ಆನ್‌ಲೈನ್ ಕೋರ್ಸ್ ಕಲಿಯಿರಿ

ಬಳ್ಳಾರಿಯ ವಿಎಸ್‌ಕೆ ವಿವಿಯಲ್ಲಿ ಆಯೋಜಿಸಿದ್ದ ವಿಚಾರ ಸಂಕಿರಣ ಕಾರ್ಯಕ್ರಮವನ್ನು ನ್ಯಾಕ್ ಸಮಿತಿಯ ಕಾರ್ಯಕಾರಿ ಸಮಿತಿಯ ಅಧ್ಯಕ್ಷ ಪ್ರೊ.ನಾಗೇಶ್ವರ ರಾವ್ ಉದ್ಘಾಟಿಸಿದರು. ಕುಲಪತಿ ಪ್ರೊ.ಎಂ.ಮುನಿರಾಜು, ಕುಲಸಚಿವ ಪ್ರೊ.ವಿ. ಲೋಕೇಶ್, ವಿತ್ತಾಧಿಕಾರಿ ಸ್ಫೂರ್ತಿ ಕೆ.ಜಿ., ಪ್ರೊ.ಸದ್ಯೋಜಾತಪ್ಪ ಎಸ್., ಪ್ರೊ.ಜಿ.ಪಿ ದಿನೇಶ್, ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ರವಿ, ಸಿಎ ಕೆ. ಗುರುರಾಜ್ ಇತರರಿದ್ದರು.
ಬಳ್ಳಾರಿಯ ವಿಎಸ್‌ಕೆ ವಿವಿಯಲ್ಲಿ ಆಯೋಜಿಸಿದ್ದ ವಿಚಾರ ಸಂಕಿರಣ ಕಾರ್ಯಕ್ರಮವನ್ನು ನ್ಯಾಕ್ ಸಮಿತಿಯ ಕಾರ್ಯಕಾರಿ ಸಮಿತಿಯ ಅಧ್ಯಕ್ಷ ಪ್ರೊ.ನಾಗೇಶ್ವರ ರಾವ್ ಉದ್ಘಾಟಿಸಿದರು. ಕುಲಪತಿ ಪ್ರೊ.ಎಂ.ಮುನಿರಾಜು, ಕುಲಸಚಿವ ಪ್ರೊ.ವಿ. ಲೋಕೇಶ್, ವಿತ್ತಾಧಿಕಾರಿ ಸ್ಫೂರ್ತಿ ಕೆ.ಜಿ., ಪ್ರೊ.ಸದ್ಯೋಜಾತಪ್ಪ ಎಸ್., ಪ್ರೊ.ಜಿ.ಪಿ ದಿನೇಶ್, ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ರವಿ, ಸಿಎ ಕೆ. ಗುರುರಾಜ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವಿಚಾರ ಸಂಕಿರಣ ಕಾರ್ಯಕ್ರಮ
  • ಉನ್ನತ ಶಿಕ್ಷಣವು ಸದೃಢ
ಬಳ್ಳಾರಿ : ರಾಜ್ಯದಲ್ಲಿ ಕಾಲೇಜು ಮತ್ತು ಉನ್ನತ ಶಿಕ್ಷಣವು ಸದೃಢವಾಗಿದೆ. ವಿದ್ಯಾರ್ಥಿಗಳು ವರ್ಷಕ್ಕೆ ಒಂದಾದರೂ ಆನ್‌ಲೈನ್ ಕೋರ್ಸ್ ಪೂರ್ಣಗೊಳಿಸಿಕೊಳ್ಳಬೇಕು ಎಂದು ನವದೆಹಲಿಯ ನ್ಯಾಕ್ ಸಮಿತಿಯ ಕಾರ್ಯಕಾರಿ ಸಮಿತಿಯ ಅಧ್ಯಕ್ಷ ಪ್ರೊ.ನಾಗೇಶ್ವರ ರಾವ್ ಹೇಳಿದರು.
