ಸರ್ಕಾರ ಗೌರವಧನ ಹೆಚ್ಚಸಲಿ

ಬಳ್ಳಾರಿಯ ಡಿಸಿ ಕಚೇರಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್ ವತಿಯಿಂದ ಗೌರವ ಧನ ಹೆಚ್ಚಿಸುವಂತೆ ಎಡಿಸಿ ಮಹಮ್ಮದ್ ಎನ್.ಜುಬೇರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಅಧ್ಯಕ್ಷೆ ಆರ್ಕಾಣಿ, ಪದಾಧಿಕಾರಿಗಳಾದ ಮಂಗಮ್ಮ, ಸೌಭಾಗ್ಯ, ಪಿ.ಡಿ.ಮೀನಾಕುಮಾರಿ, ಬಿ.ಕೆ.ಶಾರದ, ಟಿ.ಇಂದಿರಾ ಇದ್ದರು

Published on

ಪ್ರಮುಖ ಮುಖ್ಯಾಂಶಗಳು

  • ಪ್ರತಿಭಟನೆ
ಬಳ್ಳಾರಿ : ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಹೆಚ್ಚಿಸದೆ ಕೇವಲ ಸೀರೆ ನೀಡುವ ಪ್ರಸ್ತಾವನೆ ವಿರೋಧಿಸಿ, ಇಲ್ಲಿನ ಡಿಸಿ ಕಚೇರಿ ಆವರಣದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್‌ನ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.
ಫೆಡರೇಷನ್ ಜಿಲ್ಲಾಧ್ಯಕ್ಷೆ ಆರ್ಕಾಣಿ ಮಾತನಾಡಿ, ಚುನಾವಣಾ ಪೂರ್ವ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಆರನೇ ಗ್ಯಾರಂಟಿಯಾಗಿ ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ಮಾಸಿಕ 15,000 ರೂ. ಗೌರವಧನ ನೀಡುವ ಭರವಸೆ ಕೇವಲ ಕಾಗದದ ಮೇಲೆ ಉಳಿದಿದೆ. ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷ ಕಳೆದರೂ ಪೂರ್ಣ ಪ್ರಮಾಣದ ಹೆಚ್ಚಳವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
2011ರಿಂದ ನಿವೃತ್ತರಾದ ಕಾರ್ಯಕರ್ತೆಯರಿಗೆ ಗ್ರ್ಯಾಚುಯಿಟಿ ಸೌಲಭ್ಯ ನೀಡದೆ, ಕೇವಲ 2023ರ ನಂತರ ನಿವೃತ್ತರಾದವರಿಗೆ ಮಾತ್ರ ಅನ್ವಯಿಸಿರುವುದು ಸುಮಾರು 15 ರಿಂದ 20 ಸಾವಿರ ಹಿರಿಯ ಕಾರ್ಯಕರ್ತೆಯರಿಗೆ ಮಾಡುತ್ತಿರುವ ಅನ್ಯಾಯವಾಗಿದೆ ಎಂದು ದೂರಿದರು.
ಗೌರವನ ಹೆಚ್ಚಿಸುವ ಬದಲು ಕೇವಲ ಸೀರೆ ನೀಡುವ ಮೂಲಕ ಸರ್ಕಾರ ಕಾರ್ಯಕರ್ತೆಯರ ಹಾದಿ ತಪ್ಪಿಸುತ್ತಿದೆ. ನಮಗೆ ಸೀರೆಗಿಂತ ಗೌರವಯುತ ಬದುಕು ನಡೆಸಲು ಆರ್ಥಿಕ ಭದ್ರತೆ ಮುಖ್ಯ. ಪ್ರಸಕ್ತ ಬಜೆಟ್‌ನಲ್ಲಿ ಗೌರವನವನ್ನು ಗಣನೀಯವಾಗಿ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
==
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net