ಭೂಮಿ ಸರ್ವೇಗೆ ಭೂ ಸಂತ್ರಸ್ತರ ವಿರೋಧ

ಬಳ್ಳಾರಿ ತಾಲೂಕಿನ ಕುಡುತಿನಿ ಬಳಿ ಕೈಗಾರಿಕೆ ನೀಡಿರುವ ಭೂಮಿಗೆ ನ್ಯಾಯಯುತ ಬೆಲೆ ಒದಗಿಸುವವರೆಗೆ ಭೂಮಿ ಸರ್ವೇ ನಡೆಸಬಾರದು ಎಂದು ಭೂ ಸಂತ್ರಸ್ತ ರೈತರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮೆರವಣಿಗೆ ನಡೆಸಿದರು. ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷ ಯು.ಬಸವರಾಜ, ಭೂ ಸಂತ್ರಸ್ತ ರೈತರಾದ ತಿಪ್ಪೇಸ್ವಾಮಿ, ಯಶವಂತ, ಶಾಂತರಾಮ್, ಮಲ್ಲಮ್ಮ, ಸಂಪತ್, ಅನುಮೇಶಿ ಇತರರಿದ್ದರು.
ಬಳ್ಳಾರಿ ತಾಲೂಕಿನ ಕುಡುತಿನಿ ಬಳಿ ಕೈಗಾರಿಕೆ ನೀಡಿರುವ ಭೂಮಿಗೆ ನ್ಯಾಯಯುತ ಬೆಲೆ ಒದಗಿಸುವವರೆಗೆ ಭೂಮಿ ಸರ್ವೇ ನಡೆಸಬಾರದು ಎಂದು ಭೂ ಸಂತ್ರಸ್ತ ರೈತರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮೆರವಣಿಗೆ ನಡೆಸಿದರು. ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷ ಯು.ಬಸವರಾಜ, ಭೂ ಸಂತ್ರಸ್ತ ರೈತರಾದ ತಿಪ್ಪೇಸ್ವಾಮಿ, ಯಶವಂತ, ಶಾಂತರಾಮ್, ಮಲ್ಲಮ್ಮ, ಸಂಪತ್, ಅನುಮೇಶಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವಿರೋಧ
ಬಳ್ಳಾರಿ : ತಾಲೂಕಿನ ಕುಡುತಿನಿ ಬಳಿ ಕೈಗಾರಿಕೆ ಉದ್ದೇಶಕ್ಕೆ ನೀಡಿರುವ ಸಾವಿರಾರು ಎಕರೆ ಭೂಮಿಗೆ ನ್ಯಾಯಯುತ ಪರಿಹಾರ ಒದಗಿಸುವವರೆಗೆ ಕೆಐಎಡಿಬಿಯೂ ಸರ್ವೇ ನಡೆಸಬಾರದು ಎಂಬುದಾಗಿ ಆಗ್ರಹಿಸಿ, ಪ್ರತಿಭಟಿಸುತ್ತಿದ್ದ ಭೂ ಸಂತ್ರಸ್ತ ರೈತರನ್ನು ಪೊಲೀಸರು ಬಂಧಿಸಿ ಕಂಪ್ಲಿಗೆ ಕರೆದುಕೊಂಡು ಹೋಗಲಾಯಿತು.
ಪ್ರತಿಭಟನೆಯಲ್ಲಿ ನಿರತ ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷ ಯು.ಬಸವರಾಜ ಮಾತನಾಡಿ, ಆರ್ಸೆಲರ್ ಮಿತ್ತಲ್ ಕಂಪನಿಗಾಗಿ 2012ರಲ್ಲಿ ಕೆ ಐಎಡಿಬಿ ಸ್ವಾಧೀನ ಪಡಿಸಿಕೊಂಡು ಈವರೆಗೆ ಉಪಯೋಗಿಸದೆ ಇದ್ದ ರೈತರ ಜಮೀನುಗಳನ್ನು ಅಕ್ರಮವಾಗಿ ಜಿಂದಾಲ್ ಕಂಪನಿಗೆ ಕಳ್ಳತನದಲ್ಲಿ ಮಾರಾಟ ಮಾಡಿದೆ. ಇದರ ಜತೆಗೆ ಜಿಂದಾಲ್ ಕಂಪನಿಗೆ ಜಮೀನನ್ನು ವರ್ಗಾವಣೆ ಮಾಡಬೇಕು ಎಂದು ಕೆಐಎಡಿಬಿ ಪಟ್ಟು ಹಿಡಿದಿರುವುದನ್ನು ಖಂಡಿಸಿದೆ. ಸರ್ಕಾರ ರೈತರ ವಿರುದ್ಧ ಕುಮ್ಮಕ್ಕು ನೀಡಿ, ಪೊಲೀಸರನ್ನು ದೊಡ್ಡ ಪ್ರಮಾಣದಲ್ಲಿ ಬಳಸಿ ಹೋರಾಟವನ್ನು ಹತ್ತಿಕ್ಕಲು ಯತ್ನಿಸಿದೆ ಎಂದರು.