ನಗರದ ವಿಎಸ್‌ಕೆ ವಿವಿಯ ಸಭಾಂಗಣದಲ್ಲಿ ವಾಣಿಜ್ಯ ಹಾಗೂ ನಿರ್ವಹಣಾಶಾಸ್ತ್ರ ಅಧ್ಯಾಪಕರ ರಾಜ್ಯ ಸಂಘ ಹಾಗೂ ವಿವಿ ಸಹಯೋಗದಲ್ಲಿ ಆಯೋಜಿಸಿರುವ ಎರಡು ದಿನಗಳ ತಂತ್ರಜ್ಞಾನ ಆಧಾರಿತ ವ್ಯವಹಾರ ಪದ್ಧತಿಗಳು ಮತ್ತು ಕಾರ್ಯತಂತ್ರದ ಜಾಗತಿಕ ಸಮಾಗಮ ಎಂಬ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಉನ್ನತ ಶಿಕ್ಷಣದ ಆಶಯಗಳನ್ನು ಸಾಕಾರಗೊಳಿಸಲು ಭಾರತ ಸರ್ಕಾರವು ಸ್ವಯಂ, ಮೂಕ್ಸ್ ಮಾದರಿಯ ಆನ್‌ಲೈನ್ ಕಲಿಕಾ ಕೋರ್ಸ್‌ಗಳನ್ನು ಪರಿಚಯಿಸಿದ್ದು, ವಿದ್ಯಾರ್ಥಿಗಳು ತಮ್ಮ ಜ್ಞಾನಾಭಿವೃದ್ಧಿಗೆ ಆನ್‌ಲೈನ್ ಕಲಿಕಾ ಪ್ರಕ್ರಿಯೆಗೆ ಹೊಂದಿಕೊಳ್ಳಬೇಕು ಎಂದು ಸಲಹೆ ನೀಡಿದರು. ಗುಣಮಟ್ಟದ ಶಿಕ್ಷಣ ಒದಗಿಸುವ ಸಂಸ್ಥೆಗಳಿಗೆ ಅರ್ಹತೆಗೆ ಅನುಗುಣವಾಗಿ ಗ್ರೇಡ್‌ಗಳನ್ನು ನೀಡುತ್ತದೆ. ನ್ಯಾಕ್ ಮಾನ್ಯತೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಮೌಲ್ಯಮಾಪನ ವ್ಯವಸ್ಥೆಗಳಿದ್ದು, ಆಯಾ ಮಾನದಂಡಗಳಿಗೆ ಅನುಸಾರವಾಗಿ ಗ್ರೇಡಿಂಗ್‌ಗಳನ್ನು ನೀಡಲಾಗುತ್ತದೆ ಎಂದು ತಿಳಿಸಿದರು.
ಬೆಂಗಳೂರಿನ ಥಾಮ್ಸನ್ ರಾಯ್ ಎಐ ಕೇಂದ್ರದ ಹಿರಿಯ ನಿರ್ದೇಶಕ ಡಾ.ರಮೇಶ್ ಬಾಬು ಚಲ್ಲಪ್ಪನ್ ಮಾತನಾಡಿ, ಎಐ ಎಂದಿಗೂ ಮಾನವನ ಕೆಲಸ ಕಸಿಯಲು ಸಾಧ್ಯವಿಲ್ಲ. ವರ್ತಮಾನಕ್ಕೆ ತಕ್ಕಂತೆ ತಂತ್ರಜ್ಞಾನಗಳ ಜ್ಞಾನ ಪಡೆದುಕೊಂಡು ಸಾಗಿದರೆ ಯಾವ ಕೆಲಸವೂ ಕಷ್ಟವಲ್ಲ ಎಂದರು.
ವಿವಿ ಕುಲಪತಿ ಪ್ರೊ.ಎಂ.ಮುನಿರಾಜು ಮಾತನಾಡಿ, ಕಲ್ಯಾಣ ಕರ್ನಾಟಕ ಅಭಿವೃದ್ಧಿಗಾಗಿ ವಿವಿಧ ಹೊಸ ಕೋರ್ಸ್‌ಗಳನ್ನು ಸ್ಥಾಪಿಸುವುದು. ಕ್ಯಾಂಪಸ್‌ನಲ್ಲಿ ಐಟಿ ಮತ್ತು ಬಯೋ ಇನ್ನೋವೇಷನ್ ಸೆಂಟರ್, ಸ್ಪೋರ್ಟ್ಸ್ ಅಕಾಡೆಮಿ ತೆರೆಯಲಾಗುವುದು ಮತ್ತು ಮುಂದಿನ ಘಟಿಕೋತ್ಸವಕ್ಕೆ ದೇಶದ ರಾಷ್ಟಪತಿಗಳನ್ನು ಆಹ್ವಾನಿಸಿ ಈ ಭಾಗಕ್ಕೆ ಬಲ ತುಂಬಲು ಪ್ರಯತ್ನಿಸುವುದಾಗಿ ಎಂದರು.
ಕಾರ್ಯಕ್ರಮದ ಭಾಗವಾಗಿದ್ದ ವಾಣಿಜ್ಯ ಹಾಗೂ ನಿರ್ವಹಣಾಶಾಸ್ತ ವಿಷಯಗಳ ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳ ನಿವೃತ್ತ ಹಿರಿಯ ಪ್ರಾಧ್ಯಾಪಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಎರಡು ದಿನಗಳ ವಿಚಾರ ಸಂಕಿರಣದಲ್ಲಿ ರಾಜ್ಯದ ನಾನಾ ಭಾಗಗಳಿಂದ 500ಕ್ಕೂ ಹೆಚ್ಚು ಪ್ರಾಧ್ಯಾಪಕ ವರ್ಗ, ಸಂಶೋಧಕ ವರ್ಗ ಆಗಮಿಸಿದ್ದರು.
===
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net