ದೇಶದಲ್ಲಿ ತುಕಡೆ ಗ್ಯಾಂಗ್‌ಗಳು ಅರಾಜಕತೆ ಸೃಷ್ಟಿಸಲು ನಿರಂತರ ಹೋರಾಟ ಮಾಡುತ್ತಿವೆ. ಎಸ್‌ಐಆರ್ ಪರಿಷ್ಕರಣೆಯಾಗಲಿ ಮತ್ತು ದೇಶದಲ್ಲಿ ಕೇವಲ ಶುದ್ಧ ಮತದಾರರು ಮಾತ್ರ ಉಳಿಯಲಿ. ಇದನ್ನು ವಿರೋಧಿಸುವವರೆಲ್ಲರೂ ದೇಶದ್ರೋಹಿಗಳು ಎಂದರು. ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ, ಅದು ಪಾರ್ಲಿಮೆಂಟರಿ ಬೋರ್ಡ್‌ನಲ್ಲಿ ನಿರ್ಧಾರವಾಗುತ್ತದೆ. ಪಕ್ಷದಲ್ಲಿ ಯಾರೇ ಅಧ್ಯಕ್ಷರಾದರೂ ನಾನು ಅವರ ಜೊತೆ ನಿಂತು ಸಕ್ರಿಯವಾಗಿ ಕೆಲಸ ಮಾಡುತ್ತೇನೆ ಎಂದರು. ವಿಧಾನ ಪರಿಷತ್ ಸದಸ್ಯ ವೈ.ಎಂ.ಸತೀಶ್, ಮಾಜಿ ಶಾಸಕ ಜಿ.ಸೋಮಶೇಖರರೆಡ್ಡಿ, ಮುಖಂಡರಾದ ರಾಮಲಿಂಗಪ್ಪ, ಪಿ.ಪಾಲಣ್ಣ, ಗುರುಲಿಂಗನಗೌಡ ಇತರರಿದ್ದರು.