ಮೂರು ತಲೆಮಾರಿಗೆ ಸೌಲಭ್ಯ ವಿಸ್ತರಿಸಲಿ

ಸಂಡೂರಿನಲ್ಲಿ ಆಯೋಜಿಸಿದ್ದ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ಆರನೇ ತಾಲೂಕು ಸಮ್ಮೇಳನದಲ್ಲಿ ಜಿಲ್ಲಾ ಕಾರ್ಯದರ್ಶಿ ಎ.ಸ್ವಾಮಿ ಮಾತನಾಡಿದರು.
ಸಂಡೂರಿನಲ್ಲಿ ಆಯೋಜಿಸಿದ್ದ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ಆರನೇ ತಾಲೂಕು ಸಮ್ಮೇಳನದಲ್ಲಿ ಜಿಲ್ಲಾ ಕಾರ್ಯದರ್ಶಿ ಎ.ಸ್ವಾಮಿ ಮಾತನಾಡಿದರು.
Published on
ಸಂಡೂರು: ಸರ್ವೇ ಪಟ್ಟಿಯಿಂದ ಬಿಟ್ಟು ಹೋಗಿರುವ ವಿಮುಕ್ತ ದೇವದಾಸಿಯರು ಹಾಗೂ ಅವರ ಕುಟುಂಬದ ಮೂರು ತಲೆಮಾರಿಗೆ ಪುನರ್ವಸತಿ ಸೌಲಭ್ಯ ವಿಸ್ತರಿಸಬೇಕೆಂದು ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ಜಿಲ್ಲಾ ಕಾರ್ಯದರ್ಶಿ ಎ.ಸ್ವಾಮಿ ಆಗ್ರಹಿಸಿದರು.
ನಿಸರ್ಗ ಸಮುದಾಯ ಭವನದಲ್ಲಿ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ಆರನೇ ತಾಲೂಕು ಸಮ್ಮೇಳನದಲ್ಲಿ ಭಾನುವಾರ ಮಾತನಾಡಿದರು. ಈ ಹಿಂದಿನ ಸಮಾವೇಶದಲ್ಲಿ ಕೈಗೊಂಡ ನಿರ್ಣಯ ಹಾಗೂ ಮೂರು ವರ್ಷ ಸತತ ಹೋರಾಟದಿಂದಾಗಿ ಪಿಂಚಣಿ ಹೆಚ್ಚಳ, ವಿಮುಕ್ತ ದೇವದಾಸಿಯರ ಮೂರು ತಲೆಮಾರುಗಳ ಕುರಿತು ಸರ್ವೇ ಮಾಡಲಾಗಿದೆ ಎಂದರು.
ವಿಮುಕ್ತ ದೇವದಾಸಿಯರ ಪಿಂಚಣಿಯನ್ನು ಮಾಸಿಕ ಆರು ಸಾವಿರ ರೂ.ಗೆ ಹೆಚ್ಚಳ ಮಾಡಬೇಕು. ವಿಮುಕ್ತ ದೇವದಾಸಿಯರ ಮಕ್ಕಳಿಗೆ ಉದ್ಯೋಗ ನೀಡಬೇಕು ಇಲ್ಲವೇ 10 ಸಾವಿರ ರೂಪಾಯಿ ನಿರುದ್ಯೋಗ ಭತ್ಯೆ ನೀಡಬೇಕು. ವಿಮುಕ್ತ ದೇವದಾಸಿಯರ ಮಕ್ಕಳ ಮದುವೆ ಪ್ರೋತ್ಸಾಹಧನ 10 ಲಕ್ಷ ರೂಪಾಯಿಗೆ ಹೆಚ್ಚಳ ಮಾಡುವುದು ಸೇರಿದಂತೆ ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನವೆಂಬರ್‌ನಲ್ಲಿ ಬೆಂಗಳೂರು ಚಲೋ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.
ಕಾರ್ಯದರ್ಶಿ ಎಚ್.ದುರುಗಮ್ಮ ಮಾತನಾಡಿ, ವಯೋಮಿತಿ ಪರಿಗಣಿಸದೆ ಎಲ್ಲ ವಿಮುಕ್ತ ದೇವದಾಸಿಯರ ಸರ್ವೇ ಮಾಡಿ ಅವರಿಗೆ ಪಿಂಚಣಿ, ದೇವದಾಸಿ ದೃಢೀಕರಣ ಪತ್ರ ನೀಡಬೇಕು. ನಿವೇಶನ ನೀಡಿ ಮನೆಗಳನ್ನು ಕಟ್ಟಿಸಬೇಕು ಎಂದು ಆಗ್ರಹಿಸಿದರು. ಕರೆಮ್ಮ, ಗಂಗಮ್ಮ, ಹುಲಿಗೆಮ್ಮ, ಮಹಾಲಕ್ಷ್ಮೀ, ದುರ್ಗಮ್ಮ, ಲಕ್ಷ್ಮೀ, ಹನುಮಂತಮ್ಮ ಇತರರಿದ್ದರು.
ತಾಲೂಕು ಸಮಿತಿ ರಚನೆ:
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net