ಮಣ್ಣು ಪರೀಕ್ಷೆಗೆ ಭೂ ಸಂತ್ರಸ್ತರ ವಿರೋಧ

ಬಳ್ಳಾರಿಯ ಡಿಎಆರ್ ಮೈದಾನದಲ್ಲಿ ಕುಡುತಿನಿ ಭೂ ಸಂತ್ರಸ್ತರ ಹೋರಾಟಗಾರರನ್ನು ಬಂಧಿಸಿ ಇಡಲಾಗಿತ್ತು. ನಾನಾ ಸಂಘಟನೆಯ ಪದಾಧಿಕಾರಿಗಳಾದ ಶಿವಶಂಕರ್, ಸತ್ಯಬಾಬು, ಮಾಳಮ್ಮ, ಎಂ.ತಿಪ್ಪೇಸ್ವಾಮಿ, ಎ.ಸ್ವಾಮಿ, ತಿಮ್ಮಪ್ಪ, ಬಾವಿ ಶಿವಕುಮಾರ್, ನಾಗಲಿಂಗ ಅಚಾರ್ಯ ಇತರರಿದ್ದರು
ಬಳ್ಳಾರಿಯ ಡಿಎಆರ್ ಮೈದಾನದಲ್ಲಿ ಕುಡುತಿನಿ ಭೂ ಸಂತ್ರಸ್ತರ ಹೋರಾಟಗಾರರನ್ನು ಬಂಧಿಸಿ ಇಡಲಾಗಿತ್ತು. ನಾನಾ ಸಂಘಟನೆಯ ಪದಾಧಿಕಾರಿಗಳಾದ ಶಿವಶಂಕರ್, ಸತ್ಯಬಾಬು, ಮಾಳಮ್ಮ, ಎಂ.ತಿಪ್ಪೇಸ್ವಾಮಿ, ಎ.ಸ್ವಾಮಿ, ತಿಮ್ಮಪ್ಪ, ಬಾವಿ ಶಿವಕುಮಾರ್, ನಾಗಲಿಂಗ ಅಚಾರ್ಯ ಇತರರಿದ್ದರು
Published on