ಜಿಂದಾಲ್ ಕಂಪನಿಗೆ ಹೇಗಾದರೂ ಮಾಡಿ ಭೂಮಿಯನ್ನು ಸರ್ವೇ ಮಾಡಿಕೊಡಬೇಕೆಂದು ಹಠತೊಟ್ಟಿರುವ ಕೆಐಎಡಿಬಿ ವಾದ ಪುಷ್ಠಿಕರಿಸಿ, ಏ.27ರಿಂದ ಮೇ.7ರವರೆಗೆ ಎಸಿ ಹೊರಡಿಸಿರುವ ಬಿಎನ್‌ಎಸ್ ನಿಷೇಧಾಜ್ಞೆಯು ರಾಜ್ಯ ಸರ್ಕಾರದ ಪ್ರವೃತ್ತಿಗೆ ಹಾಗೂ ಪೊಲೀಸ್ ಬಳಸಿ ಶಾಂತಿಯುತ ಹೋರಾಟ ಹತ್ತಿಕ್ಕುವ ಸರ್ವಾಧಿಕಾರಿ ನಡವಳಿಕೆಗೆ ಸಾಕ್ಷಿಯಾಗಿದೆ. ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದ ರೈತರು ಹಾಗೂ ಮಹಿಳೆಯರನ್ನು ಬಂಧಿಸಿರುವುದು ಖಂಡನೀಯವಾಗಿದೆ.
ರಾಜ್ಯ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಕೆ ಐಎಡಿಬಿ ಜಿಂದಾಲ್ ಕಂಪನಿ ಜತೆ ಮಾಡಿಕೊಂಡಿರುವ ಅಕ್ರಮವಾದ ಜಮೀನು ಪರಭಾರೆಯನ್ನು ರದ್ದುಪಡಿಸಬೇಕು. ಸುಪ್ರೀಂ ಕೋರ್ಟ್ ತೀರ್ಪಿನಂತೆ ನ್ಯಾಯಯುತ ಪರಿಹಾರ ಒದಗಿಸಿ ಕೈಗಾರಿಕೆಗಳನ್ನು ಸ್ಥಾಪಿಸಬೇಕು ಅಥವಾ ರೈತರಿಗೆ ಭೂಮಿಗಳನ್ನು ವಾಪಾಸ್ ನೀಡಬೇಕು. ಬಂಧನ ಮಾಡಿರುವ ಎಲ್ಲರನ್ನೂ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದರು.
ಜಿಂದಾಲ್ ಕಂಪನಿಗೆ ನೀಡಿರುವ 900 ಎಕರೆ ಪ್ರದೇಶವನ್ನು ಕೆಐಎಡಿಬಿಯೂ ಸರ್ವೇ ನಡೆಸುತ್ತಿರುವದರ ಬಗ್ಗೆ ಮಾಹಿತಿ ತಿಳಿದ ಭೂ ಸಂತ್ರಸ್ತ ರೈತರು ಹಾಗೂ ನಾನಾ ಸಂಘಟನೆ ಮುಖಂಡರು ಸ್ಥಳಕ್ಕೆ ತೆರಳಲು ಮುಂದಾದಗ ಪೊಲೀಸರು ಮಧ್ಯೆದಲ್ಲಿ ತಡೆದು ನೂರಕ್ಕೂ ಅಧಿಕ ರೈತರು ಹಾಗೂ ಮಹಿಳೆಯರನ್ನು ಬಂಧಿಸಿದರು. ಬಳಿಕ ಕೆಕೆಆರ್‌ಟಿಸಿ ಬಸ್ ಹಾಗೂ ಪೊಲೀಸ್ ವಾಹನದಲ್ಲಿ ಕಂಪ್ಲಿಗೆ ಕರೆದುಕೊಂಡು ಹೊರಟರು. ವಾಹನದಲ್ಲಿ ಪ್ರತಿಭಟನ ನಿರತ ಮಹಿಳೆಯರು ಬಾಯಿ ಬಡಿದುಕೊಂಡು ನ್ಯಾಯ ಒದಗಿಸಿ ಎಂದು ಘೋಷಣೆ ಕೂಗಿದರು. ಇದೇ ವೇಳೆ ಓರ್ವ ರೈತ ಮುಖಂಡ, ಮಹಿಳೆಯೊಬ್ಬರು ಅಸ್ತವ್ಯಸ್ತಗೊಂಡ ಪರಿಣಾಮ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಯಿತು.
===
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net