ಹೂವಿನಹಡಗಲಿಯಲ್ಲಿ ತಾಲೂಕು ಎಲೆಕ್ಟ್ರೀಷಿಯನ್ ಮತ್ತು ಪ್ಲಂಬರ್ ಕಾರ್ಮಿಕರ ಅಸೋಸಿಯೇಷನ್‌ಗೆ ಶಾಸಕ ಕೃಷ್ಣನಾಯ್ಕ ಚಾಲನೆ ನೀಡಿದರು. ಸಂಘದ ರಾಜ್ಯಾಧ್ಯಕ್ಷ ಎಚ್.ಜಿ.ಉಮೇಶ, ತಾಲೂಕು ಅಧ್ಯಕ್ಷ ಯು.ಮಲ್ಲಿಕಾರ್ಜುನ, ಉಪಾಧ್ಯಕ್ಷ ಫಕೃದ್ದೀನ್ ಬಳಿಗಾರ, ಟಿ.ಶೇಖರ್, ಕಾರ್ಯದರ್ಶಿ ಇಬ್ರಾಹಿಂ ಖಲೀಲ್, ಸಹ ಕಾರ್ಯದರ್ಶಿ ಟಿ.ಅಣ್ಣಪ್ಪ ಇತರರಿದ್ದರು.
ಹೂವಿನಹಡಗಲಿ: ಅಸಂಘಟಿತ ಕಾರ್ಮಿಕರು ಜೀವದ ಹಂಗು ತೊರೆದು ನಿತ್ಯ ಕೆಲಸ ಮಾಡುತ್ತಿದ್ದು, ಅವರ ಅಭಿವೃದ್ಧಿಗೆ ಸರ್ಕಾರ ಯೋಜನೆಗಳನ್ನು ಆರಂಭಿಸಬೇಕಿದೆ ಎಂದು ಶಾಸಕ ಕೃಷ್ಣನಾಯ್ಕ ಹೇಳಿದರು.
ಪಟ್ಟಣದ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಸೋಮವಾರ ಆಯೋಜಿಸಿದ್ದ ತಾಲೂಕು ಎಲೆಕ್ಟ್ರೀಷಿಯನ್ ಮತ್ತು ಪ್ಲಂಬರ್ ಕಾರ್ಮಿಕರ ಅಸೋಸಿಯೇಷನ್‌ಗೆ ಚಾಲನೆ ನೀಡಿ ಮಾತನಾಡಿದರು. ಅಸಂಘಟಿತ ಕಾರ್ಮಿಕರ ಬದುಕಿನಲ್ಲಿ ಸಮಸ್ಯೆಗಳು ಎದುರಾದರೆ ಅವರಿಗೆ ಸೂಕ್ತ ಸೌಲಭ್ಯಗಳನ್ನು ಕಾರ್ಮಿಕ ಇಲಾಖೆ ಮೂಲಕ ನೀಡಲಾಗುವುದು.
ಕೆಲ ತಿಂಗಳಹಿಂದೆ ಕಾರ್ಮಿಕರಿಗೆ ವಿಕರಿಸಿದ ಕಿಟ್‌ಗಳು ಉತ್ತಮ ಗುಣಮಟ್ಟದಲ್ಲಿಲ್ಲದ ಕಾರಣ ಬದಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು. ಕಾರ್ಮಿಕರಿಗೆ ಸಿಗುವ ಸೌಲಭ್ಯಗಳು ಅವರ ಮನೆ ಬಾಗಿಲಿಗೆ ತಲುಪುವಂತಾಗಬೇಕು ಎಂದರು.
ಶ್ರೀರಾಮ ದೇವಸ್ಥಾನದ ಧರ್ಮದರ್ಶಿ ಡಾ.ರಾಕೇಶಯ್ಯ ರಾಮಸ್ವಾಮಿ, ಗವಿಸಿದ್ದೇಶ್ವರ ಶಾಖಾಮಠದ ಡಾ.ಹಿರಿಶಾಂತ ವೀರ ಸ್ವಾಮೀಜಿ, ಮಲ್ಲನಕೆರೆ ಮಠದ ಚನ್ನಬಸವ ಸ್ವಾಮೀಜಿ, ಚೌಕಿಮಠದ ಗಾಡಿ ತಾತಾ, ಧರ್ಮಗುರು ಹಜರತ್ ಸಜ್ಬು ಸಾನ್ನಿಧ್ಯ ವಹಿಸಿದ್ದರು.