ಕೈ ಶಾಸಕರು ಚುನಾವಣೆಗೆ ಸ್ಪರ್ಧಿಸಲಿ

ಸಂಡೂರು ಬಿಜೆಪಿ ಕಚೇರಿಯಲ್ಲಿ ನಡೆದ ಬಳ್ಳಾರಿ ಚಲೋ ಪಾದಯಾತ್ರೆಯ ಸಂಘಟನಾ ಸಭೆಯಲ್ಲಿ ಶಾಸಕ ಗಾಲಿ ಜನಾರ್ದನರೆಡ್ಡಿ ಮಾತನಾಡಿದರು. ಬಿಜೆಪಿ ರಾಜ್ಯ ಎಸ್ಟಿ ಘಟಕದ ಅಧ್ಯಕ್ಷ ಬಂಗಾರು ಹನುಮಂತ, ಜಿಲ್ಲಾ ಉಪಾಧ್ಯಕ್ಷ ಜಿ.ಟಿ.ಪಂಪಾಪತಿ, ಸಂಡೂರು ತಾಲೂಕು ಅಧ್ಯಕ್ಷ ಬಿ.ಅಶೋಕಕುಮಾರ್ ಇತರರಿದ್ದರು.
ಸಂಡೂರು ಬಿಜೆಪಿ ಕಚೇರಿಯಲ್ಲಿ ನಡೆದ ಬಳ್ಳಾರಿ ಚಲೋ ಪಾದಯಾತ್ರೆಯ ಸಂಘಟನಾ ಸಭೆಯಲ್ಲಿ ಶಾಸಕ ಗಾಲಿ ಜನಾರ್ದನರೆಡ್ಡಿ ಮಾತನಾಡಿದರು. ಬಿಜೆಪಿ ರಾಜ್ಯ ಎಸ್ಟಿ ಘಟಕದ ಅಧ್ಯಕ್ಷ ಬಂಗಾರು ಹನುಮಂತ, ಜಿಲ್ಲಾ ಉಪಾಧ್ಯಕ್ಷ ಜಿ.ಟಿ.ಪಂಪಾಪತಿ, ಸಂಡೂರು ತಾಲೂಕು ಅಧ್ಯಕ್ಷ ಬಿ.ಅಶೋಕಕುಮಾರ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಗಾಲಿ ಜನಾರ್ದನರೆಡ್ಡಿ ಸವಾಲು
  • ಸಂಡೂರು ಬಿಜೆಪಿ ಸಂಘಟನಾ ಸಭೆ
ಸಂಡೂರು: ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ನನ್ನನ್ನು ಜೈಲಿನಲ್ಲಿಟ್ಟು ಅಧಿಕಾರ ನಡೆಸಿದರು. ಬಳ್ಳಾರಿ, ವಿಜಯನಗರ ಜಿಲ್ಲೆಯ ಎಲ್ಲ ಶಾಸಕರು ರಾಜೀನಾಮೆ ನೀಡಿ ಚುನಾವಣೆಗೆ ಸ್ಪರ್ಧಿಸಲಿ, ನಾನೂ ಸ್ಪರ್ಧಿಸುತ್ತೇನೆ. ಆಗ ಗೆಲುವು ಯಾರದೆಂಬುದು ಗೊತ್ತಾಗಲಿದೆ ಎಂದು ಸಂಸದ ತುಕಾರಾಮ್ ಸೇರಿ ಕಾಂಗ್ರೆಸ್ ಶಾಸಕರಿಗೆ ಶಾಸಕ ಗಾಲಿ ಜನಾರ್ದನರೆಡ್ಡಿ ಸವಾಲು ಹಾಕಿದರು.
