ಈಗ ಅದೇ ಮಟ್ಟದ ಪಠ್ಯಕ್ರಮ, ಗುಣಮಟ್ಟದ ಬೋಧನೆ ಹಾಗೂ ಅತ್ಯಾಧುನಿಕ ಸೌಲಭ್ಯಗಳನ್ನು ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯವು ಹುಬ್ಬಳ್ಳಿಯಲ್ಲೇ ಒದಗಿಸುತ್ತಿದ್ದು, ಕಡಿಮೆ ವೆಚ್ಚದಲ್ಲಿ, ತಮ್ಮ ಮನೆಯ ಸಮೀಪದಲ್ಲೇ ವಿಶ್ವಮಟ್ಟದ ಶಿಕ್ಷಣವನ್ನು ಪಡೆಯುವ ಅವಕಾಶವನ್ನು ವಿದ್ಯಾರ್ಥಿಗಳಿಗೆ ಕಲ್ಪಿಸಿದೆ ಎಂದು ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಬ್ರ್ಯಾಂಡಿಂಗ್ ಮತ್ತು ಮಾರ್ಕೆಟಿಂಗ್ ನಿರ್ದೇಶಕ ಎಂ. ಎಸ್. ಕೊಲ್ಹಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 2026- 27ನೇ ಸಾಲಿನ ಪ್ರವೇಶ ಪ್ರಕ್ರಿಯೆ ಆರಂಭಗೊಂಡಿದೆ. ಮಾಹಿತಿಗಾಗಿ ಬಿ. ವಿ. ಭೂಮರಡ್ಡಿ ಕ್ಯಾಂಪಸ್, ವಿದ್ಯಾನಗರ, ಹುಬ್ಬಳ್ಳಿ ಅಥವಾ ಗೋಕುಲ ಕ್ಯಾಂಪಸ್, ಹುಬ್ಬಳ್ಳಿ 91085 41920 ಸಂಪರ್ಕಿಸಬಹುದು.