತ್ತು ಹಿಂಪಡೆಯಲಿ

ಹೂವಿನಹಡಗಲಿ ತಹಸೀಲ್ದಾರ್ ಸಂತೋಷ್‌ಕುಮಾರ್ ಅವರಿಗೆ  ಕರ್ನಾಟಕ ರೈತ ಸಂಘದಿಂದ ಮನವಿ ಸಲ್ಲಿಸಲಾಯಿತು. ತಾಲೂಕು ಅಧ್ಯಕ್ಷ ಹೊಸಮನಿ ಸಿದ್ದಪ್ಪ, ಉಪಾಧ್ಯಕ್ಷ ವಿಠಲನಾಯ್ಕ, ಪ್ರಧಾನ ಕಾರ್ಯದರ್ಶಿ ಶಿವರಾಜ, ಕಾರ್ಯಾಧ್ಯಕ್ಷರಾದ ಮಂಜುನಾಥನಾಯ್ಕ, ಢಾಕ್ಯನಾಯ್ಕ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಕರ್ನಾಟಕ
  • ರಾಜ್ಯ
  • ರೈತ
ಹೂವಿನಹಡಗಲಿ: ಸರ್ಕಾರ ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸಲು ಮೂರು ಹಂತದಲ್ಲಿ ಆದೇಶ ಹೊರಡಿಸಿದ್ದು, ಯಾವುದೇ ರೀತಿ ಷರತ್ತುಗಳನ್ನು ಬದಲಾಯಿಸಿಲ್ಲ. ಕೂಡಲೇ ಷರತ್ತುಗಳನ್ನು ಬದಲಾಯಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಸಂತೋಷ್‌ಕುಮಾರ್ ಅವರಿಗೆ ಸೋಮವಾರ ಮನವಿ ಸಲ್ಲಿಸಿತು.
ತಾಲೂಕು ಅಧ್ಯಕ್ಷ ಹೊಸಮನಿ ಸಿದ್ದಪ್ಪ ಮಾತನಾಡಿ, ಮೆಕ್ಕೆಜೋಳ ಖರೀದಿ ಕುರಿತ ಸರ್ಕಾರದ ಆದೇಶದಲ್ಲಿ ಸಾಕಷ್ಟು ಗೊಂದಲಗಳಿವೆ. ರೈತರು ಫಸಲು ಮಾರಾಟ ಮಾಡಲು ಪರದಾಡಬೇಕಾಗಿದೆ.
ಸ್ಥಳೀಯವಾಗಿ ಖರೀದಿ ಕೇಂದ್ರ ಆರಂಭಿಸಿ ರೈತರಿಗೆ ಅನುಕೂಲ ಮಾಡಬೇಕಿದ್ದ ಸರ್ಕಾರ ಷರತ್ತುಗಳನ್ನು ಹಾಕುವ ಮೂಲಕ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ರೈತರು ಬೇರೆ ಬೇರೆ ಭಾಗಗಳಿಗೆ ಹೋಗಿ ನೋಂದಣಿ ಮಾಡಿಕೊಂಡು ಮೆಕ್ಕೆಜೋಳ ಮಾರಾಟ ಮಾಡಬೇಕು ಎಂಬ ಷರತ್ತನ್ನು ಬದಲಾಯಿಸಿ ಒಂದೇ ಸೂರಿನಡಿಯಲ್ಲಿ ಖರೀದಿ ಕೇಂದ್ರ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net