ಸಂಡೂರು ತಾಲೂಕಿನವರಿಗೆ ಉದ್ಯೋಗ ಕಲ್ಪಿಸಲಿ

ಸಂಡೂರಿನಲ್ಲಿ ತಾಲೂಕು ಗಣಿ ಅದಿರು ಸಾಗಣೆ ಗುತ್ತಿಗೆದಾರರ ಸಭೆಯಲ್ಲಿ ಸಂಘದ ಅಧ್ಯಕ್ಷ ಬಿ.ನವಲೂಟಿ ಜಯಣ್ಣ ಮಾತನಾಡಿದರು.
ಸಂಡೂರಿನಲ್ಲಿ ತಾಲೂಕು ಗಣಿ ಅದಿರು ಸಾಗಣೆ ಗುತ್ತಿಗೆದಾರರ ಸಭೆಯಲ್ಲಿ ಸಂಘದ ಅಧ್ಯಕ್ಷ ಬಿ.ನವಲೂಟಿ ಜಯಣ್ಣ ಮಾತನಾಡಿದರು.
Published on
ಸಂಡೂರು: ಕೊಪ್ಪಳ, ಬಳ್ಳಾರಿ, ವಿಜಯನಗರ ಜಿಲ್ಲೆಗಳ ಕಾರ್ಖಾನೆಗಳಿಗೆ ಸಂಡೂರು ತಾಲೂಕಿನಿಂದ ಅದಿರು ಸರಬರಾಜು ಆಗುತ್ತಿದ್ದು, ಸ್ಥಳೀಯ ಟ್ರಾನ್ಸ್ ಪೋರ್ಟರ್‌ಗಳಿಗೆ ಅದಿರು ಸಾಗಾಣಿಕೆಗೆ ಮೊದಲ ಆದ್ಯತೆ ನೀಡಬೇಕು ಎಂದು ತಾಲೂಕು ಗಣಿ ಅದಿರು ಸಾಗಣೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ಬಿ.ನವಲೂಟಿ ಜಯಣ್ಣ ಒತ್ತಾಯಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕು ಗಣಿ ಅದಿರು ಸಾಗಣೆ ಗುತ್ತಿಗೆದಾರರ ಸಭೆಯಲ್ಲಿ ಬುಧವಾರ ಮಾತನಾಡಿದರು. ತಾಲೂಕಿನ ಗಣಿಗಳಿಂದ ಅದಿರು ಖರೀದಿಸುವ ಕಾರ್ಖಾನೆಗಳು ಸ್ಥಳೀಯ ಯುವಕರಿಗೆ ಉದ್ಯೋಗ ನೀಡಬೇಕು. ಅದಿರು ಸಾಗಾಣಿಕೆ ಮಾಡಿ ಬಿಲ್ ಸಲ್ಲಿಸಿದ 30 ದಿನದೊಳಗೆ ಅದಿರು ಸಾಗಾಣಿಕೆದಾರರಿಗೆ ಹಣ ಪಾವತಿಸಬೇಕು ಎಂದು ಆಗ್ರಹಿಸಿದರು.
ತಾಲೂಕಿನಿಂದ ಅದಿರು ಖರೀದಿಸುತ್ತಿರುವ ಕಾರ್ಖಾನೆಯವರು ಸಂಡೂರಿನಲ್ಲಿ ಸಿಎಸ್‌ಆರ್ ಚಟುವಟಿಕೆ ಕೈಗೊಂಡಿಲ್ಲ. ಜಿಂದಾಲ್‌ನವರು ಟ್ರಾನ್ಸ್ ಪೋರ್ಟರ್‌ಗಳನ್ನು ಕಿತ್ತು ಹಾಕಿದ್ದಾರೆ. ಕಾರ್ಖಾನೆಗಳಿಗೆ ಲಾರಿಗಳ ಮೂಲಕ ಅದಿರು ಸಾಗಣೆ ಮಾಡುವಾಗ ಪರಿಸರ ಮಾಲಿನ್ಯವಾಗುತ್ತಿದ್ದು, ಜನರು ನಾನಾ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾ ರೆ. ಅಫಘಾತಗಳಿಂದ ಸಾವು-ನೋವುಗಳಾಗುತ್ತಿವೆ. ಈ ಕುರಿತು ಜವಾಬ್ದಾರಿಯನ್ನು ಯಾವುದೇ ಕಾರ್ಖಾನೆ ತೆಗೆದುಕೊಳ್ಳುತ್ತಿಲ್ಲ ಎಂದು ದೂರಿದರು.
ಮನವಿಗಳನ್ನು ಕಾರ್ಖಾನೆಯವರೇ ಖುದ್ದು ಸ್ವೀಕರಿಸಬೇಕು. ಕಾರ್ಖಾನೆಯವರು ಸ್ವಂತ ಗಣಿ ಹೊಂದಿದಲ್ಲಿ ಅದಿರು ಸಾಗಾಣಿಕೆ ಮಾಡಲು ಅವಕಾಶ ನೀಡಬೇಕು. 2024ರ ಇಂಡಸ್ಟ್ರೀಯಲ್ ಪಾಲಿಸಿ ಮತ್ತು ಎಂಎಂಡಿಆರ್ ಆ್ಯಕ್ಟ್ ಪಾಲನೆ ಮಾಡಬೇಕೆಂದು ಆಗ್ರಹಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net