ಸೃಜನಾತ್ಮಕ ಚಟುವಟಿಕೆಗಳಿಗೆ ಕಲಿಕೆ ಹಬ್ಬ ಪೂರಕ

ಸಿರಗುಪ್ಪ ತಾಲೂಕಿನ ಕೆ.ತಾಂಡಾ ಸ.ಹಿ.ಪ್ರಾ ಶಾಲೆಯಲ್ಲಿ ಕಲಿಕಾ ಹಬ್ಬವನ್ನು ಇಸಿಒ ಕೆ.ಜ್ಞಾನೇಶ್ವರ ಉದ್ಘಾಟಿಸಿದರು. ಸಿಆರ್‌ಪಿ ಎಂ.ಟಿ ಶಾಂತಾ, ಮುಖ್ಯಶಿಕ್ಷಕಿ ಕೆ.ವಿ.ನಾಗರತ್ನಮ್ಮ, ಎಸ್ಡಿಎಂಸಿ ಅಧ್ಯಕ್ಷ ನಾಕಾ ನಾಯ್ಕ ಇತರರಿದ್ದರು.
ಸಿರಗುಪ್ಪ ತಾಲೂಕಿನ ಕೆ.ತಾಂಡಾ ಸ.ಹಿ.ಪ್ರಾ ಶಾಲೆಯಲ್ಲಿ ಕಲಿಕಾ ಹಬ್ಬವನ್ನು ಇಸಿಒ ಕೆ.ಜ್ಞಾನೇಶ್ವರ ಉದ್ಘಾಟಿಸಿದರು. ಸಿಆರ್‌ಪಿ ಎಂ.ಟಿ ಶಾಂತಾ, ಮುಖ್ಯಶಿಕ್ಷಕಿ ಕೆ.ವಿ.ನಾಗರತ್ನಮ್ಮ, ಎಸ್ಡಿಎಂಸಿ ಅಧ್ಯಕ್ಷ ನಾಕಾ ನಾಯ್ಕ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕಲಿಕೆ ಹಬ್ಬ
  • ಪೌಷ್ಟಿಕಾಂಶ

ಸೃಜನಾತ್ಮಕ ಚಟುವಟಿಕೆಗಳಿಗೆ ಕಲಿಕೆ ಹಬ್ಬ ಪೂರಕ

ಸಿರಗುಪ್ಪ: ಚಟುವಟಿಕೆಗಳ ಬಲವರ್ಧನೆಗೆ ಕಲಿಕಾ ಹಬ್ಬ ಪ್ರೇರಣೆಯಾಗಲಿ ಎಂದು ಇಸಿಒ ಕೆ.ಜ್ಞಾನೇಶ್ವರ ಹೇಳಿದರು.
ತಾಲೂಕಿನ ಕೆ.ತಾಂಡ ಸಹಿಪ್ರಾ ಶಾಲೆಯಲ್ಲಿ ಮಂಗಳವಾರ ಕೆಂಚನಗುಡ್ಡ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಉದ್ಘಾಟಿಸಿ ಮಾತನಾಡಿದರು.
ಕಲಿಕೆಯಿಂದ ಆಟ, ಸಂವಾದ, ಕಲೆ, ಕುಶಲತೆ ಆಧಾರಿತ ಸೃಜನಾತ್ಮಕ ಚಟುವಟಿಕೆಗಳೊಂದಿಗೆ ಮಕ್ಕಳಲ್ಲಿನ ಒತ್ತಡ ಕಡಿಮೆಗೊಳಿಸುತ್ತದೆ ಎಂದರು. ಮಕ್ಕಳಿಗೆ ಬುದ್ಧಿಶಕ್ತಿ ಪರೀಕ್ಷೆ, ರಸಪ್ರಶ್ನೆ, ಪಾಲಕರೊಂದಿಗೆ ಆಟ, ಆರೋಗ್ಯ ಮತ್ತು ಪೌಷ್ಟಿಕಾಂಶ ಸ್ಪರ್ಧೆ, ಸಂತಸದಾಯಕ ಗಣಿತ, ಕಥೆ ಹೇಳುವ ಸ್ಪರ್ಧೆ ಏರ್ಪಡಿಸಲಾಗಿತ್ತು.
ಸಿಆರ್‌ಪಿ ಎಂ.ಟಿ ಶಾಂತಾ, ಮುಖ್ಯಶಿಕ್ಷಕಿ ಕೆ.ವಿ.ನಾಗರತ್ನಮ್ಮ, ಎಸ್ಡಿಎಂಸಿ ಅಧ್ಯಕ್ಷ ನಾಕಾ ನಾಯ್ಕ, ಎನ್‌ಪಿಎಸ್ ಘಟಕದ ಉಪಾಧ್ಯಕ್ಷ ಎರೆಪ್ಪ ಗೌಡ, ಶಿಕ್ಷಕರ ಸಂಘದ ತಾಲೂಕು ಸಂಘಟನಾ ಕಾರ್ಯದರ್ಶಿ ಗೀತಾ, ಕಾರ್ಯದರ್ಶಿ ಶರಣಮ್ಮ, ಮುಖ್ಯಶಿಕ್ಷಕ ಮಹಾದೇವಪ್ಪ, ರವಿಕುಮಾರ್, ಶಿವಾಜಿ ನಾಯಕ, ಲೋಕೇಶ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net