ಪ್ರಮುಖ ಮುಖ್ಯಾಂಶಗಳು

  • ಬಿಡುಗಡೆ
ಬಳ್ಳಾರಿ : ಅರ್ಸೆಲರ್ ಮಿತ್ತಲ್ ಕಂಪನಿಗಾಗಿ ಕೆಐಎಡಿಬಿ ಮೂಲಕ ಭೂ ಸ್ವಾಧೀನಪಡಿಸಿಕೊಂಡಿದ್ದ ಜಮೀನಿನಲ್ಲಿ ಜಿಂದಾಲ್ ಕಂಪನಿ ಉದ್ಯಮ ಸ್ಥಾಪನೆ ವಿರೋಧಿಸಿ, ಕುಡಿತಿನಿ ಭೂ ಸಂತಸ್ತ್ರ ಹೋರಾಟ ಸಮಿತಿ, ಪ್ರಾಂತ ರೈತ ಸಂಘ, ಸಿಐಟಿಯು, ಕನ್ನಡಪರ ಸಂಘಟನೆ ಜಂಟಿ ಸಮಿತಿಯ ಮುಖಂಡರು ತಾಲೂಕಿನ ಜಿಂದಾಲ್‌ನಲ್ಲಿ ಬುಧವಾರ ತೀವ್ರವಾದ ಹಿನ್ನೆಲೆಯಲ್ಲಿ ಹೋರಾಟಗಾರರನ್ನು ಕೆಲ ಗಂಟೆ ಬಂಧಿಸಿ ನಂತರ ಬಿಡುಗಡೆ ಮಾಡಲಾಯಿತು.
ಕುಡುತಿನಿ ಬಳಿಯಲ್ಲಿ 199 ಎಕರೆಗೂ ಅಧಿಕ ಪ್ರದೇಶವನ್ನು ಕೈಗಾರಿಕೆ ಸ್ಥಾಪನೆಗಾಗಿ 2010ರಲ್ಲಿ ಅರ್ಸೆಲರ್ ಮಿತ್ತಲ್ ಕಂಪನಿಗೆ ಕೆಐಎಡಿಬಿ ಮೂಲಕ ಭೂಸ್ವಾಧೀನ ಮಾಡಿಕೊಳ್ಳಲಾಗಿದೆ. ಅಲ್ಲದೇ, ಅತ್ಯಂತ ಕಡಿಮೆ ಭೂ ಬೆಲೆಯಲ್ಲಿ ಭೂಮಿ ವಶಪಡಿಸಿಕೊಳ್ಳಲಾಗಿದ್ದು, ರೈತರಿಗೆ ಅನ್ಯಾಯವಾಗಿದೆ ಎಂದು ರೈತರು ಸಾವಿರಕ್ಕೂ ಅಧಿಕ ದಿನಗಳಿಂದ ಹೋರಾಟ ನಡೆಸುತ್ತಿದ್ದಾರೆ.
ಸಂಡೂರು ಉಪಚನಾವಣೆಯ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಸೇರಿ ಹಲವು ಮುಖಂಡರು ಭೇಟಿ ನೀಡಿ ವೈಜ್ಞಾನಿಕ ಭೂ ಬೆಲೆ ಕೊಡಿಸುವುದಾಗಿ ಭರವಸೆ ನೀಡಿದ್ದರು. ಇದರ ಬೆನ್ನಲ್ಲೇ ಇಲ್ಲಿ ಕೈಗಾರಿಗೆ ಸ್ಥಾಪನೆ ಮಾಡಲು ಹಿಂದೇಟು ಹಾಕಿದ ಅರ್ಸೆಲರ್ ಮಿತ್ತಲ್ ಆಂಧ್ರದಲ್ಲಿ ಹೂಡಿಕೆ ಮಾಡಿದೆ. ಈಗ ಮಿತ್ತಲ್ ಕಂಪನಿ ತ್ಯಜಿಸಿದ ಭೂಮಿಯಲ್ಲಿ ಜಿಂದಾಲ್ ಮತ್ತು ಜಪಾನ್ ಮೂಲದ ಜೆಎಫ್‌ಇ ಎಲೆಕ್ಟ್ರಿಕಲ್ ಸ್ಟೀಲ್ ಪ್ರವೈಟ್ ಲಿಮಿಟೆಡ್ ಕಂಪನಿ ಸಹಬಾಗಿತ್ವದಲ್ಲಿ ಈಗ ಇಲ್ಲಿ ಉದ್ಯಮ ಸ್ಥಾಪನೆ ಮಾಡಲು ಹೊರಟಿದೆ. ಕೋಲ್ಡ್ ರೋಲ್ಡ್ ಗ್ರೈನ್ ಓರಿಯಂಟೆಡ್(ಸಿಆರ್‌ಜಿಒ) ಎಲೆಕ್ಟ್ರಿಕಲ್ ಸ್ಟೀಲ್ ಘಟಕ ಸ್ಥಾಪನೆಗೆ ಮುಂದಾಗಿದೆ. ಇದಕ್ಕಾಗಿ ಮಣ್ಣು ಪರೀಕ್ಷೆ ನಡೆಸಲು ಜಪಾನ್ ನಿಯೋಗ ಬುಧವಾರ ಆಗಮಿಸಿತ್ತು. ಜಿಂದಾಲ್‌ನ ಮುಖ್ಯಸ್ಥರು, ಜಿಲ್ಲಾಡಳಿತದ ಅಧಿಕಾರಿಗಳ ಜತೆ ಕುಡುತಿನಿ ಸಮೀಪದ ಕೆಐಡಿಬಿ ವಶಪಡಿಸಿಕೊಂಡ ಜಮೀನಿನಲ್ಲಿ ಮಣ್ಣು ಪರೀಕ್ಷೆಗೆ ಒಳ ಹೋಗಿದ್ದರು. ಈ ವೇಳೆ ಕುಡಿತಿನಿ ಭೂ ಸಂತ್ರಸ್ತರು ಅಡ್ಡಿಪಡಿಸಿ ಹೋರಾಟತೀವ್ರಗೊಳಿಸಿದರು. ನೂರಾರು ಸಂಖ್ಯೆಯಲ್ಲಿ ಹೋರಾಟಗಾರರು ಜಮಾಯಿಸಿದ್ದರಿಂದ ಜಿಂದಾಲ್ ಗೇಟ್ ನಂ.1ರ ಬದಲಾಗಿ ಪರ್ಯಾಯ ಮಾರ್ಗದ ಮೂಲಕ ಜಪಾನ್ ಮೂಲದ ಕಂಪನಿ ಮುಖ್ಯಸ್ಥರನ್ನು ಒಳ ಕರೆದುಕೊಂಡು ಹೋಗಿದ್ದರು. ಇದಕ್ಕೆ, ಪ್ರತಿರೋಧ ವ್ಯಕ್ತಪಡಿಸಿದ ಹೋರಾಟಗಾರರು ಎಡಿಸಿ ಮಹ್ಮದ್ ಜುಬೇರ್ ಅವರನ್ನು ಸುತ್ತುವರಿದು ಆಕ್ರೋಶ ಹೊರ ಹಾಕಿದರು. ಎಎಸ್ಪಿ ನವೀನ್ ಕುಮಾರ್, ಡಿವೈಎಸ್ಪಿ ಗೋಖಲೆ ಸೇರಿ ಹಲವು ಪೊಲೀಸರು ನಿಯಂತ್ರಿಸಲು ಯತ್ನಿಸಿದರೂ ಪ್ರತಿಭಟನಾಕಾರರನ್ನು ತಡೆಯಲಿಲ್ಲ. ಹೀಗಾಗಿ ಪ್ರತಿಭಟನಾಕಾರರನ್ನು ಬಂಧಿಸಿ ಬಳ್ಳಾರಿಯ ಡಿಎಆರ್ ಮೈದಾನಕ್ಕೆ ಕರೆ ತರಲಾಯಿತು. ಕೆಲ ಹೊತ್ತಿನ ಬಳಿಕ ಬಿಡುಗಡೆ ಮಾಡಲಾಯಿತು. ವಾಹನದಲ್ಲಿ ಕರೆ ತರುವ ವೇಳೆ ಹೋರಾಟಗಾರರು ಸರ್ಕಾರ ವಿರುದ್ಧ ಘೋಷಣೆ ಕೂಗಿ ಬಾಯಿ ಬಾಯಿ ಬಡಿದುಕೊಂಡು ಅಕ್ರೋಶ ಹೊರಹಾಕಿದರು. ಏ.4ರಂದು ಕಂಪನಿಯ ಮಾಲೀಕರು, ಹೋರಾಟಗಾರರು ಹಾಗೂ ಜಿಲ್ಲಾಡಳಿತ ನಡುವೆ ಸಭೆ ಕರೆಯಲಾಗಿದೆ. ಸಭೆಯ ನಂತರ ಮುಂದಿನ ಹೋರಾಟದ ಬಗ್ಗೆ ಚರ್ಚಿಸಲಾಗುವುದು ಎಂಬುದಾಗಿ ಹೋರಾಟಗಾರರೊಬ್ಬರು ತಿಳಿಸಿದರು.
===
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net