ಕಲಾವಿದರು ಚಟುವಟಿಕೆಯಿಂದ ಕೂಡಿರಲಿ

ಅಯ್ಯನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದ ಸಂಗೀತ ಹಬ್ಬ ಕಾರ್ಯಕ್ರಮದಲ್ಲಿ ಸ್ಥಳೀಯ ಕಲಾವಿದರಾದ ಎಂ.ಅಂಬಿಕಾ ಮತ್ತು ತಂಡದಿಂದ ಸಮೂಹ ನೃತ್ಯ ಪ್ರದರ್ಶನಗೊಂಡಿತು.
ಅಯ್ಯನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದ ಸಂಗೀತ ಹಬ್ಬ ಕಾರ್ಯಕ್ರಮದಲ್ಲಿ ಸ್ಥಳೀಯ ಕಲಾವಿದರಾದ ಎಂ.ಅಂಬಿಕಾ ಮತ್ತು ತಂಡದಿಂದ ಸಮೂಹ ನೃತ್ಯ ಪ್ರದರ್ಶನಗೊಂಡಿತು.
Published on

ಸಮೀಪದ ಅಯ್ಯನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪಂಡಿತ್ ಪುಟ್ಟರಾಜ ಗವಾಯಿಗಳ ಸಾಂಸ್ಕೃತಿಕ-ಸಮಾಜ ಸೇವೆ ಚಾರಿಟಬಲ್ ಟ್ರಸ್ಟ್ ಮತ್ತು ಸಾಂಸ್ಕೃತಿಕ ಇಲಾಖೆಯಿಂದ ಸಮೂಹ ನೃತ್ಯ ಹಾಗೂ ಸಂಗೀತ ಹಬ್ಬ ಕಾರ್ಯಕ್ರಮ ಶನಿವಾರ ನಡೆಯಿತು.

ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಈ.ಮಂಜುನಾಥ ಮಾತನಾಡಿ, ಐತಿಹಾಸಿಕ ಕಲೆ ಉಳಿಯಬೇಕಾದರೆ ಕಲಾವಿದರು ಸದಾ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನ ಮೂಲಕ ಚಟುವಟಿಕೆಯಿಂದ ಕೂಡಿರಬೇಕು ಎಂದು ತಿಳಿಸಿದರು. ಬಳಿಕ ಸ್ಥಳೀಯ ಕಲಾವಿದರಾದ ಎಂ.ಅಂಬಿಕಾ ಮತ್ತು ತಂಡದಿಂದ ಸಮೂಹ ನೃತ್ಯ ಹಾಗೂ ಭರತನಾಟ್ಯ ಪ್ರದರ್ಶನಗೊಂಡಿತು. ಟ್ರಸ್ಟ್‌ನಿಂದ ಸಂಗೀತ ಕಾರ್ಯಕ್ರಮ ನಡೆಯಿತು.
ಎಸ್‌ಡಿಎಂಸಿ ಅಧ್ಯಕ್ಷ ಮಣಿಗಾರ್ ಜಂಬಣ್ಣ ಕಾರ್ಯಕ್ರಮ ಉದ್ಘಾಟಿಸಿದರು. ಕಲಾ ಪೋಷಕರಾದ ಸಂತೋಷ್ ಕುಮಾರ್, ಚಂದುಕರ್ ಮಾತನಾಡಿದರು. ವಿದ್ಯಾರ್ಥಿಗಳಾದ ಸ್ವಪ್ನಾ ಬಾವಿಕಟ್ಟಿ, ನಿರೀಕ್ಷಾ, ಬಿ.ಕೆ. ನಿಖಿತಾ, ಲಿಖಿತಾ, ಶ್ರೀರಕ್ಷ, ಜಾಹ್ನವಿ, ದೀಕ್ಷಾ ಮತ್ತಿತರರು ನೃತ್ಯ ಪ್ರದರ್ಶನ ನೀಡಿದರು. ಮುಖ್ಯ ಶಿಕ್ಷಕಿ ಜಿ.ರಾಜೇಶ್ವರಿ, ಶಿಕ್ಷಕರಾದ ಟಿ.ರಾಮಜ್ಜ, ಕರಿಬಸಮ್ಮ, ಎನ್.ಶೈಲಜಾ, ಬಿ.ಆನಂದ, ದುರ್ಗಾಶ್ರೀ, ಚೇತನ, ಕಲಾವಿದರಾದ ಕೆ.ದುರ್ಗೇಶ್, ಚಂದ್ರಕಾಂತ್ ಬಕನಿಂಗಿ, ವಿಜಯಕುಮಾರ್, ನೆಲ್ಕುದಿರಿ ಮಹಾಂತೇಶ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net