ಕಂಪ್ಲಿ ಉತ್ಸವ ಪ್ರಚಾರ ವಾಹನಕ್ಕೆ ಚಾಲನೆ

ಕಂಪ್ಲಿ ಉತ್ಸವದ ಪ್ರಚಾರ ವಾಹನಕ್ಕೆ ಶಾಸಕ ಜೆ.ಎನ್.ಗಣೇಶ್ ಚಾಲನೆ ನೀಡಿದರು. ತಹಸೀಲ್ದಾರ್ ಜೂಗಲ ಮಂಜುನಾಯಕ್, ಮುಖ್ಯಾಧಿಕಾರಿ ಬಿ.ಮಲ್ಲಿಕಾರ್ಜುನ, ಪ್ರಮುಖರಾದ ಕೆ.ಶ್ರೀನಿವಾಸರಾವ್, ಎನ್.ಹಬೀಬ್‌ರೆಹಮಾನ್, ಬಿ.ಸಿದ್ದಪ್ಪ, ಆರ್.ಪಿ.ಶಶಿಕುಮಾರ್ ಇತರರಿದ್ದರು.
ಕಂಪ್ಲಿ ಉತ್ಸವದ ಪ್ರಚಾರ ವಾಹನಕ್ಕೆ ಶಾಸಕ ಜೆ.ಎನ್.ಗಣೇಶ್ ಚಾಲನೆ ನೀಡಿದರು. ತಹಸೀಲ್ದಾರ್ ಜೂಗಲ ಮಂಜುನಾಯಕ್, ಮುಖ್ಯಾಧಿಕಾರಿ ಬಿ.ಮಲ್ಲಿಕಾರ್ಜುನ, ಪ್ರಮುಖರಾದ ಕೆ.ಶ್ರೀನಿವಾಸರಾವ್, ಎನ್.ಹಬೀಬ್‌ರೆಹಮಾನ್, ಬಿ.ಸಿದ್ದಪ್ಪ, ಆರ್.ಪಿ.ಶಶಿಕುಮಾರ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವೈವಿಧ್ಯಮಯ
  • ನೆರವೇರಿಸಲು
  • ಸ್ಪರ್ಧೆ
ಕಂಪ್ಲಿ: ಉತ್ಸವದಲ್ಲಿ ತಾಲೂಕಿನ ಸಮಸ್ತ ಜನತೆ ಪಾಲ್ಗೊಳ್ಳುವಂತೆ ಕರೆ ನೀಡಲು ಪ್ರಚಾರ ವಾಹನಕ್ಕೆ ಚಾಲನೆ ನೀಡಲಾಗಿದೆ ಎಂದು ಶಾಸಕ ಜೆ.ಎನ್.ಗಣೇಶ್ ಹೇಳಿದರು.
ನಗರದ ಪುರಸಭಾಂಗಣದಲ್ಲಿ ಕಂಪ್ಲಿ ಉತ್ಸವ ಪ್ರಚಾರ ವಾಹನಕ್ಕೆ ಭಾನುವಾರ ಚಾಲನೆ ನೀಡಿ ಮಾತನಾಡಿದರು. ಉತ್ಸವದ ನಿರೂಪಣೆಗೆ ಕನ್ನಡ ಕಿರುತೆರೆ ಯಶಸ್ವಿ ನಿರೂಪಕಿ ಅನುಶ್ರೀ ಆಗಮಿಸಲಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ವ್ಯಾಪಕ ಪ್ರಚಾರ ಮಾಡಬೇಕಿದೆ. ಈ ನಿಟ್ಟಿನಲ್ಲಿ ಶಾಲಾ ಮಕ್ಕಳ ಜಾಗೃರಿ ಜಾಥಾ ಸೇರಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಕಂಪ್ಲಿ ಉತ್ಸವ ಜನೋತ್ಸವವಾಗಿ ರೂಪಿಸಲು ಸ್ಥಳೀಯ ಕಲಾವಿದರಿಗೆ ಅವಕಾಶ ನೀಡಲಾಗಿದೆ. ಮಕ್ಕಳು, ಮಹಿಳೆಯರು, ಯುವಜನತೆಗೆ ವೈವಿಧ್ಯಮಯ ಕಾರ್ಯಕ್ರಮ, ಸ್ಪರ್ಧೆಗಳನ್ನು ಆಯೋಜಿಸಲಾಗುವುದು. ಕಳೆದ ಬಾರಿಗಿಂತ ವೈವಿಧ್ಯಮಯವಾಗಿ ನೆರವೇರಿಸಲು ಸಿದ್ಧತೆ ಕೈಗೊಳ್ಳಲಾಗಿದೆ.
ತಾಲೂಕಿನ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ಉತ್ಸವ ಹಿನ್ನಲೆಯಲ್ಲಿ ಪಟ್ಟಣದ ಪ್ರಮುಖ ಬೀದಿಗಳನ್ನು, ಐತಿಹಾಸಿಕ ಸೋಮಪ್ಪ ಕೆರೆಯನ್ನು ವಿದ್ಯುತ್‌ದೀಪಗಳಿಂದ ಅಲಂಕರಿಸಲಾಗುವುದು ಎಂದರು. ತಹಸೀಲ್ದಾರ್ ಜೂಗಲ ಮಂಜುನಾಯಕ ಮಾತನಾಡಿ, ತಾಲೂಕಿನ ಎಲ್ಲ ಸರ್ಕಾರಿ ಅಧಿಕಾರಿಗಳು ಉತ್ಸವದ ಯಶಸ್ವಿಗೆ ಸಹಕರಿಸುವಂತೆ ಸೂಚಿಸಿದರು. ಉತ್ಸವದ ಕಾರ್ಯಕ್ರಮಗಳ ಪಟ್ಟಿ ತಯಾರಾಗುತ್ತಿದೆ ಎಂದು ತಿಳಿಸಿದರು.
ಪುರಸಭೆ ಮುಖ್ಯಾಧಿಕಾರಿ ಬಿ.ಮಲ್ಲಿಕಾರ್ಜುನ, ಎಪಿಎಂಸಿ ಅಧ್ಯಕ್ಷ ಎನ್.ಹಬೀಬ್‌ರೆಹಮಾನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಶ್ರೀನಿವಾಸರಾವ್, ಪ್ರಮುಖರಾದ ಬಿ.ಸಿದ್ದಪ್ಪ, ಆರ್.ಪಿ.ಶಶಿಕುಮಾರ್, ಲಡ್ಡು ಹೊನ್ನೂರವಲಿ, ಬಿ.ಜಾಫರ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net