ಬಗರ್‌ಹುಕುಂ ಸಾಗುವಳಿದಾರರಿಗೆ ಪಟ್ಟಾ ನೀಡಲಿ

ಪಟ್ಟಾ ನೀಡುವಂತೆ ಆಗ್ರಹಿಸಿ ಸಂಡೂರು ತಹಸೀಲ್ದಾರ್ ಅನಿಲ್ ಕುಮಾರ್‌ಗೆ ಬಗರ್‌ಹುಕುಂ ಸಾಗುವಳಿದಾರರು ಮನವಿ ಸಲ್ಲಿಸಿದರು. ಬಿಜೆಪಿ ರೈತ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಅಂತಾಪುರದ ವಿ.ಎಸ್.ಶಂಕರ್, ಜಿಲ್ಲಾ ಎಸ್ಟಿ ಮೋರ್ಚಾ ಕಾರ್ಯದರ್ಶಿ ಡಿ.ಬಸವರಾಜ, ಸಾರಪ್ಪ, ತಿಪ್ಪೇಸ್ವಾಮಿ, ಈರಪ್ಪ, ಮಂಜು, ಲಕ್ಷ್ಮಮ್ಮ, ಮಾರೆಮ್ಮ, ಉಮೇಶ, ಶಿವಣ್ಣ, ನಾಗರಾಜ, ಅಂಜನಪ್ಪ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ತಾಲೂಕಿನ
  • ಬಗರ್‌ಹುಕುಂ
  • ಸಾಗುವಳಿದಾರರು
ಸಂಡೂರು: ರೈತರಿಗೆ ಪಟ್ಟಾ ವಿತರಿಸಬೇಕೆಂದು ಆಗ್ರಹಿಸಿ ತಾಲೂಕಿನ ಬಗರ್‌ಹುಕುಂ ಸಾಗುವಳಿದಾರರು ಸೋಮವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಅನಿಲ್ ಕುಮಾರ್‌ಗೆ ಮನವಿ ಸಲ್ಲಿಸಿದರು.
ಬಿಜೆಪಿ ರೈತ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಅಂತಾಪುರದ ವಿ.ಎಸ್.ಶಂಕರ್ ಮಾತನಾಡಿ, ರೈತರು ಬಹಳ ವರ್ಷಗಳಿಂದ ಬಗರ್‌ಹುಕುಂ ಭೂಮಿಯಲ್ಲಿ ಉಳಿಮೆ ಮಾಡಿ ಜೀವನ ಸಾಗಿಸುತ್ತಿದ್ದಾರೆ. ೨೦೨೩ರ ಡಿ.೧ರಂದು ಸರ್ಕಾರದ ಪ್ರಧಾನ ಕಾರ್ಯದರ್ಶಿ ರೈತರಿಗೆ ಪಟ್ಟಾ ವಿತರಿಸುವಂತೆ ಸುತ್ತೋಲೆ ಹೊರಡಿಸಿದ್ದರೂ ನೆಪ ಹೇಳಿ ಮುಂದೂಡಲಾಗುತ್ತಿದೆ. ಈವರೆಗೆ ಯಾವುದೇ ರೈತರಿಗೆ ಪಟ್ಟಾ ವಿತರಿಸಿಲ್ಲ. ನಮೂನೆ ೫೦ ಹಾಗೂ ೫೩ರಡಿ ಅರ್ಜಿ ಸಲ್ಲಿಸಿರುವ ರೈತರಿಗೆ ಪಟ್ಟಾ ವಿತರಿಸಬೇಕೆಂದು ಕಾನೂನು ಹೇಳುತ್ತದೆ. ಆದ್ದರಿಂದ ಪಟ್ಟಾ, ಪಹಣಿಗಳಲ್ಲಿ ರೈತರ ಹೆಸರನ್ನು ನಮೂದಿಸಬೇಕು ಎಂದು ಆಗ್ರಹಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net