ಬಿಜೆಪಿ ಕಚೇರಿಯಲ್ಲಿ ನಡೆದ ಬಳ್ಳಾರಿ ಚಲೋ ಪಾದಯಾತ್ರೆಯ ಸಂಘಟನಾ ಸಭೆಯಲ್ಲಿ ಮಾತನಾಡಿದರು. ಶಾಸಕಿ ಅನ್ನಪೂರ್ಣ ತುಕಾರಾಮ್‌ಗೆ ಸಚಿವ ಸ್ಥಾನ ನೀಡಿದರೆ ನಾಗೇಂದ್ರ ವಿರುದ್ಧ ಹೋರಾಟಕ್ಕಿಂತಲೂ ಬಲವಾದ ಹೋರಾಟ ರೂಪಿಸಲಾಗುವುದು. ಸಂಡೂರಿನಲ್ಲಿ 12 ವರ್ಷಗಳ ಹಿಂದೆ 200ಕೋಟಿ ರೂ.ವೆಚ್ಚದಲ್ಲಿ ಅಭಿವೃದ್ಧಿಪಡಿಸಿದ ರಸ್ತೆಗಳು ಇಂದಿಗೂ ಉತ್ತಮ ಸ್ಥಿತಿಯಲ್ಲಿವೆ. ನಾಲ್ಕು ಬಾರಿ ಶಾಸಕರಾಗಿ ಹಾಗೂ ಒಂದು ಬಾರಿ ಸಂಸದರಾಗಿರುವ ತುಕಾರಾಮ್‌ಗೆ ಸಂಡೂರಿನಲ್ಲಿ ಸುಸಜ್ಜಿತ ಆಸ್ಪತ್ರೆ, ಹೊರಗಿನಿಂದ ಬರುವ ಪ್ರಯಾಣಿಕರಿಗೆ ಅನುಕೂಲವಾಗುವ ಉತ್ತಮ ಬಸ್ ನಿಲ್ದಾಣ ನಿರ್ಮಿಸಲು ಸಾಧ್ಯವಾಗಿಲ್ಲ. ವಾಲ್ಮೀಕಿ ಸಮುದಾಯದ ಯುವಕ-ಯುವತಿಯರು ಹಾಗೂ ವಿದ್ಯಾರ್ಥಿಗಳ ಕಲ್ಯಾಣಕ್ಕಾಗಿ ಬಳಕೆಯಾಗಬೇಕಿದ್ದ ಹಣ ದುರ್ಬಳಕೆಯಾಗಿದೆ. ಪ್ರಕರಣದ ತನಿಖೆ ಪಾರದರ್ಶಕವಾಗಿ ನಡೆಯಬೇಕು. ಸೆ.10ರ ಬಳಿಕ ಇಲ್ಲಿನ ಸಂಸದರ ಹಲವು ಹಗರಣಗಳನ್ನು ಮಾಧ್ಯಮಗಳ ಮೂಲಕ ಹಂಚುವೆ ಎಂದರು.
ಬಿಜೆಪಿ ರಾಜ್ಯ ಎಸ್ಟಿ ಘಟಕದ ಅಧ್ಯಕ್ಷ ಬಂಗಾರು ಹನುಮಂತ ಮಾತನಾಡಿ, ವಾಲ್ಮೀಕಿ ನಿಗಮದ ಹಣ ದುರ್ಬಳಕೆ ಹಿನ್ನೆಲೆಯಲ್ಲಿ ನೈತಿಕತೆ ಇದ್ದರೆ ಸಂಸದ ಈ.ತುಕಾರಾಮ್, ಶಾಸಕಿ ಅನ್ನಪೂರ್ಣ ರಾಜೀನಾಮೆ ನೀಡಲಿ ಎಂದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಿ.ಟಿ.ಪಂಪಾಪತಿ ಮಾತನಾಡಿ, ಖಾಕಿಗಳ ಮೂಲಕ ಬಿಜೆಪಿ ಕಾರ್ಯಕರ್ತರನ್ನು ರೌಡಿಶೀಟರ್‌ಗಳನ್ನಾಗಿ ಮಾಡಿ ಬೆದರಿಸುವುದು ಸಂಸದರಿಗೆ ಆಟವಾಗಿದೆ ಎಂದರು. ಸಫಾಯಿ ಕರ್ಮಚಾರಿ ನಿಗಮ ಮಾಜಿ ಅಧ್ಯಕ್ಷ ಹನುಮಂತಪ್ಪ, ಸಂಡೂರು ತಾಲೂಕು ಅಧ್ಯಕ್ಷ ಬಿ.ಅಶೋಕಕುಮಾರ್, ಪ್ರಮುಖರಾದ ಹುಡೇದ ಸುರೇಶ್, ತಿರುಮಲ, ಶರಣಗೌಡ, ದಮ್ಮೂರು ಶೇಖರ್, ದರಪ್ಪ ನಾಯಕ್, ಜಿಸಿಬಿ ರಾಮಕೃಷ್ಣ, ಶರಣಗೌಡ, ವಸಂತ್‌ಕುಮಾರ್, ವಾಮಣ್ಣ, ಪ್ರವೀಣ್, ನರಸಿಂಹ, ರಮೇಶ್, ನಂದಿಹಳ್ಳಿ ಸೂರಿ, ನಾಗರಾಜ್, ಹುಲಿರಾಜ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net