ಸೇವೆಯಿಂದ ವಜಾಗೊಳಿಸುವ ಆದೇಶ ಕೈ ಬಿಡಿ

ಸೇವೆಯಿಂದ ಕೈಬಿಡಬಾರದು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಂಪ್ಲಿಯಲ್ಲಿ ಶಾಸಕ ಜೆ.ಎನ್.ಗಣೇಶ್‌ಗೆ ಆಶಾ ಕಾರ್ಯಕರ್ತೆಯರು ಮನವಿ ಸಲ್ಲಿಸಿದರು.
ಸೇವೆಯಿಂದ ಕೈಬಿಡಬಾರದು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಂಪ್ಲಿಯಲ್ಲಿ ಶಾಸಕ ಜೆ.ಎನ್.ಗಣೇಶ್‌ಗೆ ಆಶಾ ಕಾರ್ಯಕರ್ತೆಯರು ಮನವಿ ಸಲ್ಲಿಸಿದರು.
Published on
ಕಂಪ್ಲಿ: ನಮ್ಮನ್ನು ಕೆಲಸದಿಂದ ತೆಗೆಯಬಾರದು ಎಂದು ಆಗ್ರಹಿಸಿ ಆಶಾ ಕಾರ್ಯಕರ್ತೆಯರು ಶಾಸಕ ಜೆ.ಎನ್.ಗಣೇಶ್‌ಗೆ ಬುಧವಾರ ಪಟ್ಟಣದಲ್ಲಿ ಮನವಿ ಸಲ್ಲಿಸಿದರು.
ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ತಾಲೂಕು ಅಧ್ಯಕ್ಷೆ ಜೆ.ಮಹಾಲಕ್ಷ್ಮೀ ಮಾತನಾಡಿ, ಆರೋಗ್ಯ ಇಲಾಖೆ ತರ್ಕಬದ್ಧಗೊಳಿಸುವ ನೆಪದಲ್ಲಿ ಪಟ್ಟಣದ 20 ಆಶಾ ಕಾರ್ಯಕರ್ತೆಯರ ಪೈಕಿ 11 ಜನರನ್ನು ಸೇವೆಯಿಂದ ಕೈಬಿಡುವ ಆದೇಶ ಹೊರಡಿಸಿರುವುದು ಕೇಂದ್ರ ಮಾರ್ಗಸೂಚಿ ಉಲ್ಲಂಘನೆಯಾಗಿದೆ ಎಂದು ದೂರಿದರು.
ಪಟ್ಟಣದ ಜನಸಂಖ್ಯೆಗೆ ಅನುಗುಣವಾಗಿ 20 ಆಶಾ ಕಾರ್ಯಕರ್ತರಿರುವುದು ಸರಿಯಾಗಿದೆ. ಇದರಿಂದಾಗಿ ಆಶಾ ಕಾರ್ಯಕರ್ತೆಯರನ್ನು ಕೈ ಬಿಡುವ ಆದೇಶ ಹಿಂಪಡೆಯಬೇಕು. ನಿವೃತ್ತಿಗೊಳಿಸಿದ ಆಶಾ ಕಾರ್ಯಕರ್ತೆಯರಿಗೆ ಇಡಿಗಂಟು ಹಾಗೂ ಅಗತ್ಯ ಪರಿಹಾರ ಒದಗಿಸಬೇಕು. 13 ತಿಂಗಳ ಹಿಂದೆ ಆಶಾ ಕಾರ್ಯಕರ್ತೆಯರಿಗೆ ಮಾಸಿಕ 10 ಸಾವಿರ ರೂಪಾಯಿ ವೇತನ ನೀಡುವುದಾಗಿ ಸಿಎಂ ಸಿದ್ದರಾಮಯ್ಯ ನೀಡಿರುವ ಮಾತನ್ನು ಬಜೆಟ್ ಮೂಲಕ ಈಡೇರಿಸಬೇಕು ಎಂದು ಆಗ್ರಹಿಸಿದರು.
ಮನವಿ ಸ್ವೀಕರಿಸಿದ ಶಾಸಕ ಜೆ.ಎನ್.ಗಣೇಶ್ ಮಾತನಾಡಿ, ಆಶಾ ಕಾರ್ಯಕರ್ತೆಯರನ್ನು ಸೇವೆಯಿಂದ ಕೈಬಿಡದಂತೆ ಡಿಎಚ್‌ಒ ಹಾಗೂ ಸಂಬಂಧಿಸಿದ ಸಚಿವರೊಂದಿಗೆ ಸಮಾಲೋಚನೆ ನಡೆಸುವುದಾಗಿ ಭರವಸೆ ನೀಡಿದರು.
ತಾಲೂಕು ಆರೋಗ್ಯ ಮೇಲ್ವಿಚಾರಣಾಧಿಕಾರಿ ಡಾ.ಜಿ.ಅರುಣ್‌ಗೆ ರಾಮಸಾಗರದಲ್ಲಿ ಮನವಿ ಸಲ್ಲಿಸಲಾಯಿತು. ಪದಾಧಿಕಾರಿಗಳಾದ ಚಂದ್ರಲೇಖಾ, ವಲೀಮಾ, ಶಾರದಾ, ಎ.ನಾರಾಯಣಮ್ಮ ಅನುಸೂಯಮ್ಮ, ಖಾಸಿಂಬಿ, ಸಾವಿತ್ರಮ್ಮ, ವೆಂಕಟಪದ್ಮಾ, ಪದ್ಮಾವತಿ, ಸರಸ್ವತಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net