ನಾಯಕತ್ವ-ಶಿಸ್ತಿನ ಜಾಗೃತಿ

ಕೂಡ್ಲಿಗಿ ಸಪಪೂ ಕಾಲೇಜಿನಲ್ಲಿ ಸ್ಕೌಟ್ ಮತ್ತು ಗೈಡ್ಸ್ ಸಮಾವೇಶಕ್ಕೆ ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಆರ್.ಬಿ.ಬಸವರಾಜ ಚಾಲನೆ ನೀಡಿದರು. ಪ್ರಾಚಾರ್ಯೆ ಟಿ.ಕೊತ್ಲಮ್ಮ, ಸ್ಕೌಟ್ ಮತ್ತು ಗೈಡ್ಸ್ ತಾಲೂಕು ಕಾರ್ಯದರ್ಶಿ ಟಿ.ತಿಂದಪ್ಪ,  ಡಿಟಿಸಿ ಗೈಡ್ಸ್ ರೇಣುಕಾ ಇದ್ದರು.

Published on
ಕೂಡ್ಲಿಗಿ: ವಿದ್ಯಾರ್ಥಿಗಳಲ್ಲಿ ಶಿಸ್ತು ಮತ್ತು ಸೇವಾ ಮನೋಭಾವ ಮೂಡಿಸುವಲ್ಲಿ ಸ್ಕೌಟ್ ಮತ್ತು ಗೈಡ್ಸ್ ಪಾತ್ರ ಮಹತ್ತದ್ದು ಎಂದು ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಆರ್.ಬಿ.ಬಸವರಾಜ ಹೇಳಿದರು.
ಪಟ್ಟಣದ ಸಪಪೂ ಕಾಲೇಜಿನಲ್ಲಿ ಭಾರತ ಸ್ಕೌಟ್ ಮತ್ತು ಗೈಡ್ಸ್ ಸಮಾವೇಶದಲ್ಲಿ ಸೋಮವಾರ ಮಾತನಾಡಿದರು. ಬೇಡನ್ ಪೋವೆಲ್ ಅವರು ಸಮಾಜಮುಖಿ ಚಿಂತಕರಾಗಿದ್ದರು. ಸ್ಕೌಟ್ ಮತ್ತು ಗೈಡ್ಸ್ ಸ್ಥಾಪಿಸುವ ಮೂಲಕ ನಾಯಕತ್ವ ಹಾಗೂ ಶಿಸ್ತಿನ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದರು ಎಂದರು.
ಸೇವಾ ಮನೋಭಾವನೆ ಬಿಂಬಿಸುವ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಎನ್‌ಸಿಸಿಯಂತೆ ಸ್ಕೌಟ್ ಮತ್ತು ಗೈಡ್ಸ್ ಕೂಡಾ ಕ್ರೀಡೆಗಳಿಗೆ ಆದ್ಯತೆ ನೀಡುತ್ತದೆ. ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆ ಅರಿವು ಮೂಡಿಸಲು ಮುಂದಾಗಬೇಕು. ಜನರು ತೊಂದರೆಗೆ ಸಿಲುಕಿದಾಗ ಅವರಿಗೆ ನೆರವಾಗುವ ಕಾರ್ಯವನ್ನು ಸ್ಕೌಟ್ ಮತ್ತು ಗೈಡ್ಸ್ ಮಾಡಲಿದೆ ಎಂದರು.
ಸಪಪೂ ಕಾಲೇಜು ಪ್ರಾಚಾರ್ಯೆ ಟಿ.ಕೊತ್ಲಮ್ಮ, ಸ್ಕೌಟ್ ಮತ್ತು ಗೈಡ್ಸ್ ತಾಲೂಕು ಕಾರ್ಯದರ್ಶಿ ಟಿ.ತಿಂದಪ್ಪ, ಡಿಟಿಸಿ ಗೈಡ್ಸ್ ರೇಣುಕಾ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ಶಾಂತಕುಮಾರಿ, ಸರ್ವಮಂಗಳಾ, ಹನುಮೇಶ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net