ನಿಟ್ಟೂರು ಗ್ರಾಮದಲ್ಲಿ ಭತ್ತದ ಗದ್ದೆ ನೀರಿಲ್ಲದೆ ಒಣಗಿರುವುದನ್ನು ಮಾಜಿ ಶಾಸಕ ಎಂ.ಎಸ್.ಸೋಮಲಿಂಗಪ್ಪ ಪರಿಶೀಲಿಸಿದರು.
Published on:
Copied
Follow Us
ಸಿರಗುಪ್ಪ: ತಾಲೂಕನ್ನು ಬರಪೀಡಿತ ಎಂದು ಘೋಷಿಸಿ ಬಿತ್ತನೆ ಮಾಡಿರುವ ಪ್ರತಿ ಹೆಕ್ಟೇರ್ ಭೂಮಿಗೆ 30 ಸಾವಿರ ರೂ., ಬಿತ್ತನೆ ಮಾಡದ ಭೂಮಿಗೆ 15 ಸಾವಿರ ರೂ. ಪರಿಹಾರ ನೀಡಬೇಕೆಂದು ಮಾಜಿ ಶಾಸಕ ಎಂ.ಎಸ್ ಸೋಮಲಿಂಗಪ್ಪ ಆಗ್ರಹಿಸಿದರು.
ನಿಟ್ಟೂರು ಗ್ರಾಮದಲ್ಲಿ ಒಣಗಿದ ಭತ್ತದ ಗದ್ದೆಗಳನ್ನು ವೀಕ್ಷಿಸಿ ಬುಧವಾರ ಮಾತನಾಡಿದರು. ಬೆಳೆ ಹಾನಿಯಾಗಿರುವ ರೈತರ ನೆರವಿಗೆ ಸರ್ಕಾರ ಕೂಡಲೇ ಧಾವಿಸಬೇಕು. ನದಿಯಲ್ಲಿ ನೀರಿಲ್ಲದೆ ಜಲಚರಗಳು ಸತ್ತಿವೆ. ನದಿಗೆ ನೀರು ಬಿಡದಿದ್ದರೆ ಜನ-ಜಾನುವಾರುಗಳು ಸಂಕಷ್ಟಕ್ಕೆ ಗುರಿಯಾಗುತ್ತವೆ. ಜಿಲ್ಲೆಯಲ್ಲಿ ವಾಡಿಕೆಯಂತೆ ಮಳೆಯಾಗಿಲ್ಲ. ಇದರಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಳೆಹಾನಿ ಸಮೀಕ್ಷೆಯನ್ನು ವಿಳಂಬ ಮಾಡದೆ ಶೀಘ್ರ ಪೂರ್ಣಗೊಳಿಸಿ, ಪರಿಹಾರ ವಿತರಣೆಗೆ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ವೀರನಗೌಡ, ಗುರುಸಿದ್ದಪ್ಪ, ನಡವಿ ಚಂದ್ರಗೌಡ, ನಾಗರಾಜ, ಯಮನೂರಪ್ಪ, ಯಂಕನಗೌಡ ಇತರರಿದ್ದರು.