ಬಳ್ಳಾರಿ : ನಕಲಿ ದಾಖಲೆಗಳನ್ನು ಸೃಷ್ಟಿಸಿ 14.01 ಎಕರೆ ಕೃಷಿ ಭೂಮಿಯನ್ನು ಕಬಳಿಸಿ ಆರೋಪದಡಿ ಮೂವರ ವಿರುದ್ಧ ದೂರು ದಾಖಲಾಗಿದೆ.
ನಗರದ ಪರಮೇಶ್ ಕೆ., ಬಸವರಾಜ್ ವೈ., ರೇವಣಸಿದ್ದಪ್ಪ ಆರೋಪಿತರು. ಆರೋಪಿಗಳು ಮೃತ ಪತಿಯ ಹೆಸರಿನ ಜಮೀನಿಗೆ ನಕಲಿ ಒಪ್ಪಂದ ಪತ್ರ ಹಾಗೂ ಸಹಿ ಸೃಷ್ಟಿಸಿ ನ್ಯಾಯಾಲಯದ ಆದೇಶವಾಗಿರುವಂತೆ ಬಿಂಬಿಸಿ ನೋಂದಣಿ ಮಾಡಿಸಿಕೊಂಡಿದ್ದಾರೆ. ಈ ಕುರಿತು ಮಂಗಳಗೌರಿ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.