ವಿಶೇಷ ಕಾಯ್ದೆ ಅನುಷ್ಠಾನಗೊಳಿಸಲಿ

ಕಂಪ್ಲಿಯಲ್ಲಿ ಸಮಾನ ಮನಸ್ಕರ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಶಿರಸ್ತೇದಾರ್ ಜಿ.ಪಂಪಾಪತಿಗೆ ಮನವಿ ಸಲ್ಲಿಸಿದರು. ಪದಾಧಿಕಾರಿಗಳಾದ ಕರಿಯಪ್ಪ ಗುಡಿಮನಿ, ವಸಂತರಾಜ ಕಹಳೆ, ನೀಲಪ್ಪ ಪೇಂಟರ್, ಎ.ಎಸ್.ಯಲ್ಲಪ್ಪ, ಕೆ.ಲಕ್ಷ್ಮಣ, ಎಸ್.ಬಸವರಾಜ ಇತರರಿದ್ದರು.in the name of teachers

Published on

ಪ್ರಮುಖ ಮುಖ್ಯಾಂಶಗಳು

  • ಅಸ್ಪಶ್ಯ
  • ಸಮುದಾಯ
  • ವ್ಯಕ್ತಿ
ಕಂಪ್ಲಿ: ಹುಬ್ಬಳ್ಳಿ ಇನಾಂಪುರ ಗ್ರಾಮದಲ್ಲಿ ಮರ್ಯಾದೆ ಹತ್ಯೆ ಕಾರಣರಾದವರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಪಟ್ಟಣದ ಸಮಾನ ಮನಸ್ಕ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ತಹಸಿಲ್ ಕಚೇರಿ ಶಿರಸ್ತೇದಾರ್ ಜಿ.ಪಂಪಾಪತಿಗೆ ಗುರುವಾರ ಮನವಿ ಸಲ್ಲಿಸಿದರು.
ರಾಜ್ಯ ಮಾದಿಗರ ರಕ್ಷಣಾ ವೇದಿಕೆ ಅಧ್ಯಕ್ಷ ಕರಿಯಪ್ಪ ಗುಡಿಮನಿ ಮಾತನಾಡಿ, ಅಸ್ಪಶ್ಯ ಸಮುದಾಯಕ್ಕೆ ಸೇರಿದ ವ್ಯಕ್ತಿಯನ್ನು ಮದುವೆ ಆಗಿದ್ದನ್ನು ಒಪ್ಪದೆ ಮಗಳನ್ನು ಹಲ್ಲೆ ಮಾಡಿ ಸಾಯಿಸಿದ್ದು ಅಮಾನವೀಯ ಕೃತ್ಯ. ರಾಜ್ಯದ ಕಾನೂನು ವ್ಯವಸ್ಥೆ ಜಾತಿ ಶೋಷಣೆಯಿಂದ ಬಳಲುತ್ತಿರುವ ಸಂತ್ರಸ್ಥರ ನೆರವಿಗೆ ಬರುತ್ತಿಲ್ಲ. ಮಾರ್ಯಾದೆ ಹತ್ಯೆಗಳನ್ನು ತಡೆಯಲು ವಿಶೇಷ ಕಾಯ್ದೆ ಅನುಷ್ಠಾನಗೊಳಿಸಬೇಕು ಎಂದರು.
ಒಕ್ಕೂಟದ ಪದಾಧಿಕಾರಿಗಳಾದ ವಸಂತರಾಜ ಕಹಳೆ, ನೀಲಪ್ಪ ಪೇಂಟರ್, ಎ.ಎಸ್.ಯಲ್ಲಪ್ಪ, ಕೆ.ಲಕ್ಷ್ಮಣ, ಎಸ್.ಬಸವರಾಜ, ಎಚ್.ಮಂಜುನಾಥ, ಇ.ಧನಂಜಯ, ಎಂ.ಅಂಕ್ಲೇಶ, ಮಲ್ಲೇಶಪ್ಪ, ಶಾಂತಪ್ಪ ಪೂಜಾರಿ, ಎಂ.ನಾಗರಾಜ, ಸೋಮಪ್ಪ, ರಾಮಕೃಷ್ಣ, ಎಚ್.ವೀರಾಂಜಿನಿ, ಈರಣ್ಣ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net