ನಾನು ಕೂಡ್ಲಿಗಿ ತಾಲೂಕಿಗೆ 2ಬಾರಿ ಬಂದಿರುವೆ. ಇಲ್ಲಿನ ರೈತರು ಮಳೆಯನ್ನೇ ನಂಬಿ ಜೀವನ ಮಾಡುತ್ತಾರೆ . ಇಲ್ಲಿ ವಾರ್ಷಿಕ ಮಳೆ ಕಡಿಮೆ ಪ್ರಮಾಣ ಬರುತ್ತದೆ ಆ ನೀರನ್ನು ಸಂಗ್ರಹಿಸುವ ಉದ್ದೇಶದಿಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಿಎಸ್‌ಆರ್ ನಿಧಿಯಿಂದ 2ಕೋಟಿ ರೂ.ಗಳಲ್ಲಿ ಸಣ್ಣ ನೀರಾವರಿ ಇಲಾಖೆಯ ಸಹಯೋಗದೊಂದಿಗೆ ತಾಲೂಕಿನ ಗುಂಡುಮುಣುಗು, ಮಹದೇವಪುರ, ಹುಲಿಕುಂಟೆ, ಹಾಗೂ ಗುಡೇಕೋಟೆ ಬಳಿಯ ಸರ್ವೋದಯ ಕೆರೆಗಳ ಅಭಿವೃದ್ಧಿಗೆ ಈ ನಿಧಿ ಬಳಿಸಿಕೊಂಡು ಕೆರೆಗಳ ಏರಿ ಸ್ವಚ್ಛತೆ, ಸೇರಿದಂತೆ ಕೆರೆಗಳ ಪುನಶ್ಚೇತನ ಕಾಮಗಾರಿ ಮಾಡಲಾಗುವುದು ಎಂದರು.