ಭೂ ಸಂತ್ರಸ್ತರ ಈ ಹೋರಾಟಕ್ಕೆ ಜಿಲ್ಲೆಯ ನಾನಾ ಪ್ರಮುಖ ಸಂಘಟನೆಗಳು ಸಾಥ್ ನೀಡಿದವು. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಎಐಕೆಕೆಎಂಎಸ್, ಸಿಐಟಿಯು , ಡಿವೈಎಫ್‌ಐ, ಎಐಯುಟಿಸಿ , ಕರ್ನಾಟಕ ಪ್ರಾಂತ ರೈತ ಸಂಘ , ಸಿಪಿಎಂ ಸೇರಿದಂತೆ ಕನ್ನಡ ಪರ ರೈತ ಸಂಘಟನೆಗಳು ಭಾಗವಹಿಸಿ ಬಂದ್‌ಗೆ ಬೆಂಬಲ ನೀಡಿದವು. ಪ್ರತಿಭಟನೆಯಲ್ಲಿ ಮಹಿಳೆಯರು, ಯುವಕರು ಹಾಗೂ ವೃದ್ಧರು ಭಾಗವಹಿಸಿ ಕೆಐಎಡಿಬಿ ಹಾಗೂ ಸರ್ಕಾರದ ವಿರುದ್ಧ ಪೊಸ್ಟರ್‌ಗಳು ಪ್ರದರ್ಶಿಸಿದರು. ನಾನಾ ಸಂಘಟನೆಯ ಪ್ರಮುಖರಾದ ಆರ್.ಮಾಧವರೆಡ್ಡಿ, ಜೆ.ಸತ್ಯಬಾಬು, ಟಿ.ದೇವದಾಸ್, ಸುರೇಶ್, ಆರ್ಕಾಣಿ, ಪ್ರಮೋದ್, ಈರಣ್ಣ, ಗುರಳ್ಳಿ ರಾಜ, ತಿಪ್ಪೇಸ್ವಾಮಿ, ಯು.ಬಸವರಾಜ್, ಕೆ.ಕೃಷ್ಣಪ್ಪ, ಯು.ವೀರೇಶ್ ಇತರರಿದ್ದರು.