ಶಿಕ್ಷಕರು ಮಕ್ಕಳ ಭವಿಷ್ಯ ರೂಪಿಸುವ ಮಾರ್ಗದರ್ಶಕರಾಗಲಿ

ಹಗರಿಬೊಮ್ಮನಹಳ್ಳಿಯ ಹಳೇ ಊರಿನ ಸಮುದಾಯ ಭವನದಲ್ಲಿ ಸಮಾಹಿಪ್ರಾ ಶಾಲೆಯ ಹಳೇ ವಿದ್ಯಾರ್ಥಿಗಳಿಂದ ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಶಿಕ್ಷಕರನ್ನು ಸರೋಟಿನಲ್ಲಿ ಮೆರವಣಿಗೆ ಮಾಡಲಾಯಿತು. ಪ್ರಮುಖರಾದ ದ್ರಾಕ್ಷಿ ನಾಗರತ್ನಮ್ಮ ಬಸವರಾಜ, ಬೆಟಗೇರಿ ನಾಗರತ್ನಮ್ಮ ಕೃಷ್ಣಪ್ಪ, ಕುರಿ ಪ್ರಕಾಶ, ಮೋಕ್ಷಮ್ಮ ಬಸವರಾಜ ಕೊಡ್ಲಿ, ಕೆ.ವಿ.ಎಂ.ವೀರೇಶ, ಪೊಲೀಸ್ ಬಸನಗೌಡ, ಭದ್ರವಾಡಿ ಸುರೇಶ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ನಿವೃತ್ತ ದೈಹಿಕ ಶಿಕ್ಷಕ ವಿ.ಎಸ್.ಮಲ್ಲಿಕಾರ್ಜುನ ಸಲಹೆ
  • ಗುರುವಂದನಾ ಕಾರ್ಯಕ್ರಮ
ಹಗರಿಬೊಮ್ಮನಹಳ್ಳಿ: ಗುರುಸ್ಥಾನ ಶ್ರೇಷ್ಠವಾಗಿದ್ದು, ಇದಕ್ಕೆ ಸರಿಸಾಟಿ ಮತ್ತೊಂದಿಲ್ಲ ಎನ್ನುವುದಕ್ಕೆ ಶಿಷ್ಯಂದಿರು ತೋರುವ ಪ್ರೀತಿ, ಗೌರವವೇ ಸಾಕ್ಷಿ ಎಂದು ನಿವೃತ್ತ ದೈಹಿಕ ಶಿಕ್ಷಕ ವಿ.ಎಸ್.ಮಲ್ಲಿಕಾರ್ಜುನ ಹೇಳಿದರು.
ಪಟ್ಟಣದ ಹಳೇ ಊರಿನ ಸಮುದಾಯ ಭವನದಲ್ಲಿ 1995-96ರ ಸಾಲಿನ ಸಮಾಹಿಪ್ರಾ ಶಾಲೆಯ ಹಳೇ ವಿದ್ಯಾರ್ಥಿಗಳಿಂದ ಶನಿವಾರ ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಶಿಕ್ಷಕರು ತಮ್ಮ ಸ್ಥಾನಮಾನವನ್ನು ಅರಿತು ಮಕ್ಕಳನ್ನು ತಿದ್ದಿತೀಡಿ ದೇಶಕ್ಕೆ ಉತ್ತಮ ಪ್ರಜೆಗಳನ್ನಾಗಿ ಮಾಡಬೇಕು. ಶಿಕ್ಷಣ ನೀಡಿದರೆ ಸಾಲದು ಮಕ್ಕಳ ಭವಿಷ್ಯ ರೂಪಿಸುವ ಮಾರ್ಗದರ್ಶಕರಾಗಬೇಕು ಎಂದರು.
ನಂತರ ನಿವೃತ್ತ ಶಿಕ್ಷಕರಾದ ಕೆ.ವಿ.ಎಂ.ಸುಭಾಷ್, ವಾಲಿ ವೀರಪ್ಪ, ಎಚ್.ಎಂ.ಸದ್ಯೋಜಾತಯ್ಯ, ಡಿ.ಉಮಾಪತಿ, ಪತ್ರೆಪ್ಪರಿ ಅವರನ್ನು ಸನ್ಮಾನಿಸಲಾಯಿತು. ಇದಕ್ಕೂ ಮುನ್ನ ಶಿಕ್ಷಕರನ್ನು ಸರೋಟಿನಲ್ಲಿ ಮೆರವಣಿಗೆಯೊಂದಿಗೆ ಶ್ರೀ ಕಲ್ಲೇಶ್ವರ ದೇಗುಲಕ್ಕೆ ತೆರಳಿ ಪೂಜೆ ಮಾಡಿಸಿ ಕಾರ್ಯಕ್ರಮಕ್ಕೆ ಸ್ವಾಗತಿಸಲಾಯಿತು.
ಪ್ರಮುಖರಾದ ದ್ರಾಕ್ಷಿ ನಾಗರತ್ನಮ್ಮ ಬಸವರಾಜ, ಬೆಟಗೇರಿ ನಾಗರತ್ನಮ್ಮ ಕೃಷ್ಣಪ್ಪ, ಕುರಿ ಪ್ರಕಾಶ, ಮೋಕ್ಷಮ್ಮ ಬಸವರಾಜ ಕೊಡ್ಲಿ, ಕೆ.ವಿ.ಎಂ.ವೀರೇಶ, ಪೊಲೀಸ್ ಬಸನಗೌಡ, ಭದ್ರವಾಡಿ ಸುರೇಶ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net