ಸಂಡೂರಿನ ಶ್ರೀ ಸ್ವಾಮಿವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ತಾಲೂಕು ಮಟ್ಟದ ಗೀತ ಗಾಯನ ಮತ್ತು ಜನಪದ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು. ಮುಖ್ಯಶಿಕ್ಷಕ ತೋಂಟದ ಆರಾಧ್ಯ, ಸ್ಕೌಟ್ಸ್ ಮತ್ತು ಗೈಡ್ಸ್ ಕಾರ್ಯದರ್ಶಿ ಜಿ.ಎಸ್.ಸೋಮಪ್ಪ, ಖಜಾಂಚಿ ಮೊಹಮ್ಮದ್ ಜಾವೇದ್ ಇದ್ದರು.
ಸಂಡೂರು: ತಾಲೂಕಿನ ಎಲ್ಲ ಸ್ಕೌಟ್ಸ್ ಮತ್ತು ಗೈಡ್ಸ್ ಘಟಕ ಹೊಂದಿರುವ ಶಾಲೆಗಳಲ್ಲಿ ಪರಿಸರ ಸ್ವಚ್ಛತಾ ಕಾರ್ಯಕ್ರಮ, ರಾಷ್ಟ್ರೀಯ ಹಬ್ಬಗಳಲ್ಲಿ ಮಕ್ಕಳು ಭಾಗವಹಿಸುತ್ತಾರೆ ಎಂದು ಶ್ರೀ ಸ್ವಾಮಿವಿವೇಕಾನಂದ ಶಾಲೆ ಕಾರ್ಯದರ್ಶಿ ಜಿ.ಎಸ್.ಸೋಮಪ್ಪ ತಿಳಿಸಿದರು.
ಶ್ರೀ ಸ್ವಾಮಿವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಭಾರತ್ ಸ್ಕೌಟ್ ಆ್ಯಂಡ್ ಗೈಡ್ಸ್ ತಾಲೂಕು ಮಟ್ಟದ ಗೀತ ಗಾಯನ ಮತ್ತು ಜನಪದ ಸ್ಪರ್ಧೆ ಕಾರ್ಯಕ್ರಮದಲ್ಲಿ ಮಾತನಾಡಿದರು. ತಾಲೂಕು ಮತ್ತು ಜಿಲ್ಲೆ ಅಲ್ಲದೇ ರಾಜ್ಯ ಮಟ್ಟದ ಜಂಬೂರಿ ಮೇಳಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸುತ್ತಾರೆ. ವಾರದಲ್ಲಿ ಒಂದು ದಿನ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಚಟುವಟಿಕೆ ಮಾಡುತ್ತಾರೆ. ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಪ್ರಥಮ, ದ್ವಿತೀಯ, ತೃತೀಯ ಸೋಪಾನ ಪ್ರಾಂತಪಾಲ ಪುರಸ್ಕಾರಗಳಲ್ಲಿ ಭಾಗವಹಿಸುವ ಮೂಲಕ ಪ್ರಶಸ್ತಿ ಪಡೆಯಬೇಕು ಎಂದರು.
ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಮತ್ತು ಬಹುಮಾನ ವಿತರಿಸಲಾಯಿತು. ಮುಖ್ಯಶಿಕ್ಷಕ ತೊಂಟದ ಆರಾಧ್ಯ, ಸ್ಕೌಟ್ಸ್ ಮತ್ತು ಗೈಡ್ಸ್ ಖಜಾಂಚಿ ಮೊಹಮ್ಮದ್ ಜಾವೇದ್, ಶಿಕ್ಷಕರಾದ ಮರಿಸ್ವಾಮಿ, ಎರೇಗೌಡ, ನಾಗರಾಜ್, ಜಯಶ್ರೀ, ಜ್ಯೋತಿ, ಸುಮತಿ, ಯಾಸಿನ್ ಇತರರಿದ್ದರು.