ಭೂ ಕಬಳಿಕೆ ಯತ್ನ, ಇಬ್ಬರ ವಿರುದ್ಧ ದೂರು

ಭೂ ಕಬಳಿಕೆ ಯತ್ನ, ಇಬ್ಬರ ವಿರುದ್ಧ ದೂರು
ಭೂ ಕಬಳಿಕೆ ಯತ್ನ, ಇಬ್ಬರ ವಿರುದ್ಧ ದೂರು
Published on

ಪ್ರಮುಖ ಮುಖ್ಯಾಂಶಗಳು

  • ಪೊಲೀಸ್
ಬಳ್ಳಾರಿ : ಇಲ್ಲಿನ ರೂಪನಗುಡಿ ರಸ್ತೆಯ ಗ್ರಾೃಂಡ್ ಫಂಕ್ಷನ್ ಹಾಲ್ ಮುಂಭಾಗದ 2 ಎಕರೆ 70 ಸೆಂಟ್ಸ್‌ಗಳ ವಕ್ಫ್ ಆಸ್ತಿಗೆ ನಕಲಿ ದಾಖಲೆ ಸೃಷ್ಠಿಸಿ ಹಾಗೂ ಅದೇ ದಾಖಲೆಗಳನ್ನು ಪಾಲಿಕೆಗೆ ಸಲ್ಲಿಸಿ ನಮೂನೆ -2 ಪಡೆಯಲು ಪ್ರಯತ್ನಿಸಿದ ಆರೋಪದಡಿ ಪಾಲಿಕೆ ಅಧಿಕಾರಿ ಸೇರಿ ಇಬ್ಬರ ವಿರುದ್ಧ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರದ ನಿವಾಸಿ ಗೋವಿಂದರಾಜು, ಪಾಲಿಕೆ ವಲಯ -1ರ ಆಯುಕ್ತ ಗುರುರಾಜ್ ಸೌದಿ ಆರೋಪಿತರು. ಇಲ್ಲಿನ ಕೋರ್ಟ್ ಮೊಹಲ್ಲಾ ಮಸೀದಿಗೆ ಸೇರಿದ ಈ ಆಸ್ತಿಗೆ ನಮೂನೆ 2ಗೆ ಕೋರಿ ಗೋವಿಂದರಾಜ ಎಂಬಾತ ಫೆ.2ರಂದು ಪಾಲಿಕೆಗೆ ಅರ್ಜಿ ಸಲ್ಲಿಸಿದ್ದ. ಈ ದಾಖಲೆಗಳನ್ನು ಪರಿಶೀಲಿಸಿದಾಗ ಜಮೀನು ಕೋರ್ಟ್ ಮೊಹಲ್ಲಾ ಮಸೀದಿ ಹೆಸರಲ್ಲಿರುವುದು ಬಹಿರಂಗವಾಗಿದೆ. ಜತೆಗೆ ಜಮೀನು ಪಡೆಯಲಾಗಿರುವ ನಕ್ಷೆಯು ಅನುಮೋದನೆಗೊಳ್ಳದಿರುವುದು, ನಕ್ಷೆಯನ್ನು ಹಿಂಪಡೆದಿರುವುದೂ ತಿಳಿದಿದೆ. ಈ ಜಮೀನಿಗೆ ನಮೂನೆ 2 ಹಾಗೂ ಮ್ಯುಟೇಷನ್‌ಗಳನ್ನು ಮಾಡಬಾರೆದೆಂದು ಪಾಲಿಕೆಗೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಪಾಲಿಕೆ ಅಧಿಕಾರಿಗಳು ದೂರು ನೀಡಿದ್ದಾರೆ.
==
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net